ಬೆಂಗಳೂರು:- ರಾಜ್ಯದ ಜನತೆ ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರ ಬೀಳಲಿದೆ.
ಹೀಗಾಗಲೇ ಮತ ಎಣಿಕೆ ಆರಂಭವಾಗಿದ್ದು, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಎರದರಲ್ಲಿ ಮುನ್ನಡೆ ಕಾಯ್ದು ಕೊಂಡರೆ ಕಾಂಗ್ರೆಸ್ ಒಂದರಲ್ಲಿ ಮುನ್ನಡೆ ಕಾಯ್ದು ಕೊಂಡಿದೆ. ಶಿಗ್ಗಾಂವಿಯಲ್ಲಿ ಬಿಜೆಪಿಯ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಕಾಂಗ್ರೆಸ್ನ ಅನ್ನಪೂರ್ಣ ತುಕಾರಾಂ ಮುನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 205 ಮತಗಳ ಮುನ್ನಡೆ ಸಾಧಿಸಿದರೆ ಭರತ್ ಬೊಮ್ಮಾಯಿಗೆ 1,567 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು 1,155ಮತಗಳ ಮುನ್ನಡೆ ಸಾಧಿಸಿದ್ದು, ಸಿಪಿ ಯೋಗೇಶ್ವರ್ ಹಿನ್ನಡೆ ಅನುಭವಿಸಿದ್ದಾರೆ.