ಕಳೆದ ಕೆಲ ದಿನಗಳಿಂದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ತಮ್ಮ ಮಾಜಿ ಪತ್ನಿಯ ವಿಚಾರಗಳಿಂದಲೇ ಹೆಚ್ಚು ಹೆಚ್ಚು ಸುದ್ದಿಯಾಗ್ತಿದ್ದಾರೆ. ಪತಿಯ ವಿರುದ್ಧ ನವಾಜುದ್ದೀನ್ ಸಿದ್ದಿಕಿ ಮಾಜಿ ಪತ್ನಿ ಆಲಿಯಾ ಸಿದ್ಧಿಕಿ ಹಾಗೂ ಸಹೋದರ ಶಾಮಸ್ ನವಾಬ್ ಸಿದ್ದಿಕಿ ಹಲವು ಆರೋಪಗಳನ್ನ ಮಾಡಿದ್ದಾರೆ. ಇದೀಗ ನವಾಜುದ್ದೀನ್ ಸಿದ್ದಿಕಿ ಬಹಿರಂಗ ಪತ್ರಿಕಾ ಹೇಳಿಕೆಯನ್ನು ರಿಲೀಸ್ ಮಾಡಿದ್ದು, ಮಾಜಿ ಪತ್ನಿ ಆಲಿಯಾ ಮತ್ತು ಸಹೋದರ ಶಾಮಸ್ ನವಾಬ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ನಟ ಸಿದ್ದಿಕಿ ಆಲಿಯಾ ಮತ್ತು ಶಮಸ್ ವಿರುದ್ಧ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದು ಇದೇ ಮಾರ್ಚ್ 30ರಂದು ಬಾಂಬೆ ಹೈಕೋರ್ಟ್ನಲ್ಲಿ ಈ ಕೇಸ್ನ ವಿಚಾರಣೆ ನಡೆಯಲಿದೆ. ತನ್ನ ಸಹೋದರ ನವಾಜುದ್ದೀನ್ ಸಿದ್ದಿಕಿ ಅವರಿಗೆ 2018ರಿಂದಲೂ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಸಹೋದರನಿಗೆ ನವಾಜುದ್ದೀನ್ ಕ್ರೆಡಿಟ್ ಕಾರ್ಡ್ಸ್, ಎಟಿಎಂ ಕಾರ್ಡ್ಸ್, ಬ್ಯಾಂಕ್ ಪಾಸ್ವರ್ಡ್ಸ್ ನೀಡಿದ್ದರು. ಇದನ್ನೆಲ್ಲಾ ಆತ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ನವಾಜುದ್ದೀನ್ ಆರೋಪಿಸಿದ್ದಾರೆ.
ನನ್ನ ವಿರುದ್ಧ ನಿಲ್ಲುವಂತೆ ಮಾಜಿ ಪತ್ನಿ ಆಲಿಯಾಗೆ ಶಮಸ್ ಎತ್ತಿ ಕಟ್ಟಿದ್ದಾನೆ. ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಆಲಿಯಾಗೆ ಪ್ರತಿ ತಿಂಗಳು 10 ಲಕ್ಷ ರೂ. ನೀಡಲಾಗುತ್ತಿತ್ತು ಹಾಗೂ ಪ್ರೊಡಕ್ಷನ್ ಹೌಸ್ ಆರಂಭಿಸಲು 2.50 ಕೋಟಿ ರೂ. ನೀಡಿದ್ದೇನೆ. ಆದರೆ ಈ ಹಣವನ್ನೆಲ್ಲ ಅವರು ತಮ್ಮ ಸ್ವಂತಕ್ಕೆ ಬಳಸಿದ್ದಾರೆ ಎಂದು ನಟ ಆರೋಪಿಸಿದ್ದಾರೆ.
ಇದಲ್ಲದೆ, 2020ರಲ್ಲಿ ಮ್ಯಾನೇಜರ್ ಹುದ್ದೆಯಿಂದ ಶಮಾಸ್ರನ್ನು ತೆಗೆದ ನಂತರ ನವಾಜುದ್ದೀನ್ ಅವರು ಆದಾಯ ತೆರಿಗೆ, ಜಿಎಸ್ಟಿ ಮತ್ತು ಇತರ ಸರ್ಕಾರಿ ಇಲಾಖೆಗಳಿಂದ 37 ಕೋಟಿ ರೂಪಾಯಿ ತೆರಿಗೆ ಪಾವತಿಸದ ಕಾರಣಕ್ಕಾಗಿ ಕಾನೂನು ನೋಟಿಸ್ಗಳನ್ನು ಸ್ವೀಕರಿಸಿದ್ದಾರೆ ಎಂದು ನವಾಜುದ್ದೀನ್ ಅವರು ಅರ್ಜಿಯಲ್ಲಿ ಹೇಳಿದ್ದು, 100 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶಿಸುವಂತೆ ನವಾಜುದ್ದೀನ್ ಸಿದ್ದಿಕಿ ಕೋರಿದ್ದಾರೆ.