ಖಲಿಸ್ತಾನಿ ಉಗ್ರ ಹಾಗೂ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಬಳಿಕ ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಸಂಘರ್ಷ ಹೆಚ್ಚಾಗಿದೆ. ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸುವ ಅಥವಾ ಕೆನಡಿಯನ್ನರ ಜೀವನವನ್ನು ಅಪಾಯಕ್ಕೆ ಸಿಲುಕಿಸುವ ಯಾವುದೇ ರಾಜತಾಂತ್ರಿಕರನ್ನು ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿರುವ ಕೆನಡಾ ಭಾರತವನ್ನು ರಷ್ಯಾಗೆ ಹೋಲಿಕೆ ಮಾಡಿದೆ.
ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನರ್ ಸಿಖ್ ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ಗೊತ್ತಾದ ಬಳಿಕ ಭಾರತೀಯ ರಾಜತಾಂತ್ರಿಕರಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಅವರು ಹೇಳಿದ್ದಾರೆ.
ಅಲ್ಲದೆ, ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸುವ ಅಥವಾ ಕೆನಡಿಯನ್ನರ ಜೀವನವನ್ನು ಅಪಾಯಕ್ಕೆ ಸಿಲುಕಿಸುವ ಯಾವುದೇ ರಾಜತಾಂತ್ರಿಕರನ್ನು ಸರ್ಕಾರ ಸಹಿಸುವುದಿಲ್ಲ ಎಂದು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ರಾಜತಾಂತ್ರಿಕರು ಕೆನಡಾದಲ್ಲಿ ನರಹತ್ಯೆಗಳು, ಕೊಲೆ ಬೆದರಿಕೆಗಳು ಮತ್ತು ಬೆದರಿಕೆಗಳಿಗೆ ಸಂಬಂಧಿಸಿದಂತೆ ಕೆನಡಾದ ರಾಷ್ಟ್ರೀಯ ಪೊಲೀಸ್ ಪಡೆ ಗಮನಿಸುತ್ತಿದೆ. ನಮ್ಮ ಇತಿಹಾಸದಲ್ಲಿ ನಾವು ಇಂತಹದ್ದನ್ನು ನೋಡಿಲ್ಲ. ಕೆನಡಾದ ನೆಲದಲ್ಲಿ ಆ ಮಟ್ಟದ ಅಂತರಾಷ್ಟ್ರೀಯ ದಮನ ನಡೆಸಲು ನಾವು ಬಿಡುವುದಿಲ್ಲ. ನಾವು ಯುರೋಪಿನ ಬೇರೆಡೆ ನೋಡಿದ್ದೇವೆ, ಜರ್ಮನಿ ಮತ್ತು ಯುಕೆಯಲ್ಲಿ ರಷ್ಯಾ ಇಂತಹದ್ದನ್ನು ಮಾಡಿದೆ. ನಾವು ಈ ವಿಷಯದಲ್ಲಿ ದೃಢವಾಗಿ ನಿಲ್ಲುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಇತರ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜೋಲಿ, ಅವರಿಗೆ ಈಗಾಗಲೇ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಒಟ್ಟಾವಾದಲ್ಲಿನ ಹೈಕಮಿಷನರ್ ಸೇರಿದಂತೆ ಆರು ಮಂದಿಯನ್ನು ಈಗಾಗಲೇ ಹೊರಹಾಕಲಾಗಿದೆ. ಇತರರು ಮುಖ್ಯವಾಗಿ ಟೊರೊಂಟೊ ಮತ್ತು ವ್ಯಾಂಕೋವರ್ನಿಂದ ಬಂದವರಿಗೆ ಸ್ಪಷ್ಟವಾಗಿ ಸೂಚನೆ ಕೊಡಲಾಗಿದೆ. ವಿಯೆನ್ನಾ ಸಮಾವೇಶಕ್ಕೆ ವಿರುದ್ಧವಾಗಿರುವ ಯಾವುದೇ ರಾಜತಾಂತ್ರಿಕರನ್ನು ನಾವು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.