ಇಂಗ್ಲೆಂಡಿನ ರಾಜ ಕಿಂಗ್ ಚಾರ್ಲ್ಸ್ 3 ಅವರು ಬೆಂಗಳೂರಿಗೆ ರಹಸ್ಯ ಭೇಟಿ ನೀಡಿದ್ದಾರೆ. ಲಂಡನ್ನ ವೆಸ್ಟ್ಮಿನ್ಸ್ಟರ್ ಅಬ್ಬೆಯಲ್ಲಿ ಮೇ 6, 2023ರಂದು ಇಂಗ್ಲೆಂಡಿನ ರಾಜರಾಗಿ ಪಟ್ಟಾಭಿಷೇಕ ಮಾಡಿಕೊಂಡ ನಂತರ ಕಿಂಗ್ ಚಾರ್ಲ್ಸ್ 3 ಅವರು ಬೆಂಗಳೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಪ್ರಕೃತಿ ಚಿಕಿತ್ಸೆ ಪಡೆಯುವುದಕ್ಕಾಗಿ ಅಕ್ಟೋಬರ್ 27 ರಂದು ಬೆಂಗಳೂರಿಗೆ ಆಗಮಿಸಿದ್ದ ಕಿಂಗ್ ಚಾರ್ಲ್ಸ್ 3 ಅಂದು ರಾತ್ರಿಯವರೆಗೆ ವೈಟ್ಫೀಲ್ಡ್ನಲ್ಲಿರುವ ಸೌಖ್ಯ ಇಂಟರ್ನ್ಯಾಷನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್ನಲ್ಲಿ ವಾಸ್ತವ್ಯ ಹೂಡಿದ್ದರು.
ಅಕ್ಟೋಬರ್ 21ರಿಂದ 26 ರವರೆಗೆ 2024 ರ ಕಾಮನ್ವೆಲ್ತ್ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸಿದ ಕಿಂಗ್ ಚಾರ್ಲ್ಸ್ ಸಮೋವಾದಿಂದ ನೇರವಾಗಿ ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿಗೆ ಅವರ ಆಗಮನವನ್ನು ರಹಸ್ಯವಾಗಿ ಇಡಲಾಗಿತ್ತು. ಅವರನ್ನು ನೇರವಾಗಿ ಹೆಲ್ತ್ ಸೆಂಟರ್ ಗೆ ಕರೆದೊಯ್ದಿದ್ದು, ಅವರ ಪತ್ನಿ ರಾಣಿ ಕ್ಯಾಮಿಲ್ಲಾ ಕೂಡ ಜೊತೆಯಲ್ಲಿದ್ದರು.
ಯೋಗ, ಧ್ಯಾನ ಮೂಲಕ ಕಿಂಗ್ ಚಾರ್ಲ್ಸ್ 3 ದಂಪತಿ ದಿನಚರಿ ಆರಂಭಿಸಿದ್ದಾರೆ. ನಂತರ ಉಪಹಾರ ಮತ್ತು ಊಟ ಮಾಡುತ್ತಾರೆ. ಸ್ವಲ್ಪ ವಿರಾಮ ನಂತರ, ಎರಡನೇ ಸುತ್ತಿನ ಚಿಕಿತ್ಸೆಗಳು ಶುರುವಾಗುತ್ತವೆ. ರಾತ್ರಿ 9 ಗಂಟೆಗೆ ಊಟ ಮತ್ತು ಧ್ಯಾನದೊಂದಿಗೆ ಮುಕ್ತಾಯವಾಗುತ್ತದೆ. ಈಮಧ್ಯೆ ಕ್ಯಾಂಪಸ್ ಸುತ್ತಲೂ ಸುದೀರ್ಘ ನಡಿಗೆ, ಸಾವಯವ ಕೃಷಿ ಮತ್ತು ದನದ ಕೊಟ್ಟಿಗೆಗೆ ಭೇಟಿ ನೀಡುತ್ತಾರೆ.
ರಾಜರ ರಹಸ್ಯ ಭೇಟಿಯಿಂದಾಗಿ ಸೌಖ್ಯ ಹೆಲ್ತ್ ಸೆಂಟರ್ ಸುತ್ತ ಹೆಚ್ಚಿನ ಭದ್ರತೆಯನ್ನು ಮಾಡಲಾಗಿದೆ.