ಕೇರಳ: ಕೇರಳದ ಕೊಟ್ಟಾಯಂ ಜಿಲ್ಲೆ ಎರುಮೇಲಿಯ ಕಣಮಲ ಬಳಿ ಬಸ್ ಅಪಘಾತಕ್ಕೀಡಾಗಿದ್ದು, ಕರ್ನಾಟಕದ 19 ಶಬರಿಮಲೆ ಭಕ್ತರಿಗೆ ಗಂಭೀರ ಗಾಯಗಳಾಗಿವೆ. ಖಾಸಗಿ ಬಸ್, ಟೆಂಪೋ ಟ್ರಾವೆಲರ್ಸ್ನಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲಿನಿಂದ ಶಬರಿಮಲೆಗೆ ತೆರಳಿದ್ದಾಗ ಎರುಮೇಲಿಯ ಕಣಮಲ ಬಳಿ ಬಸ್ ಅಪಘಾತಕ್ಕೀಡಾಗಿದೆ.
ಪರಿಣಾಮ ಬಸ್ನಲ್ಲಿದ್ದ 50 ಜನರ ಪೈಕಿ 19 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳು ಮುಳಬಾಗಿಲು ತಾಲೂಕಿನ ತಮ್ಮರೆಡ್ಡಿಹಳ್ಳಿ, ಬಂಗವಾದಿ, ಮಜರಾ ಕಿತ್ತೂರು ಗ್ರಾಮದ ನಿವಾಸಿಗಳಾಗಿದ್ದಾರೆ. ಸದ್ಯ ಗಾಯಾಳುಗಳನ್ನು ವಿವಿಧ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.