ಬೆಂಗಳೂರು ;- ಅಫಘಾತವಾಗಿ ಬ್ರೈನ್ ಡೆಡ್ ಆದ ಮಗನ ಅಂಗಾಗ ದಾನ ಮಾಡಿ ಯುವಕನ ಕುಟುಂಬ ಸಾವಿನಲ್ಲೂ ಸಾರ್ಥಕತೆ ಮೆರೆದಿದೆ. ಕಡು ಬಡತನದಲ್ಲೂ ಮತ್ತೊಬ್ಬರ ಜೀವನಕ್ಕೆ ದಾರಿ ಮಾಡಿ ಕುಟುಂಬ ಮಾನವೀಯತೆ ಮೆರೆದಿದೆ. ಮೃತ ಗಿರೀಶ್,
ಗುರುವಾರ 15 ರಂದು ಮಂಡ್ಯದಲ್ಲಿ ಬೈಕ್ ಅಫಘಾತಕ್ಕಿಡಾಗಿದ್ದ. ಈ ವೇಳೆ ಸ್ಥಳೀಯ ಮಂಡ್ಯ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಸಲಹೆ ನೀಡಿದ ಹಿನ್ನೆಲೆ, ಮಂಡ್ಯದ ವಿಮ್ಸ್ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಕುಟುಂಬಸ್ಥರು ಶಿಫ್ಟ್ ಮಾಡಿದ್ದರು.
ಅದರಂತೆ ಕಳೆದ ಮೂರು ದಿನಗಳಿಂದ ಸಾವು ಬದುಕಿನ ನಡುವೆ ಗಿರೀಶ್ ಹೋರಾಟ ಮಾಡ್ತಿದ್ದ. ಆದರೆ ಕೊನೆಗೂ ಚಿಕಿತ್ಸೆ ಫಲಕಾರಿಯಾಗಿದೆ ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸಿದ್ದಾರೆ. ಈ ಹಿನ್ನೆಲೆ ಯುವಕನ 2 ಕಣ್ಣು, 2 ಕಿಡ್ನಿ, ಲಿವರ್, ಲಂಗ್ಸ್, ಹೃದಯ ದಾನ ಮಾಡಲು ಪೋಷಕರು ಮುಂದಾಗಿದ್ದು, ಮಾದರಿ ಮೆರೆದಿದ್ದಾರೆ.