ಬೆಂಗಳೂರು: 500 ಕೊಟ್ಟು ಜನರನ್ನು ಕರೆಸಬೇಕು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, 500 ಕೊಟ್ಟು ಜನರನ್ನ ಕರೆಸಬೇಕು ಎಂಬ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರ ಸುಳ್ಳು, ಆ ಪದ್ದತಿ ನಮಗೆ ಬೇಕಿಲ್ಲ ಎಂದರು. ಇನ್ನೂ ಸರ್ಕಾರದವರು ಏನೇ ಗ್ಯಾರಂಟಿ ಕೊಡಲಿ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಹೇಳ್ತಿದ್ದೇನೆ, 7ನೇ ವೇತನ ಆಯೋಗವನ್ನು ನಾವು ಜಾರಿಗೊಳಿಸುತ್ತೇವೆ ಅಂತ ಹೇಳಿದ್ವಿ. ಅದನ್ನು ನೋಡಿ ಬಿಜೆಪಿಯವರು ಮಧ್ಯಂತರ ಪರಿಹಾರ ನೀಡಿದ್ದಾರೆ. ಮೊದಲು ಆಗಲ್ಲ ಅಂತ ಹೇಳುತ್ತಿದ್ದರು. ನಾವು ನೌಕರರ ಜೊತೆ ನಿಲ್ಲುತ್ತೇವೆ ಅಂದಾಗ ಈಗ ಆದೇಶ ಹೊರಡಿಸಿದ್ದಾರೆ. ಮೋದಿಯವರು ಎಲೆಕ್ಷನ್ ಟೈಮಿಗೆ ಬರುತ್ತಾರೆ. ಇದು ವೋಟಿಗಾಗಿ ಭೇಟಿ ಅಷ್ಟೇ. ಭ್ರಷ್ಟ ಆಡಳಿತವನ್ನು ತೆಗೆಯಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ ” ಎಂದು ಕಿಡಿ ಕಾರಿದರು