ಬಾಲಿವುಡ್ ಹ್ಯಾಂಡ್ ಸಮ್ ಹೀರೋ ನಟ ಅರ್ಜುನ್ ಕಪೂರ್ ಸಿನಿಮಾಗಳಿಗಿಂತ ಹೆಚ್ಚಾಗಿ ಮಲೈಕಾ ಅರೋರಾ ಜೊತೆಗಿನ ರಿಲೇಷನ್ಶಿಪ್ ವಿಷ್ಯ ಹೆಚ್ಚೆಚ್ಚು ಸುದ್ದಿಯಾಗಿದ್ದಾರೆ. ಸಿನಿಮಾ ಕುಟುಂಬದಲ್ಲಿ ಜನಿಸಿದ್ರು ಅರ್ಜುನ್ ಕಪೂರ್ ಗೆ ಹೇಳಿಕೊಳ್ಳುವಂತ ಯಶಸ್ಸು ಸಿಗಲಿಲ್ಲ. ಆದರೆ ಈ ಮಧ್ಯೆ ಅರ್ಜುನ್ ಕಪೂರ್ ಬಡ ಹುಡುಗಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿರುವ ಅನಿಶಾ ರಾವತ್ ಎಂಬ ಬಡ ಹುಡುಗಿಗೆ ಸಹಾಯ ಮಾಡಲು ಅರ್ಜುನ್ ಕಪೂರ್ ಮುಂದೆ ಬಂದಿದ್ದಾರೆ. ಸದ್ಯ ಅನಿಶಾಗೆ 11 ವರ್ಷ ವಯಸ್ಸಾಗಿದ್ದು, ಆಕೆಗೆ 18ರ ವರ್ಷ ಆಗುವ ತನಕ ಕ್ರಿಕೆಟ್ ತರಬೇತಿಗೆ ಬೇಕಾಗುವ ಎಲ್ಲ ಸಾಮಾಗ್ರಿಗಳನ್ನು ಅರ್ಜುನ್ ಕಪೂರ್ ಪೂರೈಸುವುದಾಗಿ ತಿಳಿಸಿದ್ದಾರೆ.
ಪ್ರಸಿದ್ಧ ಕ್ರಿಕೆಟರ್ ಆಗಬೇಕು ಎಂಬುದು ಅನಿಶಾ ಆಸೆ. ಅದಕ್ಕಾಗಿ ಪ್ರತಿ ದಿನ 80 ಕಿಲೋ ಮೀಟರ್ ಪ್ರಯಾಣ ಮಾಡಿ ಆಕೆ ತರಬೇತಿ ಪಡೆಯುತ್ತಿದ್ದಾಳೆ. ಅವಳ ಕನಸನ್ನು ನನಸು ಮಾಡಲು ಆಕೆಯ ತಂದೆ ಕೂಡ ಸಕಲ ಸಹಕಾರ ನೀಡುತ್ತಿದ್ದಾರೆ. ಆದರೆ ಬೇಕಾಗಿರುವ ಸಾಮಾಗ್ರಿಗಳನ್ನು ಒದಗಿಸಲು ಅವರಿಗೆ ಕಷ್ಟ ಆಗುತ್ತಿದೆ. ಈಗ ಅರ್ಜುನ್ ಕಪೂರ್ ಸಹಾಯ ಹಸ್ತ ಚಾಚಿರುವುದರಿಂದ ಅನಿಶಾ ಕನಸಿಗೆ ಸಾಥ್ ಸಿಕ್ಕಿದೆ. ಅನಿಶಾ 10ನೇ ವಯಸ್ಸಿನಲ್ಲಿ ಆಕೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಪರವಾಗಿ ಅಂಡರ್-15 ಮಹಿಳಾ ತಂಡದಲ್ಲಿ ಕ್ರಿಕೆಟ್ ಆಡಿದ್ದಾಳೆ. ಮೂರು ಹಾಫ್ ಸೆಂಚುರಿ ಬಾರಿಸಿದ್ದಾಳೆ. ಪ್ರಸ್ತುತ ಎಂಐಜಿ ಕ್ಲಬ್ ಪರವಾಗಿ ಓಪನಿಂಗ್ ಬ್ಯಾಟರ್ ಆಗಿ ಆಡುತ್ತಿದ್ದಾಳೆ. ಇದೀ ಅನಿಶಾ ಸಹಾಯಕ್ಕೆ ಅರ್ಜುನ್ ಕಪೂರ್ ಮುಂದಾಗಿದ್ದು ಇದನ್ನು ನಟನ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.