ಕೆನಡಾ ದೇಶದ ರಾಜಕೀಯದಲ್ಲಿ ಹಠಾತ್ ಬದಲಾವಣೆಯಾಗಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಏಕಾಏಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕೆನಾಡದಲ್ಲಿ ಲಿಬರಲ್ ಪಕ್ಷದ ಆಡಳಿತ ಕೊನೆಗೊಳಿಸಿದ್ದಾರೆ.
ಈ ಹಿಂದೆ ಊಹೆ ಮಾಡಿದಂತೆ ಜಸ್ಟಿನ್ ಟ್ರುಡೊ ತಮ್ಮ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಪಕ್ಷಕ್ಕೆ ಹೊಸ ನಾಯಕತ್ವ ಬೇಕು ಎಂಬ ಕಾರಣಕ್ಕೆ ಟ್ರುಡೊಗೆ ಪಕ್ಷದ ನಾಯಕರೇ ಇತ್ತೀಚೆಗೆ ಟ್ರುಡೊ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು.ಜೊತೆಗೆ ಪಕ್ಷಕ್ಕೆ ಇತ್ತೀಚೆಗೆ ಜನರ ಬೆಂಬಲವು ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಟ್ರುಡೋ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ಹಲವು ತಿಂಗಳಿಂದ ಟ್ರುಡೊ ರಾಜೀನಾಮೆಗೆ ಪಕ್ಷದ ಸದಸ್ಯರು ಬೇಡಿಕೆಯಿಟ್ಟಿದ್ದರು. ಇತ್ತೀಚಿಗೆ ಬಂದ ಚುನಾವಣಾ ಸಮೀಕ್ಷೆಗಳು ಟ್ರುಡೊ ನಾಯಕತ್ವನ್ನು ಪ್ರಶ್ನಿಸುವಂತಿದ್ದವು. 2015ರ ಬಳಿಕ ಅತ್ಯಂತ ಕಡಿಮೆ ಪ್ರತಿಶತ ಮತ ಬೀಳುವ ಸೂಚನೆಯನ್ನು ನೀಡಿದ್ದವು ಅದು ಅಲ್ಲದೇ ಟೊರೊಂಟೊ ಉಪಚುನಾವಣೆಯಲ್ಲಿ ಈ ಹಿಂದೆಂದೂ ಕಂಡು ಕೇಳರಿಯದ ರೀತಿ ಪಕ್ಷ ಸೋಲುಂಡಿತ್ತು. ಸದ್ಯ ಟ್ರುಡೊ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇದೀಗ ಟ್ರೊಡೊ ಆಪ್ತ ಕೆನಾಡದ ಹಣಕಾಸು ಸಚಿವ ಡೊಮಿನಿಕ್ ಲೆಬ್ಲಾನ್ಸ್ ಅವರನ್ನು ಸದ್ಯ ಮಧ್ಯಂತರ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.