ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಬಾಂಬರ್ ನ ಸಿಸಿಡಿವಿ ಪೋಟೋವನ್ನ ಎನ್ ಐಎ ಬಿಡುಗಡೆ ಮಾಡಿತ್ತು. ಇದೇ ಫೋಟೋವನ್ನ ಆಧಾರವಾಗಿಟ್ಟುಕೊಂಡು ಕಲಾವಿದ ಹರ್ಷ ಎಂಬುವವರು ಬಾಂಬರ್ ನ ರೇಖಾ ಚಿತ್ರ ಬಿಡಿಸಿದ್ದಾರೆ. ಸಿಸಿ ಟಿವಿಯಲ್ಲಿ ಅಸ್ಪಷ್ಟವಾಗಿರುವ ಫೋಟೋವನ್ನು ಅಧಾರಿತವಾಗಿ ಇಮ್ಯಾಜನರಿ ಸ್ಕೆಚ್ ತಯಾರಿಸಿಲಾಗಿದೆ.
ಸಂಪೂರ್ಣ ಮುಖದ ಸ್ಕೇಚ್ ಮಾಡಿರುವ ಸ್ಕೆಚ್ ಆರ್ಟಿಸ್ಟ್ ನಾಲ್ಕು ಆ್ಯಂಗಲ್ ನ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ. ಆರ್ಟಿಸ್ಟ್ ಹರ್ಷ ಇಮ್ಯಾಜಿನರಿ ಸ್ಕೆಚ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಎನ್ ಐ ಎ ಮತ್ತು ನಗರ ಪೊಲೀಸ್ರಿಗೆ ಟ್ಯಾಗ್ ಮಾಡಿದ್ದಾರೆ. ಮಾಸ್ಕ್ ಧರಿಸಿದ ರೀತಿಯಲ್ಲಿ ಹಾಗು ವಿತೌಟ್ ಮಾಸ್ಕ್ ಟೋಪಿ ಕನ್ನಡಕ ಧರಿಸಿದ ಸ್ಕೆಚ್ ರೆಡಿ ಮಾಡಲಾಗಿದೆ. ರಾಮೇಶ್ವರಂ ಕೆಫೆಯ ಬಾಂಬ್ ಸ್ಪೋಟದ ಶಂಕಿತ ವ್ಯಕ್ತಿಯ ಮಾಸ್ಕ್ ಇಲ್ಲದ ಫೋಟೋವನ್ನು ಎನ್ಐಎ ರಿಲೀಸ್ ಮಾಡಿದ್ದು,
ಶಂಕಿತ ಬಾಂಬರ್ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಎನ್ಐಎ ಘೋಷಿಸಿದೆ. ಅಲ್ಲದೇ ಮಾಹಿತಿದಾರರ ಗುರುತನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಎನ್ಐಎ ಹೇಳಿದೆ. ಶಂಕಿತ ಉಗ್ರನ ಸುಳಿವು ಇದ್ರೆ 080-29510900, 8904241100 ಸಂಖ್ಯೆಗೆ ಕರೆ ಮಾಡುವಂತೆ ಎನ್ಐಎ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ ಗೂ ಮೇಲ್ ಮಾಡಿ ಶಂಕಿತನ ಮಾಹಿತಿಯನ್ನು ಅಧಿಕಾರಿಗಳ ಜೊತೆ ಹಂಚಿಕೊಳ್ಳಬಹುದಾಗಿದೆ.