ಬೆಂಗಳೂರು: ಮಾಲಿನ್ಯಮುಕ್ತ ಬೆಂಗಳೂರು ನಡೆಗೆ ಬಿಎಂಟಿಸಿ ದಿಟ್ಟ ಹೆಜ್ಜೆ ಇಟ್ಟಿದ್ದು ಬಿಎಂಟಿಸಿಗೆ ಮತ್ತಷ್ಟು ಎಲೆಕ್ಟ್ರಿಕ್ ಬಸ್ ಗಳು ಬರಲಿದ್ದು ಇಂದು ಟಾಟಾ ಕಂಪನಿಯ ಎಲೆಕ್ಟ್ರಿಕ್ ಬಸ್ ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಚಾಲನೆ ನೀಡಿದರು. ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಟಾಟಾ ಕಂಪನಿಯ 921 ಇವಿ ಬಸ್ ಗಳು ಶೀಘ್ರವೇ ಆಗಮನವಾಗಲಿದ್ದು ಫೇಮ್ 2 ಯೋಜನೆಯಡಿ 921 ಬಸ್ ಇನ್ನೂ ಮೂರು ತಿಂಗಳಿನಲ್ಲಿ ಸೇವೆಗೆ ಹಾಜರಾಗಲಿವೆ. ಇಲ್ಲಿಯವರೆಗೆ 390 ಎಲೆಕ್ಟ್ರಿಕ್ ಬಸ್ ಬಿಎಂಟಿಸಿ ಆಗಮನವಾಗಿದ್ದು ಇದೀಗ 921 ಬಸ್ ಟಾಟಾ ಕಂಪನಿ ಇವಿ ಬಸ್ ಆಗಮನವಾಗಿದೆ.ಪ್ರೋಟೋಟೈಪ್ ಬಸ್ ಗೆ ಸಚಿವ ರಾಮಲಿಂಗ ರೆಡ್ಡಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಾಯಿತು.