ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ಸವಾರರು ಹೆಚ್ಚೆಚ್ಚು ಟ್ರಾಫಿಕ್ ನಿಯಮಗಳನ್ನು ಬ್ರೇಕ್ ಮಾಡುತ್ತಾರೆ. ಅತಿಯಾದ ಟ್ರಾಫಿಕ್ ನಿಂದ ಬೇಸತ್ತು ಸಿಗ್ನಲ್ ಜಂಪ್ ಇರಬಹುದು, ಹೆಲ್ಮೆಟ್ ಧರಿಸದೆ ಸಂಚಾರ, ತ್ರಿಬಲ್ ರೈಡಿಂಗ್, ಸೇರಿ ಇನ್ನೂ ಮುಂತಾದ ರೂಲ್ಸ್ ಬ್ರೇಕ್ ಮಾಡುತ್ತಾರೆ.
ಆದರೆ ಇದರ ದಂಡ ಕಟ್ಟಲು ಮಾತ್ರ ಮೀನಾಮೇಷ ಎಣಿಸುತ್ತಾರೆ. ಅಷ್ಟೇ ಅಲ್ಲದೇ ಫೈನ್ ತಪ್ಪಿಸಿ ಕೊಳ್ಳಲು ಸಿಲಿಕಾನ್ ಸಿಟಿ ಮಂದಿಯ ಸ್ಪೂನ್ ಅಸ್ತ್ರ ಉಪಯೋಗಿಸಿದ್ದಾರೆ. ಈ ಮೂಲಕ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿ ಕೊಳ್ಳಲು ಇನ್ನು ಏನೇನ್ ಐಡಿಯಾ ಮಾಡ್ತಾರಪ್ಪ ಎಂಬ ಪ್ರಶ್ನೆ ಮೂಡಿದೆ.
ಸಿಗ್ನಲ್ ಜಂಪ್ ಮಾಡಿದಾಗ ಹೆಲ್ಮೆಟ್ ಧರಿಸದೆ ಇದ್ದಾಗ ಗಾಡಿ ನಂಬರ್ ಕಾಣಿಸದಿರಲು ವಾಹನ ಸವಾರರು ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ಗಾಡಿ ನಂಬರ್ ಪ್ಲೇಟ್ ಗೆ ಸರಿಯಾಗಿ ಸ್ಪೂನ್ ಇಟ್ಟು ಮರೆ ಮಾಡೋ ಪ್ಲಾನ್ ಮಾಡಿದ್ದಾರೆ. ಸ್ಪೂನ್ ಮೂಲಕ ನಂಬರ್ ಪ್ಲೇಟ್ ಅನ್ನು ಕಿಲಾಡಿಗಳು ಹೈಡ್ ಮಾಡಿದ್ದಾರೆ.
ವಿಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.