ನೀವು ಪ್ರತಿದಿನ ಚಹಾದೊಂದಿಗೆ ಬಿಸ್ಕತ್ತುಗಳನ್ನು (tea with biscuit) ಸೇವಿಸಿದರೆ, ಅದು ಉಂಟುಮಾಡಬಹುದಾದ ಹಾನಿಯ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು. ಹೆಚ್ಚಿನ ಜನರಿಗೆ, ಹೆಚ್ಚು ತಿನ್ನುವುದು ಅವರ ದೈನಂದಿನ ಆಹಾರದ ಭಾಗವಾಗಿದೆ, ಆದರೆ ತಜ್ಞರ ಪ್ರಕಾರ, ಇದು ಆರೋಗ್ಯವನ್ನು ಹದಗೆಡಿಸಬಹುದು.
ಬಿಸ್ಕತ್ತುಗಳು ಮತ್ತು ಕುಕೀಗಳನ್ನು (cookies) ತಯಾರಿಸಲು ಮೈದಾ ಹಿಟ್ಟು ಬಳಲಾಗುತ್ತದೆ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಇದು ನಮ್ಮ ಕರುಳಿಗೆ ಕೆಟ್ಟದು. ಮೈದಾ ಹಿಟ್ಟು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ, ರಕ್ತದಲ್ಲಿನ ಸಕ್ಕರೆ, ಉರಿಯೂತ, ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ. ಆದುದರಿಂದ ಬಿಸ್ಕಟ್ ಗಳನ್ನು ಕಡಿಮೆ ತಿನ್ನಬೇಕು.
ಬೊಜ್ಜುಹೆಚ್ಚಾಗುತ್ತದೆ (obesity)
ಸಿಹಿ ಬಿಸ್ಕತ್ತುಗಳು ಹೈಡ್ರೋಜಿನೇಟೆಡ್ ಕೊಬ್ಬುಗಳ ಪ್ರಮಾಣವನ್ನು ಹೊಂದಿರುತ್ತದೆ. ಆದ್ದರಿಂದ ನೀವು ಇದನ್ನು ದೀರ್ಘಕಾಲದವರೆಗೆ ಸೇವಿಸಿದರೆ, ಅದು ಬೊಜ್ಜು ಸಮಸ್ಯೆಗೆ ಕಾರಣವಾಗಬಹುದು ಮತ್ತು ಚರ್ಮದ ಸಮಸ್ಯೆಯೂ ಆಗಬಹುದು.
ಬ್ಲಡ್ಶುಗರ್ (blood sugar)
ಸಿಹಿ ಬಿಸ್ಕತ್ತುಗಳನ್ನು ಟೀ ಜೊತೆ ಹೆಚ್ಚು ಹೆಚ್ಚು ತಿನ್ನುವ ಅಭ್ಯಾಸ ಹೊಂದಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇದರಲ್ಲಿ ಸೋಡಿಯಮ್ ಅಂಶವೂ ಹೆಚ್ಚು. ಮಧುಮೇಹಿಗಳು ಮತ್ತು ಥೈರಾಯ್ಡ್ ರೋಗಿಗಳು ಬಿಸ್ಕತ್ತುಗಳನ್ನು ಸೇವಿಸಬಾರದು.
ರೋಗನಿರೋಧಕಶಕ್ತಿದುರ್ಬಲವಾಗಿಸುತ್ತದೆ (low Immunity power)
ಸಿಹಿ ಬಿಸ್ಕತ್ತುಗಳಲ್ಲಿರುವ ಅಧಿಕ ಸಕ್ಕರೆ ರೋಗ ನಿರೋಧಕ ಶಕ್ತಿಯನ್ನು ಸಹ ಕಡಿಮೆ ಮಾಡುತ್ತದೆ. ಇದರಿಂದ ಅನೇಕ ಸಮಸ್ಯೆಗಳು ಸಹ ಕಾಡುತ್ತವೆ. ಆದುದರಿಂದ ಸಾಧ್ಯವಾದಷ್ಟು ಸಿಹಿ ಬಿಸ್ಕಟ್ ಸೇವನೆಯನ್ನು ಕಡಿಮೆ ಮಾಡೋದು ಉತ್ತಮ.
ಮಲಬದ್ಧತೆಸಮಸ್ಯೆ (constipation)
ಸಿಹಿ ಬಿಸ್ಕತ್ತುಗಳನ್ನು ರಿಫೈಂಡ್ ಹಿಟ್ಟಿನಿಂದ ತಯಾರಿಸಲಾಗುತ್ತದೆ ಮತ್ತು ಫೈಬರ್ ಅಂಶವನ್ನು ಹೊಂದಿಲ್ಲ. ಇದನ್ನು ತಿನ್ನುವುದರಿಂದ ಮಲಬದ್ಧತೆ ಉಂಟಾಗಬಹುದು. ಮತ್ತೊಂದೆಡೆ, ಸಿಹಿ ಬಿಸ್ಕತ್ತುಗಳು ಅಥವಾ ಕುಕೀಗಳಲ್ಲಿರುವ ಮೈದಾ ಅಂಶ ಆರೋಗ್ಯಕ್ಕೂ ಹಾನಿ ಮಾಡುತ್ತವೆ.
ಹಲ್ಲಿನಕೊಳೆತ (cavity)
ಸಿಹಿ ಬಿಸ್ಕತ್ತುಗಳಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚು. ನೀವು ಅದನ್ನು ಪ್ರತಿದಿನ ತಿನ್ನುವಾಗ, ಅದು ಹಲ್ಲುಗಳ ದಂತಕವಚವನ್ನು ಹಾನಿಗೊಳಿಸುತ್ತದೆ. ಇದರಿಂದ ಹಲ್ಲಿನಲ್ಲಿ ಹುಳುಕು ಉಂಟಾಗುವ ಸಾಧ್ಯತೆ ಹೆಚ್ಚು ಹಲ್ಲುಗಳಿಗೆ ಹಾನಿಯಾಗಬಹುದು.
ಹೃದಯಕ್ಕೆಮಾರಕ (heart problem)
ಪ್ರತಿ 25 ಗ್ರಾಂ ಬಿಸ್ಕೆಟ್ ನಲ್ಲಿ 0.4ಗ್ರಾಂ ಉಪ್ಪನ್ನು ಹೊಂದಿರುತ್ತವೆ, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸಬಹುದು. ಹೆಚ್ಚುವರಿ ಸೋಡಿಯಂ ಸೇವನೆಯು ಡಿಹೈಡ್ರೇಶನ್ ಗೆ ಕಾರಣವಾಗುತ್ತದೆ, ಇದರ ಪರಿಣಾಮವಾಗಿ ಹೊಟ್ಟೆ ಉಬ್ಬರ, ಉಬ್ಬುವಿಕೆ ಮತ್ತು ತೂಕ ಹೆಚ್ಚಳ ಸಮಸ್ಯೆ ಕಾಡುತ್ತದೆ.