ನವದೆಹಲಿ: ಮುಂಬರಲಿರುವ ಭಾರತೀಯ ಕುಸ್ತಿ ಫೆಡರೇಷನ್ನ ಚುನಾವಣಾ ಕಣದಿಂದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಮಗ ಕರಣ್ ಹೆಸರನ್ನು ಕೈಬಿಡಲಾಗಿದೆ. ಆಗಸ್ಟ್ 12 ರಂದು ನಡೆಯಲಿರುವ ಕುಸ್ತಿ ಫೆಡರೇಷನ್ ಚುನಾವಣಾ ಕಣದಿಂದ ಕೈಬಿಡಲಾಗಿದೆ ಎಂದು ವರದಿಗಳು ತಿಳಿಸಿವೆ. ಬ್ರಿಜ್ ಭೂಷಣ್ ಅವರ ಕಿರಿಯ ಪುತ್ರ ಉತ್ತರ ಪ್ರದೇಶ ಕುಸ್ತಿ ಸಂಘದ ಅಧ್ಯಕ್ಷರಾಗಿರುವ ಕರಣ್ ಹೆಸರನ್ನು ಅಂತಿಮ ಪಟ್ಟಿಯಿಂದ ಕೈ ಬಿಡಲಾಗಿದೆ. ಚುನಾವಣಾ ಅಧಿಕಾರಿ ನಿವೃತ್ತ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅರ್ಹ ಮತದಾರರ ಪಟ್ಟಿಯನ್ನು ಅಂತಿಮ ಪಡಿಸಿದ್ದಾರೆ.