ಹಿಂದಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಬಳಿಕ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಕಾಜಲ್ ಅಗರ್ವಾಲ್ ಸದ್ಯ ಮದುವೆ, ಮಗು, ಸಂಸಾರ ಅಂತಾ ಬ್ಯುಸಿಯಾಗಿದ್ದಾರೆ. ಇದೀಗ ಕಾಜಲ್ ಬಾಲಯ್ಯಗೆ ನಾಯಕಿಯಾಗುವ ಮೂಲಕ ಮತ್ತೆ ಬಣ್ಣ ಹಚ್ಚೋದ್ದಕ್ಕೆ ರೆಡಿಯಾಗಿದ್ದಾರೆ.. ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ಹಾಗೂ ಸೌತ್ ಇಂಡಸ್ಟ್ರಿಗಳ ನಡುವಿನ ವ್ಯತ್ಯಾಸದ ಬಗ್ಗೆ ನಟಿ ಮಾತನಾಡಿದ್ದಾರೆ.
ನಟಿ ಕಾಜಲ್ ಅಗರ್ವಾಲ್ ಅವರು ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಕಾಜಲ್ ತೆಲುಗು- ತಮಿಳು ಸಿನಿಮಾಗಳಿಂದಲೇ ಕಾಜಲ್ ಫೇಮಸ್ ಆಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಟಿ ಬಾಲಿವುಡ್ ಚಿತ್ರರಂಗದ ಕೊರತೆಗಳನ್ನ ಬಿಚ್ಚಿಟ್ಟಿದ್ದಾರೆ.
ಹಿಂದಿ ದೇಶದ ದೊಡ್ಡ ಭಾಷೆಯಾದ ಕಾರಣ ಹಲವಾರು ಕಲಾವಿದರು ಬಾಲಿವುಡ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಬೇಕು ಎಂದು ಆಶಿಸುತ್ತಾರೆ. ಇನ್ನು ದಕ್ಷಿಣ ಭಾರತದ ಚಿತ್ರರಂಗವು ಸ್ನೇಹದಿಂದ ನೋಡುತ್ತಾರೆ. ಕಲಾವಿದರನ್ನು ಅಲ್ಲಿಯ ಜನ ಒಪ್ಪಿಕೊಳ್ತಾರೆ. ದಕ್ಷಿಣದಲ್ಲಿ ಹಲವಾರು ಪ್ರತಿಭಾವಂತ ತಂತ್ರಜ್ಞರಿದ್ದು, ಅದ್ಭುತವಾದ ನಿರ್ದೇಶಕರಿದ್ದಾರೆ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಈ ನಾಲ್ಕೂ ಭಾಷೆಗಳಲ್ಲಿಯೂ ಕಂಟೆಂಟ್ ಹೆಚ್ಚಿದೆ ಎಂದಿದ್ದಾರೆ.
ಹಿಂದಿ ನನ್ನ ಮಾತೃಭಾಷೆ ಹೌದು. ನಾನು ಹಿಂದಿ ಚಿತ್ರಗಳಿಂದ ಬೆಳೆದಿದ್ದೇನೆ. ಹಿಂದಿ ಚಿತ್ರರಂಗ ನನ್ನನ್ನು ಒಪ್ಪಿಕೊಂಡಿದೆ. ಆದರೆ ನಾನು ಉತ್ತಮ ವಾತಾವರಣಕ್ಕೆ ಹೆಚ್ಚು ಒತ್ತು ನೀಡುತ್ತೇನೆ. ನೈತಿಕತೆ, ಮೌಲ್ಯಗಳು ಹಾಗೂ ಶಿಸ್ತಿನ ವಿಷಯಕ್ಕೆ ಬಂದರೆ ದಕ್ಷಿಣ ಚಿತ್ರರಂಗದಲ್ಲಿ ಇವು ಹೆಚ್ಚಿವೆ. ಈ ಅಂಶಗಳ ಕೊರತೆ ಬಾಲಿವುಡ್ ಚಿತ್ರರಂಗದಲ್ಲಿದೆ. ಸೌತ್ನಷ್ಟು ಶಿಸ್ತಿ ಬಾಲಿವುಡ್ನಲ್ಲಿ ಇಲ್ಲ ಎಂದಿದ್ದಾರೆ.