ಬೆಂಗಳೂರು:- ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಪೋಷಕರು ಹೇಳಿದ ಕಥೆ ಕೇಳಿದರೆ ಎಂಥವರಿಗೂ ಕರುಳು ಹಿಂಡುವಂತೆ ಮಾಡುತ್ತದೆ.
ಕಾರು ಹತ್ತಿರುವ ವಿಚಾರ ತಿಳಿಯದೇ ಮಗುವನ್ನು ಹಿಡಿದು ಪೋಷಕರು ನಾಲ್ಕು ಆಸ್ಪತ್ರೆ ಸುತ್ತಿದ್ದಾರೆ. ಕೈಯಲ್ಲಿ ಹಣವಿಲ್ಲದೇ ಅಸಹಾಯಕರಾಗಿ ಆಸ್ಪತ್ರೆ ಸುತ್ತಾಡಿದ್ದರು. ಆದರೂ ಕೂಡ ಖಾಸಗಿ ಆಸ್ಪತ್ರೆ ವೈದ್ಯರು ಮಾನವೀಯತೆ ಮರೆತ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಕೈಯಲ್ಲಿ ಹಣವಿಲ್ಲದೇ ಅಸಹಾಯಕರಾಗಿ ಆಸ್ಪತ್ರೆ ಸುತ್ತಾಡಿದ್ದರು. ಸಾವು ಬದುಕಿನ ನಡುವೆ ಹೋರಾಡ್ತಿದ್ದ ಮಗುವಿಗೆ ಚಿಕಿತ್ಸೆ ನೀಡಲು 30 ಸಾವಿರ ಹಣವನ್ನು ಖಾಸಗಿ ಆಸ್ಪತ್ರೆ ಸಿಬ್ವಂದಿ ಕೇಳಿದ್ದರು.
ಅಸಹಾಯಕರಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ಪೋಷಕರು ಕೊಂಡೊಯ್ದಿದ್ದಾರೆ. ಅಲ್ಲಿಂದ ನಿಮ್ಹಾನ್ಸ್ ಕೊಂಡೊಯ್ಯುವಷ್ಟರಲ್ಲಿ ಬಾಲಕಿ ಪ್ರಾಣ ಬಿಟ್ಟಿದ್ದಾಳೆ. ತಂದೆ ಮಡಿಲಲ್ಲಿ ನರಳುತ್ತಾ ಮೂರು ವರ್ಷದ ಕಂದಮ್ಮ ಪ್ರಾಣ ಬಿಟ್ಟಿದೆ.
ನಾಲ್ಕು ಆಸ್ಪತ್ರೆಯಲ್ಲಿ ಒಬ್ಬರಾದ್ರು ಸರಿಯಾಗಿ ಗಮನಿಸಿದ್ರೆ ಪುಟ್ಟ ಕಂದಮ್ಮನ ಜೀವ ಉಳಿತಿತ್ತು ಎಂಬ ಮಾತುಗಳು ಕೇಳಿ ಬಂದಿದೆ.