ಲಂಡನ್: ಗುಡ್ ಫ್ರೈಡೇಯ ಶಾಂತಿ ಒಪ್ಪಂದದ 25ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ತರ ಐರ್ಲೆಂಡ್ಗೆ ತೆರಳಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾಗಲಿದ್ದಾರೆ.
ಮಂಗಳವಾರದಂದು ಬೈಡನ್ ಆಗಮಿಸಲಿದ್ದು, ಅಮೆರಿಕ ಅಧ್ಯಕ್ಷರಾಗಿ ಇಲ್ಲಿಗೆ ಅವರ ಮೊದಲ ಭೇಟಿ ಇದಾಗಿದೆ. ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆಯಲ್ಲಿ ಅವರು ಭಾಗವಹಿಸಲಿದ್ದಾರೆ.
ಐರಿಷ್ ರಿಪಬ್ಲಿಕ್ನಲ್ಲಿ ತಮ್ಮ ಪೂರ್ವಜನರ ಮನೆಗಳಿಗೂ ಬೈಡನ್ ಭೇಟಿ ನೀಡಲಿದ್ದಾರೆ. 1998 ಏಪ್ರಿಲ್ 10ರಂದು ಗುಡ್ ಫ್ರೈಡೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರೊಂದಿಗೆ ಉತ್ತರ ಐರ್ಲೆಂಡ್ನಲ್ಲಿ 1960ರ ದಶಕದ ಬಳಿಕ ಉಂಟಾದ ರಾಜಕೀಯ ಸಂಘರ್ಷ, ಹಿಂಸಾಚಾರಕ್ಕೆ ವಿರಾಮ ಬಿದ್ದಿತ್ತು.