ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು FCI ತಿರಸ್ಕಾರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಕೇಂದ್ರ, ಹೊರ ರಾಜ್ಯಗಳ ಬದಲು ರಾಜ್ಯದ ರೈತರ ಬಳಿ ಅಕ್ಕಿ ಖರೀದಿಸಿ ಎಂದು ಮನವಿ ಮಾಡಿದ್ದಾರೆ.
ರಾಜ್ಯದ ರೈತರಿಂದ ಭತ್ತ, ರಾಗಿ, ಜೋಳವನ್ನು ನೇರವಾಗಿ ಖರೀದಿಸಿ ಅನ್ನಭಾಗ್ಯ ಯೋಜನೆಗೆ ಬಳಸಿ. ಇದರಿಂದ ರಾಜ್ಯದ ರೈತರು, ಜನರಿಗೆ ಅನುಕೂಲವಾಗಲಿದೆ ಎಂದರು.
ಉಚಿತ ವಿದ್ಯುತ್ ಬದಲು ಪ್ರತಿ ಮನೆಗೆ ಸೋಲಾರ್ ವ್ಯವಸ್ಥೆ ಕಲ್ಪಿಸಿ ಅಂತಾನೂ ಸಲಹೆ ನೀಡಿದ್ದಾರೆ.