ಶಿವಮೊಗ್ಗ: ಶಿಕಾರಪುರ ವಿಧಾನಸಭಾ ಕ್ಷೇತ್ರ (Shikaripur Assembly Constituency) ಅಭ್ಯರ್ಥಿ ಬಿವೈ ವಿಜಯೇಂದ್ರ (BY Vijayendra) ಅವರು ಇಂದು (ಏ.19) ರಂದು ನಾಮಪತ್ರ ಸಲ್ಲಿಸಲು ಬಿಎಸ್ ಯಡಿಯೂರಪ್ಪ (BS Yediyurappa) ಅವರೊಂದಿಗೆ ಲಕ್ಕಿ ಅಂಬಾಸಿಡರ್ ಕಾರಿನಲ್ಲಿ ಹೋಗಿದ್ದು ವಿಶೇಷವಾಗಿತ್ತು. ಬಿವೈ ವಿಜಯೇಂದ್ರ ಅವರು ಈ ಅಂಬಾಸಿಡರ್ (Ambassador) ಕಾರಿನಲ್ಲಿ ಹೋಗಲು ಕಾರಣವೂ ಇದೆ. ಬಿಎಸ್ ಯಡಿಯೂರಪ್ಪ ಅವರು ಮೊದಲ ಬಾರಿಗೆ ಶಾಸಕರಾಗಿದ್ದಾಗ ಇದೇ ಅಂಬಾಸಿಡರ್ ಕಾರನ್ನು ಬಳಸಿದ್ದರು. ಈ ಕಾರಿನಲ್ಲಿಯೇ ರಾಜ್ಯವನ್ನು ಸುತ್ತುತ್ತಿದ್ದರು. ಅಲ್ಲದೇ ಬಿಎಸ್ ಯಡಿಯೂರಪ್ಪ ಅವರು ನಾಮಪತ್ರ ಸಲ್ಲಿಸಲು ಹೋಗುವಾಗ ಕೂಡ ಇದೇ ಕಾರನ್ನು ಬಳಸುತ್ತಿದ್ದರು. ಈ ಕಾರು ಬಿಎಸ್ ಯಡಿಯೂರಪ್ಪ ಅವರಗೆ ಲಕ್ಕಿ ಕಾರ್ ಆಗಿದೆ. ಈ ಹಿನ್ನೆಲೆ ಪುತ್ರನ ನಾಮಪತ್ರಿಕೆ ಸಲ್ಲಿಕೆಗೆ ಹೋಗುವಾಗಲೂ ಲಕ್ಕಿ ಕಾರನ್ನೇ ಬಳಸಿದ್ದಾರೆ.
ಇನ್ನು ಬಿಎಸ್ ಯಡಿಯೂರಪ್ಪ ಅವರು ಈ ಬಾರಿ ಚುನಾಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದು, ತಮ್ಮ ಕ್ಷೇತ್ರವನ್ನು ಶಿಕಾರಿಪುರವನ್ನು ಪತ್ರ, ಬಿವೈ ವಿಜಯೇಂದ್ರ ಅವರಿಗೆ ಬಟ್ಟುಕೊಟ್ಟಿದ್ದಾರೆ. ಈ ಹಿನ್ನೆಲೆ ಈ ಬಾರಿ ಬಿವೈ ವಿಜಯೇಂದ್ರ ಅವರು ಶಿಕಾರಿಪುರದಿಂದ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಕೆಗೆ ತೆರಳುವಾಗ ತಂದೆಯವರ ಲಕ್ಕಿ ಕಾರನ್ನೇ ಬಳಸಿದ್ದು, ವಿಶೇಷವಾಗಿತ್ತು.
ಬಿವೈ ವಿಜಯೇಂದ್ರ ಅವರು ನಾಮಪತ್ರ ಸಲ್ಲಿಕೆಗೆ ಹೋಗುವ ಮುಂಚೆ ತಂದೆ ಬಿಎಸ್ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಬಳಿಕ ಲಕ್ಕಿ ಕಾರಿನಲ್ಲಿ ತಂದೆ ಮತ್ತು ಸಹೋದರನೊಂದಿಗೆ ಒಟ್ಟಿಗೆ ಹೋಗಿ ಬಿವೈ ವಿಜಯೇಂದ್ರ ನಾಮಪತ್ರ ಸಲ್ಲಿಸಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರ ಗುರುತು CKR45 ಕಾರು
ಈ ಬಗ್ಗೆ ಪುತ್ರ ಬಿವೈ ವಿಜಯೇಂದ್ರ ಮಾತನಾಡಿ, ಬಿಎಸ್ ಯಡಿಯೂರಪ್ಪ ಅವರ ರಾಜಕಾರಣ ಪ್ರಾರಂಭವಾಗಿದ್ದು ಅಂಬಾಸಿಡರ್ (CKR 45) ಕಾರಿನಲ್ಲಿ. ಈ ಕಾರಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. ಈ ಕಾರನ್ನು ನೋಡಿದರೇ ರಾಜ್ಯದ ಕಾರ್ಯಕರ್ತರಿಗೆ ರೋಮಾಂಚನವಾಗುತ್ತದೆ. ಬಿಜೆಪಿಯ ಗುರುತು ಕಮಲವಾಗಿದ್ದರೇ, ಬಿಎಸ್ ಯಡಿಯೂರಪ್ಪ ಅವರ ಗುರುತು CKR45 ಕಾರು ಎಂದು ಹೇಳಿದರು.