ಅವಕಾಡೊ ( ಬೆಣ್ಣೆಹಣ್ಣು) ತನ್ನ ಹೆಸರಿಗೆ ತಕ್ಕಂತೆ ಇದು ಬೆಣ್ಣೆಯಂತೆಯೇ ಇದೆ. ಇದನ್ನು ಹಾಗೆ ತಿನ್ನಲು ತುಂಬಾ ರುಚಿಕರವಾಗಿದ್ದರೂ ಜ್ಯೂಸ್ ಮಾಡಿಕೊಂಡು ಕುಡಿದರೆ ತುಂಬಾ ಒಳ್ಳೆಯದು. ಅದೇ ರೀತಿಯಾಗಿ ಇದನ್ನು ಹಲವಾರು ಖಾದ್ಯಗಳಲ್ಲೂ ಬಳಕೆ ಮಾಡಲಾಗುತ್ತದೆ. ಬೇರೆಲ್ಲಾ ಹಣ್ಣಿಗಿಂತಲೂ ಅವಕಾಡೊ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಯಾಕೆಂದರೆ ಇದರಲ್ಲಿ ಹಲವಾರು ವಿಧದ ಪೋಷಕಾಂಶಗಳು ಇವೆ.
ಅವಕಾಡೊ ಹಣ್ಣಿನ ಪ್ರಯೋಜನಗಳು
ಚರ್ಮ ಮತ್ತು ಕೂದಲಿಗೆ
ಅವಕಾಡೊದಲ್ಲಿ ಇರುವಂತಹ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕೆ ತುಂಬಾ ಲಾಭಕಾರಿ ಆಗಿರುವುದು. ಒಣ, ಒಡೆದ ಮತ್ತು ಹಾನಿಗೀಡಾಗಿರುವಂತಹ ಚರ್ಮವನ್ನು ಇದು ಸರಿಪಡಿಸುವುದು. ಇಂದಿನ ಕೆಲವೊಂದು ಸೌಂದರ್ಯ ಉತ್ಪನ್ನಗಳು ಹಾಗೂ ಫೇಸ್ ಮಾಸ್ಕ್ ಗಳಲ್ಲಿ ಅವಕಾಡೊವನ್ನು ಬಳಕೆ ಮಾಡಿರುವರು. ಇದರಿಮದ ಚರ್ಮವು ತುಂಬಾ ಆರೋಗ್ಯಕಾರಿ ಮತ್ತು ಕಾಂತಿಯುವಾಗಿ ಹೊಳೆಯುವುದು. ಒಣ ಹಾಗೂ ಹಾನಿಗೀಡಾಗಿರುವಂತಹ ಕೂದಲಿಗೆ ಕೂಡ ಇದು ತುಂಬಾ ಲಾಭಕಾರಿ ಆಗಿರುವುದು.
ಅವಕಾಡೊದಲ್ಲಿ ವಿಟಮಿನ್ ಸಿ ಮತ್ತು ಇ ಸಮೃದ್ಧವಾಗಿದೆ. ಅಧಿಕ ಮಟ್ಟದ ಬೆಟಾ ಕ್ಯಾರೊಟಿನ್, ಬಿಸಿಲಿನಿಂದಾಗಿ ಯುವಿ ಕಿರಣಗಳಿಂದಾಗಿ ಆಗುವಂತಹ ಚರ್ಮದ ಉರಿಯೂತ ಕಡಿಮೆ ಮಾಡುವುದು. ಅವಕಾಡೊ ತೈಲವು ಚರ್ಮದ ಕಾಂತಿ ಹೆಚ್ಚಿಸುವುದು ಮತ್ತು ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ ಗಳಾಗಿರುವ ಲುಥೆನ್ ಮತ್ತು ಜಿಯಾಕ್ಸಾಂಥಿನ್ ನಿಂದಾಗಿ ಇದು ಅಕಾಲಿಕವಾಗಿ ವಯಸ್ಸಾಗುವ ಲಕ್ಷಣ ತಡೆಯುವುದು.
ಜೀರ್ಣಕ್ರಿಯೆ ಸುಧಾರಣೆ ಮಾಡುವುದು
ಸಿಪ್ಪೆ ಹೊಂದಿರುವ ಅವಕಾಡೊದಲ್ಲಿ ನಾರಿನಾಂಶವು ಇದ್ದು, ಇದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಣೆ ಮಾಡುವುದು ಮತ್ತು ಮಲಬದ್ಧತೆ ನಿವಾರಣೆ ಮಾಡುವುದು. ನಾರಿನಾಂಶವು ಕರುಳಿನ ಕ್ರಿಯೆ ಸರಾಗವಾಗಿಸುವುದು ಮತ್ತು ಜೀರ್ಣಕ್ರಿಯೆಗೆ ನೆರವಾಗುವುದು.
ಮೂಳೆಗಳಿಗೆ ಬಲ ನೀಡುವುದು
ಲುಥೆನ್ ಮತ್ತು ಜಿಯಾಕ್ಸಾಂಥಿನ್ ಅಂಶವು ಕಾರ್ಟಿಲೆಜ್ ದೋಷದ ಅಪಾಯ ಕಡಿಮೆ ಮಾಡುವುದು. ಅವಕಾಡೊದಲ್ಲಿ ಖನಿಜಾಂಶಗಳಾಗಿರುವಂತಹ ಸತು, ಪೋಸ್ಪರಸ್, ತಾಮ್ರ, ಕ್ಯಾಲ್ಸಿಯಂ ಮತ್ತು ಸೆಲೆನಿಯಂ ಇದೆ. ಹೀಗಾಗಿ ಇದು ಅಸ್ಥಿರಂಧ್ರತೆ ಸಮಸ್ಯೆಯನ್ನು ಕಡಿಮೆ ಮಾಡುವುದು ಮತ್ತು ಮೂಳೆಯ ಖನಿಜ ಸಾಂದ್ರತೆ ಹೆಚ್ಚಿಸುವುದು.
ಕಣ್ಣಿನ ದೃಷ್ಟಿ ಸುಧಾರಿಸುವುದು
ಬೆಟಾ ಕ್ಯಾರೊಟಿನ್ ಮತ್ತು ಆಂಟಿಆಕ್ಸಿಡೆಂಟ್ ಹೊಂದಿರುವಂತಹ ಅವಕಾಡೊ ಕಣ್ಣಿನ ದೃಷ್ಟಿ ಸುಧಾರಣೆ ಮಾಡಲು ನೆರವಾಗುವುದು. ಲುಥೆನ್ ಮತ್ತು ಜಿಯಾಕ್ಸಾಂಥಿನ್ ಅಂಶವು ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿ ಇಡಲು ಸಹಕಾರಿ ಆಗಿರುವುದು. ರಾತ್ರಿದೃಷ್ಟಿ ಮತ್ತು ಅಲ್ಟ್ರಾವೈಲೆಟ್ ಲೈಟ್(ನೇರಳಾತೀತ ಬೆಳಕು) ನಿಂದಾಗಿ ಆಗುವ ಅಪಾಯ ಕಡಿಮೆ ಮಾಡುವುದು. ಅಧಿಕ ಮಟ್ಟದಲ್ಲಿನ ವಿಟಮಿನ್ ನಿಂಧಾಗಿ ಇದು ವಯಸ್ಸಾದವರಲ್ಲಿ ಕಂಡುಬರುವಂತಹ ಅಕ್ಷಿಪಟಲದ ಅವನತಿ ಕಡಿಮೆ ಮಾಡುವುದು.
ತೂಕ ಇಳಿಸಲು ಸಹಕಾರಿ
ಅವಕಾಡೊದಲ್ಲಿ ಇರುವಂತಹ ನಾರಿನಾಂಶವು ತೂಕ ಇಳಿಸಲು ನೆರವಾಗುವುದು. 100 ಗ್ರಾಂ ಅವಕಾಡೊದಲ್ಲಿ 7 ಗ್ರಾಂನಷ್ಟು ನಾರಿನಾಂಶವಿದೆ ಇದರಲ್ಲಿ ಇರುವ ಬಹುಪರ್ಯಾಪ್ತ ಮತ್ತು ಏಕಪರ್ಯಾಪ್ತ ಕೊಬ್ಬು ತೂಕ ಹೆಚ್ಚಿಸಲು ಸಹಕಾರಿ.
ಹೃದಯ ಸಂಬಂಧಿ ಸಮಸ್ಯೆ ನಿವಾರಿಸುವುದು
ಅವಕಾಡೊ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು. ಅಧಿಕ ರಕ್ತದೊತ್ತಡದಿಂದಾಗಿ ಹೃದಯದ ಸಮಸ್ಯೆಗಳು ಕಂಡುಬರುವುದು. ಆಂಟಿಆಕ್ಸಿಡೆಂಟ್ ಅಂಶ ಮತ್ತು ಏಕಪರ್ಯಾಪ್ತ ಕೊಬ್ಬಿನಿಂದಾಗಿ ಹೃದಯವು ಆರೋಗ್ಯವಾಗಿ ಇರುವುದು. ಇದರಿಂದ ಹೃದಯಾಘಾತದ ಸಮಸ್ಯೆಯು ಕಡಿಮೆ ಆಗುವುದು. ಇದು ಎಲ್ ಡಿಎಲ್ ಮತ್ತು ಎಚ್ ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು.
ವಿಟಮಿನ್ ಕೆ ಕೊರತೆ ನೀಗಿಸುವುದು
ವಿಟಮಿನ್ ಕೆ ಕೊರತೆ ಇದ್ದರೆ ಆಗ ಅದರಿಂದ ರಕ್ತಸ್ರಾವವು ಕಂಡುಬರುವುದು. ಇದು ಹೆಚ್ಚಾಗಿ ಗರ್ಭಿಣಿಯರಲ್ಲಿ ಕಂಡುಬರುವಂತಹ ಸಮಸ್ಯೆಯಾಗಿದೆ. ಗರ್ಭಿಣಿಯರು ಅವಕಾಡೊ ಸೇವಿಸಿದರೆ ಆಗ ಖಂಡಿತವಾಗಿಯೂ ಈ ಸಮಸ್ಯೆಯಿಂದ ಪಾರಾಗಬಹುದು.
ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಕಾರಿ
ಕೊಬ್ಬು ಹೀರಿಕೊಳ್ಳಬಹುದಾದಂತಹ ಹಲವಾರು ಪೋಷಕಾಂಶಗಳು ಅವಕಾಡೊದಲ್ಲಿದೆ. ಇವುಗಳು ಕೊಬ್ಬಿನೊಂದಿಗೆ ಸೇರಿಕೊಂಡು ಅದನ್ನು ದೇಹವು ಸರಿಯಾಗಿ ಬಳಸಿಕೊಳ್ಳುವಂತೆ ಮಾಡುವುದು. ವಿಟಮಿನ್ ಎ, ಡಿ, ಇ ಕೆಲವೊಂದು ಸಸ್ಯಜನ್ಯ ವಿಟಮಿನ್ ಗಳಾಗಿದ್ದು, ಇದನ್ನು ಅವಕಾಡೊ ಜತೆಗೆ ಸರಿಯಾಗಿ ಹೀರಿಕೊಳ್ಳುವುದು.
ಖಿನ್ನತೆ ಅಪಾಯ ಕಡಿಮೆ ಮಾಡುವುದು
ಅವಕಾಡೊ ಹಣ್ಣಿನಲ್ಲಿ ಇರುವಂತಹ ಉನ್ನತ ಮಟ್ಟದ ಫಾಲಟೆ ಅಂಶವು ಖಿನ್ನತೆ ಅಪಾಯ ತಗ್ಗಿಸುವುದು ಮತ್ತು ಮೆದುಳಿನಲ್ಲಿ ಉತ್ತಮ ಭಾವನೆ ಉಂಟು ಮಾಡುವಂತಹ ಡೊಪಮೈನ್ ಮತ್ತು ಸೆರೊಟಿನ್ ರಾಸಾಯನಿಗಳನ್ನು ಬಿಡುಗಡೆ ಮಾಡುವುದು ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ. ಫಾಲಟೆಯು ಹೋಮೋಸಿಸ್ಟೈನ್ ಜಮೆ ಆಗುವುದನ್ನು ತಪ್ಪಿಸುವುದು. ಹೋಮೋಸಿಸ್ಟೈನ್ ಮೆದುಳಿಗೆ ಸರಿಯಾಗಿ ಪೋಷಕಾಂಶಗಳು ಸರಬರಾಜು ಆಗುವುದನ್ನು ತಪ್ಪಿಸುವುದು.