ಹೈದರಾಬಾದ್ ;- ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿರುವ ಸೀಮಾ ಹೈದರ್ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ.
ರಾಜಸ್ಥಾನದ ಉದಯಪುರ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯ ಕುರಿತು ‘ಎ ಟೈಲರ್ಸ್ ಮರ್ಡರ್ ಸ್ಟೋರಿ’ ಎಂಬ ಶೀರ್ಷಿಕೆಯ ಚಲನಚಿತ್ರವನ್ನು ನಿರ್ಮಿಸುತ್ತಿದೆ. ಈ ಚಿತ್ರದಲ್ಲಿ ‘ರಾ’ ಏಜೆಂಟ್ ಪಾತ್ರಕ್ಕಾಗಿ ಸೀಮಾ ಅವರನ್ನು ಸಂಪರ್ಕಿಸಲಾಗಿದೆ.
ನಾಲ್ಕು ಮಕ್ಕಳ ತಾಯಿ ಆಗಿರುವ ಸಿಂಧ್ ಪ್ರಾಂತ್ಯದ ಕರಾಚಿಯ ಸೀಮಾ ಹೈದರ್ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಬಂದಿದ್ದಾಳೆ. ಸದ್ಯ ಪಬ್ಜಿ ಗೇಮ್ ಗೆಳೆಯ ಸಚಿನ್ ಮೀನಾ ಎಂಬಾತನನ್ನು ಮದುವೆಯಾಗಿರುವ ಸೀಮಾ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನೆಲೆಸಿದ್ದಾಳೆ. ಸದ್ಯ ಆಕೆ ಜಾಮೀನಿನ ಮೇಲೆ ಹೊರಗಿದ್ದಾಳೆ. ಆದರೆ, ಹೊಸ ಮನೆಗೆ ಬಂದ ನಂತರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಮಾಧ್ಯಮಗಳಿಗೆ ಸೀಮಾ ಹೈದರ್ ತಿಳಿಸಿದ್ದಳು. ಇದಾದ ನಂತರ ಕೆಲ ದಿನಗಳ ನಂತರ ಸಿನಿಮಾ ನಿರ್ದೇಶಕರು ಸೀಮಾಳನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.
ಟೈಲರ್ ಕನ್ಹಯ್ಯ ಲಾಲ್ ಹತ್ಯೆಯ ಕುರಿತು ಜಾನಿ ಫೈರ್ಫಾಕ್ಸ್ ಪ್ರೊಡಕ್ಷನ್ ಹೌಸ್ ‘ಎ ಟೈಲರ್ಸ್ ಮರ್ಡರ್ ಸ್ಟೋರಿ’ ಎಂಬ ಸಿನಿಮಾ ಮಾಡುತ್ತಿದೆ. ಈ ಚಿತ್ರದಲ್ಲಿ ‘ರಾ’ ಏಜೆಂಟ್ ಪಾತ್ರವನ್ನು ನಿರ್ವಹಿಸಲು ಸೀಮಾ ಹೈದರ್ಳನ್ನು ಚಿತ್ರತಂಡ ಸಂಪರ್ಕಿಸಿದೆ. ಅಲ್ಲದೇ, ಸಿನಿಮಾ ನಿರ್ದೇಶಕರಾದ ಜಯಂತ್ ಸಿನ್ಹಾ ಮತ್ತು ಭರತ್ ಸಿಂಗ್ ಮಂಗಳವಾರ ಸೀಮಾ ಅವರ ಪಾತ್ರಕ್ಕಾಗಿ ಆಡಿಷನ್ ಸಹ ನಡೆಸಿದ್ದಾರೆ ಎಂದು ವರದಿಯಾಗಿದೆ.