ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಾಖಿ ಸಾವಂತ್ ಮೈಸೂರು ಕೋರ್ಟ್ ಗೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಾಖಿ, ‘ನನ್ನ ಪತಿಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಅವರಿಗೆ ಏಳು ದಿನ ಪೊಲೀಸ್ ಕಸ್ಟಡಿ ನೀಡಿದೆ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ. ನನಗೆ ನ್ಯಾಯ ಬೇಕು, ಆತನಿಗೆ ಜಾಮೀನು ಯಾವುದೇ ಕಾರಣಕ್ಕೂ ಸಿಗಬಾರದು’ ಎಂದು ಹೇಳಿದರು.
ಆದಿಲ್ ನನನ್ನು ಕಾನೂನು ಬದ್ಧವಾಗಿ ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲಾತಿ ನನ್ನ ಬಳಿ ಇದೆ. ನಾನು ಇಂದು ಬೆಳಿಗ್ಗೆ ಆದಿಲ್ ಖಾನ್ ತಂದೆ ಜೊತೆ ಮಾತನಾಡಿದೆ. ನಾನು ಹಿಂದೂ ಎಂಬ ಕಾರಣಕ್ಕೆ ಅವರು ಸ್ವೀಕಾರ ಮಾಡುತ್ತಿಲ್ಲ. ಹಾಗಾದ್ರೆ ನಾನು ಏನು ಮಾಡಲಿ. ನನ್ನ ಬಳಿ 1.65 ಕೋಟಿ ಹಣ ಪಡೆದಿದ್ದಾನೆ. ಆದರೆ ನನಗೆ ಒಂದು ಪೈಸೆ ಕೂಡ ಕೊಟ್ಟಿಲ್ಲ ಎಂದು ಆರೋಪಿಸಿದರು.
ಆದಿಲ್ ಮೈಸೂರು ಜನ ಸರಿ ಇಲ್ಲ, ಅದಕ್ಕಾಗಿಯೇ ಮುಂಬೈಗೆ ಬರುತ್ತೇನೆ ಎಂದು ಹೇಳಿದ್ದ. ಆ ನಂತರ ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಮೈಸೂರು ಕೋರ್ಟ್ ಮೇಲೆ ವಿಶ್ವಾಸ ಇದೆ. ನನಗೆ ನ್ಯಾಯ ಕೊಡಿಸಿ ಎಂದು ಮಾಧ್ಯಮಗಳ ಮುಂದೆ ರಾಖಿ ಕಣ್ಣೀರು ಹಾಕಿದರು.