ಬಾಲಿವುಡ್ ಬ್ಯೂಟಿ ವಿದ್ಯಾ ಬಾಲನ್ ಮತ್ತೆ ಸುದ್ದಿಯಲ್ಲಿದ್ದಾರೆ. ವಿದ್ಯಾ ಬಾಲನ್ ಪ್ರೆಗ್ನೆಂಟ್ ಎಂದು ಸುದ್ದಿ ಹಬ್ಬಿಸಿದವರಿಗೆ ನಟಿ ಖಡಕ್ ಉತ್ತರ ನೀಡಿದ್ದು, ಪ್ರೆಗ್ನೆನ್ಸಿ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.
ಮದುವೆಯ ಬಳಿಕವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವ ನಟಿ ವಿದ್ಯಾ ಬಾಲನ್ ಇದೀಗ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಪರ್ಸನಲ್ ಲೈಫ್ಗೆ ಸಂಬಂಧಿಸಿದ ಒಂದಿಷ್ಟು ವಿಚಾರಗಳನ್ನ ನಟಿ ವಿದ್ಯಾ ಬಾಲನ್ ಹಂಚಿಕೊಂಡಿದ್ದಾರೆ.
ದೇವರಿಗೇ ಗೊತ್ತು ಅದೆಷ್ಟು ಮಕ್ಕಳಿಗೆ ಜನ್ಮ ನೀಡಿರುವೆ ಎಂದು. ನಾನು ದಪ್ಪಗಿರುವೆ ಇದು ನನ್ನ ದೇಹ, ಪ್ರೆಗ್ನೆಂಟ್ ಆದಾಗ ಹೇಗೆ ಕಾಣಿಸುತ್ತೀನಿ ಎಂದು ಗೊತ್ತಿಲ್ಲ ಆದರೆ ಈಗ ನೋಡಲು ಹೀಗಿರುವೆ. ಇಷ್ಟು ವರ್ಷ ಚಿತ್ರರಂಗದಲ್ಲಿ ಇರುವೆ ಈಗಲೂ ನಿಮಗೆ ಅರ್ಥವಾಗಿಲ್ವಾ ನಾನು ಸೈಜ್ ಝಿರೋ ಇಲ್ಲ ನಾನು ಸಣ್ಣ ಎಂದೂ ಇರಲಿಲ್ಲ ಎಂದು. ನನ್ನ ಬಗ್ಗೆ ನಾನು ನೆಗೆಟಿವ್ ಯೋಚನೆ ಮಾಡುವುದಿಲ್ಲ. ನಾನು ಸಂಬಂಧಗಳಿಗೆ ಹೆಚ್ಚಿಗೆ ಗೌರವ ಕೊಡುವ ವ್ಯಕ್ತಿ ಜೊತೆಗೆ ನನ್ನ ಕೆಲಸವನ್ನು ಹೆಚ್ಚಿಗೆ ಪ್ರೀತಿಸುವ ವ್ಯಕ್ತಿ ಎಂದು ಹೇಳುವ ಮೂಲಕ ಪ್ರೆಗ್ನೆಂಟ್ ಸುದ್ದಿ ಹಬ್ಬಿಸುವವರಿಗೆ ಖಡಕ್ ಉತ್ತರ ನೀಡಿದ್ದಾರೆ.
ವಿದ್ಯಾ ಬಾಲನ್ ನಟಿ ಮತ್ತು ನಿರ್ಮಾಪಕಿಯಾಗಿ ಗುರುತಿಸಿದ್ದಾರೆ. ಸದ್ಯ ಹೊಸ ಬಗೆಯ ಪಾತ್ರಗಳ ಮೂಲಕ ಬರಲು ಮತ್ತೆ ತೆರೆ ಮೇಲೆ ಬರಲು ವಿದ್ಯಾ ಸಿದ್ದವಾಗಿದ್ದಾರೆ.