ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚರಿಸುವಾಗಲೇ ಟೈರ್ ಬ್ಲಾಸ್ಟ್ ಆಗಿ ಚಕ್ರದ ಮೇಲ್ಬಾಗದ ಸೀಟಿನಲ್ಲಿ ಕುಳಿತ್ತಿದ್ದ ಇಬ್ಬರು ಪ್ರಯಾಣಿಕರಿಗೆ ಕೈ ಮತ್ತು ಕಾಲಿಗೆ ಪೆಟ್ಟಾಗಿರುವ ಘಟನೆ ನಡೆದಿದೆ.
ನಿನ್ನೆ ಬೆಳಿಗ್ಗೆ 9-30 ಕ್ಕೆ ವೈಟ್ ಫೀಲ್ಡ್ ಬಳಿಯ ಕೆಟಿಪಿಓ ಬಸ್ ಸ್ಟ್ಯಾಂಡ್ ಬಳಿ ರೂಟ್ ನಂ- 500 CA/A ಬಸ್ ನಂಬರ್- KA- 57 F3414 ಡಿಪೋ- 33 ಎಜಿಎಸ್ ಲೇಔಟ್ ಹರೇಹಳ್ಳಿಗೆ ಸೇರಿದ ಬಸ್ ಆಗಿದ್ದು,ಐಟಿಪಿಎಲ್ ನಿಂದ ಸಿಲ್ಕ್ ಬೋರ್ಡ್ ಗೆ ಸಂಚಾರ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಬಸ್ ಹಿಂಬಾಗದ ಚಕ್ರ ಬ್ಲಾಸ್ಟ್ ಆಗಿದ್ದು. ಹಿಂಬಾಗದ ಸೀಟ್ನಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದೆ.
ಉತ್ತರ ಪ್ರದೇಶ ಮೂಲದ ಕುಮಾರ್ ಅಜಯ್ ಮತ್ತು ಜಿತೇಂದ್ರ ಎಂಬುವವರಿಗೆ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ. ಇಬ್ಬರು ಪ್ರಯಾಣಿಕರನ್ನು ವೈದೇಹಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.