ಮಧುಮೇಹಿಗಳು ದಾಳಿಂಬೆ ಹಣ್ಣು ಸೇವಿಸಬಹುದೇ? ಬೇಡವೇ? ಎಂಬ ಗೊಂದಲ ಹಲವರಲ್ಲಿದೆ. ಹಾಗಾಗಿ ಇದರ ಬಗ್ಗೆ ತಿಳಿಯೋಣ.
ದಾಳಿಂಬೆಯಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತದೆ, ಕಬ್ಬಿಣ, ವಿಟಮಿನ್ ಸಿ, ಕೆ, ಫೈಬರ್, ಒಮೆಗಾ 6 ಕೊಬ್ಬಿನಾಮ್ಲ, ಪೊಟ್ಯಾಶಿಯಂ, ಸತು ಮುಂತಾದವು ಕಂಡುಬರುತ್ತದೆ. ಇದು ದೇಹದ ಬೆಳವಣಿಗೆಗೆ ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಇದನ್ನು ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.
ಮಧುಮೇಹಿಗಳು ದಾಳಿಂಬೆ ಹಣ್ಣುಗಳನ್ನು ಸೇವಿಸಬಹುದು. ಇದರಲ್ಲಿರುವ ಫೈಬರ್ ಅಂಶ ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಆಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿರುವ ಕಾರಣ ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.