ಬಾಲಿವುಡ್ ಬೆಡಗಿ, ಮಿಸ್ ಯೂನಿವರ್ಸ್ 1994 ನಟಿ ಸುಸ್ಮಿತಾ ಸೆನ್ ಹೊಸದಾಗಿ ಫೋಟೋ ಶೂಟ್ ಮಾಡಿಸಿದ್ದು ನಟಿಯ ಲುಕ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
49ರ ವಯಸ್ಸಿನಲ್ಲೂ ಸುಷ್ಮಿತಾ ಭರ್ಜರಿ ಫೋಟೋ ಶೂಟ್ ನಲ್ಲಿ ಮಿಂಚಿದ್ದು ನಟಿಯ ಕಿಲ್ಲಿಂಗ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಬಾಸ್ ಲೇಡಿ ಲುಕ್ನಲ್ಲಿ ಸುಸ್ಮಿತಾ ಸೆನ್ ಫೋಟೋ ಶೂಟ್ ಮಾಡಿಸಿದ್ದು ಆಕೆಯ ಹೊಸ ಪೋಟೋ ಶೂಟ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆಕೆಯ ಕ್ಲಾಸಿಕ್ ಸೌಂದರ್ಯಕ್ಕೆ ಮನಸೋತಿದ್ದಾರೆ.
“ವೈಯಕ್ತಿಕ ಶಕ್ತಿಗೆ ಯಾವುದೇ ಮನ್ನಣೆ ಅಗತ್ಯವಿಲ್ಲ, ಅದು ನಿಮ್ಮ ಡಿಎನ್ಎಯಂತೆಯೇ ಅಧಿಕೃತವಾಗಿದೆ” ಎಂದು ಸುಸ್ಮಿತಾ ಬರೆದಿದ್ದಾರೆ. ಮಾಜಿ ವಿಶ್ವ ಸುಂದರಿ ಮತ್ತು ಬಿ-ಟೌನ್ ಸುಂದರಿ ಸುಶ್ಮಿತಾ ಸೇನ್ ನವೆಂಬರ್ 19ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.
ಇತ್ತೀಚಗೆ ತಮ್ಮ ಹೊಸ ಹೇರ್ಸ್ಟೈಲ್ ಫೋಟೋವನ್ನು ಹಾಕಿಕೊಂಂಡಿದ್ದರು. “ಸುಸ್ಮಿತಾಗೆ ಯಾರು ಸರಿಸಾಟಿ ಇಲ್ಲ” , “ಸುಸ್ಮಿತಾ ರಾಕ್ಸ್ಟಾರ್” ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಹೊಸ ವರ್ಷ, ಹೊಸ ನೋಟ 2025ಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಸುಸ್ಮಿತಾ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಸೇನ್ ಕೊನೆಯದಾಗಿ ‘ಆರ್ಯ 3’ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.