ಬೆಂಗಳೂರು/ ದೆಹಲಿ:- ಬೋರ್ನ್ ವಿಟಾ ಆರೋಗ್ಯ ಪಾನೀಯವಾಗಲು ಸಾಧ್ಯವಿಲ್ಲ ಎಂದ ಕೇಂದ್ರ ಹೇಳಿದೆ. ಹೀಗಾಗಿ ಕಾಮರ್ಸ್ ಸಂಸ್ಥೆಗಳು ಆರೋಗ್ಯ ಪಾನೀಯ ಪಟ್ಟಿಯಿಂದ ಬೋರ್ನ್ ವಿಟಾ ಸೇರಿದಂತೆ ಪಾನೀಯಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಆರೋಗ್ಯ ಪಾನೀಯ ಅಥವಾ ಎನರ್ಜಿ ಡ್ರಿಂಕ್ಸ್ ವಿಭಾಗದಲ್ಲಿ ಹಾಕಲಾಗಿರುವ ಬೋರ್ನ್ ವಿಟಾ ಸೇರಿದಂತೆ ಎಲ್ಲಾ ಪಾನೀಯ ಹಾಗೂ ತಂಪು ಪಾನೀಯಗಳನ್ನು ತೆಗೆದುಹಾಕುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಆನ್ ಲೈನ್ ಮಾರುಕಟ್ಟೆ ಸಂಸ್ಥೆಗಳಿಗೆ ಸೂಚಿಸಿದೆ.
ಮಕ್ಕಳ ಆರೋಗ್ಯ ಮತ್ತು ಹಕ್ಕುಗಳ ಕಾಯ್ದೆಯಡಿ 2006ರಲ್ಲಿ ಮಕ್ಕಳ ಆರೋಗ್ಯ ಪಾನೀಯಗಳ ಕುರಿತ ಮಾನದಂಡದ ಅನ್ವಯ ಪಾನೀಯ ಹಾಗೂ ತಂಪು ಪಾನೀಯಗಳನ್ನು ಆರೋಗ್ಯ ಪಾನೀಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಖಡಕ್ಕಾಗಿ ಹೇಳಿದೆ.