ರಾಕ್ ಸ್ಟಾರ್, ಮೇ ತೇರಾ ಹೀರೊ, ಅಜರ್, ಹೌಸ್ಪುಲ್ 3 ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನರ್ಗಿಸ್ ಫಖ್ರಿ ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡ್ತಿದ್ದಾರೆ. ಆದ್ರೆ ಇದೀಗ ನರ್ಗೀಸ್ ಫಕ್ರಿ ಸಹೋದರಿ ಆಲಿಯಾ ಫಖ್ರಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಈ ಮೂಲಕ ಆಲಿಯಾ ಫಖ್ರಿ ತಮ್ಮ ಜೀವನವನ್ನು ಕೈಯಾರೆ ಹಾಳು ಮಾಡಿಕೊಂಡಿದ್ದಾರೆ.
ವಿದೇಶದಲ್ಲಿ ನೆಲೆಸಿರುವ 43 ವರ್ಷದ ಆಲಿಯಾ ಫಖ್ರಿ ಕೆಲವು ವರ್ಷಗಳಿಂದ 35 ವರ್ಷದ ಎಡ್ವರ್ಡ್ ಜೇಕಬ್ಸ್ನ ಪ್ರೀತಿಸುತ್ತಿದ್ದರು. ಸಣ್ಣ ಕಾರಣದಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಈ ಮಧ್ಯೆ ಆಲಿಯಾ ಬಾಯ್ ಫ್ರೆಂಡ್ ಗೆ 33 ವರ್ಷ ಅನಸ್ತಾಸಿಯಾ ಎಂಬ ಹುಡುಗಿ ಜೊತೆ ಲವ್ ಆಗಿದೆ ಎಂದು. ಎಡ್ವರ್ಡ್ ಮತ್ತು ಅನಸ್ತಾಸಿಯಾ ನಡುವೆ ಇದ್ದ ಸ್ನೇಹ ಮತ್ತು ಆತ್ಮೀಯತೆಯಿಂದ ಆಲಿಯಾಗೆ ಅಸೂಯೆ ಶುರುವಾಗುತ್ತದೆ.
ದಿನದಿಂದ ದಿನಕ್ಕೆ ಜಗಳ ದೊಡ್ಡದಾಗುತ್ತಿದ್ದ ಕಾರಣ ಆಲಿಯಾ ನೇರವಾಗಿ ಎಡ್ವರ್ಡ್ ವಾಸವಿದ್ದ ಮನೆಗೆ ಬೆಳಗ್ಗೆ 6.20ರ ಸುಮಾರಿಗೆ ನುಗ್ಗಿ ನೀವು ಇಂದು ಸಾಯುವುದು ಖಚಿತ ಎಂದು ಜಗಳ ಮಾಡಿ ಇಡೀ ಮನೆಗೆ ಬೆಂಕಿ ಹಚ್ಚಿದ್ದಾರೆ. ಗಾಡ ನಿದ್ರೆಯಲ್ಲಿದ್ದ ಎಡ್ವರ್ಡ್ ಮತ್ತು ಸ್ನೇಹಿತೆ ಅನಸ್ತಾನಿಯಾ ಹೊಗೆ, ಗ್ಯಾಸೋಲಿನ್ ಮತ್ತು ಸುಟ್ಟು ಗಾಯಗಳಿಂದ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಡ್ವರ್ಡ್ ತಾಯಿ, ನನ್ನ ಮಗ ಮತ್ತು ಆಲಿಯಾ ಒಂದು ವರ್ಷದಿಂದ ದೂರವಿದ್ದರು. ಹಲವು ಬಾರಿ ತನ್ನಿಂದ ದೂರ ಇರುವಂತೆ ಆಲಿಯಾಗೆ ಪದೇ ಪದೇ ಮನವಿ ಮಾಡುತ್ತಿದ್ದ ಆದರೆ ಆಲಿಯಾ ಯಾವತ್ತೂ ಎಡ್ವರ್ಡ್ ಮಾತುಗಳನ್ನು ಕೇಳುತ್ತಿರಲಿಲ್ಲ. ಇಬ್ಬರು ಕೊಲೆ ಮಾಡಿರುವ ಆಲಿಯಾಗೆ ಕಠಿಣ ಶಿಕ್ಷೆ ಆಗಬೇಕು ಎಂದಿದ್ದಾರೆ.
ಆಲಿಯಾ ಕೊಲೆ ಮಾಡುವ ವ್ಯಕ್ತಿ ಅಲ್ಲ, ಇನ್ನೂ ಕಷ್ಟದಲ್ಲಿ ಇದ್ದವರಿಗೆ ತನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತಾಳೆ ಎಂದು ನರ್ಗಿಸ್ ಮತ್ತು ಅವರ ತಾಯಿ ಆರೋಪವನ್ನು ತಳ್ಳಿ ಹಾಕಿದ್ದಾರೆ. ಸದ್ಯ ಆಲಿಯಾ ನ್ಯೂಯಾರ್ಕ್ನ ಕ್ರಿಮಿನಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾಗ ಜಿಲ್ಲಾ ಅಟಾರ್ನಿ ಮೆಲಿಂಡಾ ಜಾಮೀನು ನೀಡಲು ನಿರಾಕರಿಸಿ