ದಕ್ಷಿಣ ಕೊರಿಯಾದ ಖ್ಯಾತ ಸಿಂಗರ್ ಜಿಮಿನ್ (BTS Jimin) ಹಾಗೆಯೇ ಕಾಣಬೇಕು ಎಂದು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದ ಯುವಕ ಇದೀಗ ಸಾವಿನ ಮನೆ ಸೇರಿದ್ದಾರೆ. ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಸಾಧನೆ ಮಾಡಬೇಕು ಎಂದು ಕನಸು ಕಂಡಿದ್ದ ಯುವಕ ಈಗ ಎಂದೂ ಬಾರದ ಲೋಕಕ್ಕೆ ಹೋಗಿದ್ದಾನೆ. ಅಷ್ಟಕ್ಕೂ ಆಗಿದ್ದೇನು? ಕೊರಿಯಾದ ಖ್ಯಾತ ಬಿಟಿಎಸ್ ಬ್ಯಾಂಡ್ನ ಸದಸ್ಯ ಜಿಮಿನ್ (Jimin) ರೀತಿ ಕಾಣಿಸಬೇಕು ಎಂದು ಬಯಸಿದ್ದ ಯುವಕ ಇಹಲೋಕ ತ್ಯಜಿಸಿದ್ದಾರೆ. 22 ವರ್ಷದ ಕೆನಡಿಯನ್ ನಟ ಸೇಂಟ್ ವಾನ್ ಕೊಲುಸಿ ಮೃತಪಟ್ಟಿದ್ದಾರೆ.
ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ಈತ ಭಾನುವಾರ ನಿಧನರಾಗಿದ್ದಾರೆ. ಯುವನಟನ ಸಾವಿಗೆ ಪ್ಲಾಸ್ಟಿಕ್ ಸರ್ಜರಿಯೇ ಕಾರಣ ಎಂದು ತಿಳಿದು ಬಂದಿದೆ. ಕೆಲವು ತಿಂಗಳ ಹಿಂದೆ ಈತ 12 ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದು, ಇದಾದ ನಂತರ ಆತನ ಆರೋಗ್ಯದಲ್ಲಿ ಏರುಪೇರಾಗಿತ್ತು. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ಮೂಲಗಳ ಪ್ರಕಾರ, ಮೃತ ಸೇಂಟ್ ವಾನ್ ಕೊಲುಸಿ (Saint Von Colucci) ಒಟ್ಟು 12 ಬಾರಿ ಪ್ಲಾಸ್ಟಿಕ್ ಸರ್ಜರಿಗಾಗಿ 220,000 ಡಾಲರ್ ಅಂದರೆ 1,80,22,180 (ಭಾರತೀಯ ರೂಪಾಯಿ) ಖರ್ಚು ಮಾಡಿದ್ದ.
ಸರ್ಜರಿಯ ನಂತರ ಅಮೆರಿಕದಲ್ಲಿ ಪ್ರಸಾರದಲ್ಲಿರುವ ‘ಕೆ ಪಾಪ್ ಸ್ಟಾರ್’ ಸೀರಿಸ್ನಲ್ಲಿ ನಟಿಸಲು ಆತ ಬಯಸಿದ್ದ. ಹಾಗೆಯೇ ಕಳೆದ ನವೆಂಬರ್ನಲ್ಲಿ ಈತ ಮಾಡಿಸಿಕೊಂಡಿದ್ದ ದವಡೆಯ ಕಸಿಯನ್ನು ತೆಗೆದು ಹಾಕಲು ಆತ ಮತ್ತೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿದ್ದ. ಆದರೆ ಶಸ್ತ್ರಚಿಕಿತ್ಸೆ ನಂತರ ಆತನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಶಸ್ತçಚಿಕಿತ್ಸೆ ಅಪಾಯಕಾರಿ ಎಂಬುದು ಆತನಿಗೆ ತಿಳಿದಿದ್ದರು ಕೂಡ ಆತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ, ಆದರೆ ಇದಾಗಿ ಗಂಟೆಗಳ ನಂತರ ಸೋಂಕಿಗೊಳಗಾಗಿ ಸೇಂಟ್ ವಾನ್ ಕೊಲುಸಿ ಮೃತಪಟ್ಟಿದ್ದಾನೆ.