ಜೈಪುರ: ಮನೆಯಲ್ಲಿ ಪತ್ನಿ ಇಲ್ಲವೆಂದು ಬಾವನೇ 15 ವರ್ಷದ ನಾದಿನಿಯನ್ನು ಅತ್ಯಾಚಾರಗೈದಿರುವ ಘಟನೆ ಶುಕ್ರವಾರ ರಾಜಸ್ಥಾನ ರಾಜ್ಯದ ಬುಂದಿ ಜಿಲ್ಲೆಯಲ್ಲಿ ನಡೆದಿದೆ.ಗಿರಾಜ್ ಮಾಳಿ(23) ಎಂಬಾತನೇ ತನ್ನ 15 ವರ್ಷದ ಅಪ್ರಾಪ್ತ ನಾದಿನಿಯ ಮೇಲೆ ಅತ್ಯಾಚಾರ ಎಸೆಗಿದ ಕಾಮುಕ. ಶುಕ್ರವಾರ ಮನೆಗೆ ಬಂದ ಗಿರಾಜ್ನಿಗೆ ಮನೆಯಲ್ಲಿ ತನ್ನ ಪತ್ನಿ ಇಲ್ಲವೆಂದು ತಿಳಿದಿದೆ. ಗಿರಾಜ್ ಪತ್ನಿ ಕೇಶವಾಪುರ ಗ್ರಾಮದಿಂದ ಹೊರ ಹೋಗಿರುವ ವಿಷಯ ತಿಳಿದಿದೆ. ಈ ವೇಳೆಯಲ್ಲಿ ಮನೆಯಲ್ಲಿದ್ದ ನಾದಿನಿಯ ಮೇಲೆ ಅತ್ಯಾಚಾರಗೈದಿದ್ದಾನೆ ಎಂದು ದಬ್ಲಾನ್ ಸ್ಟೇಶನ್ ಹೋಮ್ ಆಫೀಸರ್ ಸಂಜಯ್ ರಾಯಲ್ ಹೇಳಿದ್ದಾರೆ.
ಶುಕ್ರವಾರ ಸಂಜೆ ಬಾಲಕಿ ತನಗಾಗಿರುವ ನೋವನ್ನು ತಿಳಿಸಿದಾಗ ಪ್ರಕರಣ ಬೆಳಕಿಗ ಬಂದಿದೆ. ಬಾಲಕಿಯನ್ನು ಬುಂದಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಶಿಫಾರಸ್ಸಿನ ಮೇರೆಗೆ ಬಾಲಕಿಯನ್ನು ಕೋಟಾದ ಜೆ.ಕೆ.ಲೋನ್ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಲಕಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬಾಲಕಿಯ ಕುಟುಂಬಸ್ಥರ ಪೊಲೀಸ್ ಠಾಣೆಯಲ್ಲಿ ದೂರಿನ್ವಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಗಿರಾಜ್ ನಾಪತ್ತೆಯಾಗಿದ್ದಾನೆ. ಪೊಲೀಸರು ಆರೋಪಿ ಪತ್ತೆಗಾಗಿ ಜಾಲ ಬೀಸಿದ್ದಾರೆ.