ಹುಬ್ಬಳ್ಳಿ: ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದ್ದು, ವರ್ಗಾವಣೆಯಲ್ಲಿ ಮುಖ್ಯ ಮಂತ್ರಿಗಳು ಹಣ ಬೇಡಿಕೆ ಇಡ್ತಾ ಇದ್ದಾರೆ. ಈ ಮೂಲಕ ಪೇ ಸಿಎಂ ಪೇ ಡಿಸಿಎಂ ವ್ಯವಸ್ಥೆ ಜಾರಿಗೆ ಬಂದಿದೆ ಅಂತಾ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದರು. ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು, ಯಾವ ಆಧಾರದ ಮೇಲೆ ಹೇಳಿದ್ದಾರೆ ಗೊತ್ತಿಲ್ಲ ಇದೊಂದು ಆಧಾರ ರಹಿತ ಆರೋಪ ಆಗಿದೆ. ಹೊಸ ಸರ್ಕಾರ ಬಂದ ಮೇಲೆ ವರ್ಗಾವಣೆ ಸಹಜ ಆದ್ದರಿಂದ ಬಸವರಾಜ ಬೊಮ್ಮಾಯಿ ಅವರು ಯಾವ ಬೇಸ್ ಮೇಲೆ ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ ಕಾರಣ
ಈ ಕುರಿತು ಅವರನ್ನೇ ತಾವು ಕೇಳಬೇಕು ಎಂದ ಅವರು ಸಂಪೂರ್ಣ ಮಾಹಿತಿ ಆಧಾರ ಇದ್ದರೇ ಅವರನ್ನೇ ಕೇಳಿರಿ ಎಂದರು.
ಇನ್ನೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಡಲ್ಲ ಎಂದು ನಿರ್ಧಾರಕ್ಕೆ ಕೆಂಡ ಕಾರಿದ ಸಚಿವ ಸಂತೋಷ ಲಾಡ್ ಅವರು, ಆಹಾರ ಭದ್ರತೆ ಕಾನೂನು ಜಾರಿಗೆ ತಂದವರು ಕಾಂಗ್ರೆಸ್ ಸರ್ಕಾರ. ಇಲ್ಲಿ 1 ಲಕ್ಷ 10 ಕೋಟಿಯಷ್ಡು ಆಹಾರ ಕೊಡುವ ಮೂಲಕ ಆಹಾರ ನೀಡಿದ್ದೇವೆ. ಕಾರಣ ಇದು ನಮ್ಮ ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದ ಅವರು ಈಗ 5 ಕೀಲೋ ಅಕ್ಕಿ ಕೊಡುತ್ತಿರುವುದು ಕಾಂಗ್ರೆಸ್ ಸರ್ಕಾರ ಜಾರಿಗೆ ಯೋಜನೆಯದ್ದು. ಇಡೀ ಭಾರತದಲ್ಲಿ ಬಡವರಿಗೆ ಉಚಿತವಾಗಿ ಏನು ಅಕ್ಕಿ ಕೊಡತಾ ಇರುವುದು ನಮ್ಮದು. ಆದ್ದರಿಂದ ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ಜಾರಿಗೆ ತಂದ ಯೋಜನೆ ಇದು. ಯಾವುದೇ ಮೋದಿ ಸಾಹೇಬರು ಕೊಡುವ ಯೋಜನೆ ಅಲ್ಲಾ. ನಾವು ಏನು ಹೆಚ್ಚಿಗೆ ಐದು ಕೀಲೋ ಅಕ್ಕಿ ಕೊಡಬೇಕು ಅದನ್ನ ಪ್ರಾಮಾಣಿಕವಾಗಿ ಕೊಡುತ್ತೇವೆ ಎಂದ ಅವರು ನ್ಯಾಷನಲ್ ಫುಡ್ ಕಾರ್ಪೋರೇಷನ್ ಅವರು ಕೊಡಬೇಕು ಈಗ ನೋಡೋಣ ಎಂದರು.