ಬೆಂಗಳೂರು: ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಬಿಎಂಟಿಸಿ ಏಳು ಜನ ಅಧಿಕಾರಿಗಳನ್ನ ಅಮಾನತುಗೊಳಿಸಿ ಆದೇಶ ನೀಡಲಾಗಿದೆ.
ಚಾಲಕ, ನಿರ್ವಾಹಕರ ಬಳಿ ಲಂಚಾವತಾರ ನಡೆಸುತ್ತಿದ್ದ ಡಿಪೋ ಮ್ಯಾನೇಜರ್ ಗಳು ನೌಕರರು ರಜೆ ಬೇಕು ಅಂದ್ರೆ ಬಿಎಂಟಿಸಿ ಅಧಿಕಾರಿಗಳಿಗೆ ಲಂಚ ಕೊಡಲೇಬೇಕು ಬೇಕಾದ ರೂಟ್, ರಜೆ, ಶಿಫ್ಟ್ ಬೇಕಾದ್ರೆ ಡಿಪೋ ಅಧಿಕಾರಿಗಳ ಜೇಬು ತುಂಬಿಸಬೇಕಿತ್ತುಈ ಹಿನ್ನೆಲೆಯಲ್ಲಿ ಬಿಎಂಟಿಸಿಯ 7 ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿ ಬಿಎಂಟಿಸಿ ಎಂಡಿ ಆದೇಶ
ಸಾಕಷ್ಟು ದಿನಗಳಿಂದ ಕೇಳಿಬರ್ತಿದ್ದ ಲಂಚದ ಆರೋಪ ಇದೀಗ ನೌಕರರ ಬಳಿ ಲಂಚ ತೆಗೆದುಕೊಂಡಿದ್ದ ಅಧಿಕಾರಿಗಳ ತಲೆದಂಡ ಏಳು ಜನ ಅಧಿಕಾರಿಗಳನ್ನ ಅಮಾನತುಗೊಳಿಸಿ ಆದೇಶ ವಿಚಾರಣಾ ಇತ್ಯರ್ಥಪೂರ್ವ ಅಮಾನತುಗೊಳಿಸಿ ಆದೇಶ ನೀಡಲಾಗಿದ್ದು ಸಿಬ್ಬಂದಿ ಮೇಲ್ವಿಚಾರಕಿ, ಕಿರಿಯ ಸಹಾಯಕರು ಸೇರಿದಂತೆ 7 ಜನ ಅಧಿಕಾರಿಗಳ ಅಮಾನತು ಮಾಡಲಾಗಿದೆ. ಡಿಪ್ಪೋ ನಂ. 27ರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳು
ಯಾವ ಅಧಿಕಾರಿಗಳು ಅಮಾನತ್ತು?
ಡಿಪೋ ನಂ 27 ರ 7 ವಿವಿಧ ಹುದ್ದೆಯ ಅಧಿಕಾರಿಗಳು ಅಮಾನತ್ತು
1. ಮಂಜುಳಾ.ಆರ್- ಸಿಬ್ಬಂದಿ ಮೇಲ್ವಿಚಾರಕಿ
2. ಪ್ರೀತಮ್, ಕಿರಿಯ ಸಹಾಯಕ
3. ಮನೋಜ್ ಕುಮಾರ್ ಎಲ್.ಎಸ್- ಕಿರಿಯ ಸಹಾಯಕ
4. ಧನಂಜಯ. ವಿ- ಸಹಾಯಕ ಲೆಕ್ಕಿಗ
5.ಸುಮ.ಎ- ಕಿರಿಯ ಸಹಾಯಕಿ
6. ಶಾಂತವ್ವ- ಕಿರಿಯ ಸಹಾಯಕಿ
7. ದೇವರಾಜ್.ಜಿ- ಸಹಾಯಕ ಕುಶಲಕರ್ಮಿ
ಆಗಿದ್ದೇನು..?
*ರೂಟ್ ಬೇಕು, ರಜೆ ಬೇಕು, ಶಿಫ್ಟ್ ಬೇಕಿದ್ದು ಹಾಕಿಸಿಕೊಳ್ಳಬೇಕು ಅಂದ್ರೆ ಅಧಿಕಾರಿಗಳಿಗೆ ಲಂಚ ಕೊಡಬೇಕಿತ್ತು
*ಇದ್ರ ವಿರುದ್ದ ಸಾಕ್ಷಿ ಸಮೇತ ವರದಿ ಬಿತ್ತರಿಸಿದ್ದ ಮಾಧ್ಯಮಗಳು
*ಇದ್ರ ಬೆನ್ನಲ್ಲೇ ಎಚ್ಚೆತ್ತುಕೊಂಡು ತನಿಖೆಗೆ ಆದೇಶಿಸಿದ್ದ ಅಂದಿನ ಬಿಎಂಟಿಸಿ ಎಂಡಿ ಸತ್ಯವತಿ
*ತನಿಖೆ ವೇಳೆ ಅಧಿಕಾರಿಗಳು ಹಣ ಪಡೆದಿರೋದು ಸಾಭೀತು
* ತಮ್ಮ ಉಳಿತಾಯ ಖಾತೆಗೆ ಪೋನ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದ ಅಧಿಕಾರಿಗಳು
*ಡಿಜಿಟಲ್ ಹಣ ವ್ಯವಹಾರ ಮಾಡಿದ್ದ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಆದೇಶಿಸಿದೆ