ಹೋಳಿ ಹಬ್ಬವು ಹಿಂದೂಗಳ ಅತ್ಯಂತ ಪ್ರಸಿದ್ಧ ಮತ್ತು ದೇಶಾದ್ಯಂತ ಆಚರಿಸಲಾಗುವ ಅತ್ಯಂತ ವರ್ಣರಂಜಿತ ಹಬ್ಬಗಳಲ್ಲಿ ಒಂದಾಗಿದೆ. ಹೋಳಿ ಅಥವಾ ಓಕುಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಬಾರಿ ಫಾಲ್ಗುಣ ಮಾಸದ ಹುಣ್ಣಿಮೆ ತಿಥಿಯಂದು ಅಂದರೆ ಮಾ. 25 ರಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು. ಈ ಆಚರಣೆಯ ಹಿಂದೆ ಹಲವಾರು ಪೌರಾಣಿಕ ಕಥೆಗಳಿವೆ. ಆ ಪ್ರಕಾರವಾಗಿ ಹಬ್ಬವನ್ನು ವಿವಿಧ ನಂಬಿಕೆ ಅನುಗುಣವಾಗಿ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಹಬ್ಬವು ಸಂತೋಷದಿಂದ ಕೂಡಿರಬೇಕು. ಈ ರೀತಿ ನಡೆಯಬೇಕಂದರೆ ಸಿಂಥೆಟಿಕ್ ಬಣ್ಣಗಳನ್ನು ಬಳಸದಂತೆ ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಈ ಬಣ್ಣಗಳ ತಯಾರಿಕೆಯಲ್ಲಿ ತಾಮ್ರ, ಸಿಲಿಕಾ, ಸೀಸ, ಆರ್ಸೆನಿಕ್ ಮುಂತಾದ ಅನೇಕ ವಿಷಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹಾಗೆಯೇ.. ಅಭ್ರಕ, ಗ್ಲಾಸ್ ಗ್ರ್ಯಾನ್ಯೂಲ್ಸ್, ಕಲ್ನಾರಿನಂತಹ ಕೆಲವು ವಸ್ತುಗಳನ್ನು ಸಹ ಬಳಸಲಾಗುತ್ತದೆ. ಹಾಗಾಗಿ ಇವುಗಳನ್ನು ಬಳಸದಂತೆ ಸೂಚಿಸಲಾಗಿದೆ.
ಈ ಮುನ್ನೆಚ್ಚರಿಕೆಗಳು ಕಡ್ಡಾಯ
ಸಿಂಥೆಟಿಕ್ ಬಣ್ಣಗಳನ್ನು ಬಳಸಿದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಡಾ. ಅರೋರಾ ಸೂಚಿಸುತ್ತಾರೆ. ಮುಖದ ಮೇಲೆ ನೇರವಾಗಿ ಬಣ್ಣಗಳನ್ನು ಸಿಂಪಡಿಸಬೇಡಿ. ಇದರಿಂದಾಗಿ ಕಣ್ಣಿಗೆ ಬೀಳುವ ಸಾಧ್ಯತೆ ಇದೆ.
ಬಣ್ಣವು ಕಣ್ಣುಗಳಲ್ಲಿ ಬಿದ್ದರೆ, ಕಣ್ಣುಗಳನ್ನು ಉಜ್ಜಬಾರದು ಅಥವಾ ತಿಕ್ಕಿಕೊಳ್ಳಬಾರದು. ಹಾಗೆ ಮಾಡಿದರೆ ಕಣ್ಣಿನ ಪದರಗಳ ನಡುವೆ ಘರ್ಷಣೆ ಉಂಟಾಗಿ ಕಾರ್ನಿಯಾಕ್ಕೆ ಹಾನಿಯಾಗುವ ಸಾಧ್ಯತೆ ಇದೆ.
ಕಣ್ಣುಗಳಲ್ಲಿ ಬಣ್ಣ ಬಿದ್ರೆ ತಕ್ಷಣವೇ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ, ಶುದ್ಧ ನೀರನ್ನು ತೆಗೆದುಕೊಂಡು ನಿಮ್ಮ ಕಣ್ಣುಗಳನ್ನು ಅದರಲ್ಲಿ ಮುಳುಗಿಸಿ.
ಕಣ್ಣಿನಲ್ಲಿ ನೀರು ಎರಚುವುದು, ಕರವಸ್ತ್ರ ಅಥವಾ ಟಿಶ್ಯೂ ಬಳಸಿ ಕಣ್ಣಿನಲ್ಲಿ ಅಂಟಿಕೊಂಡಿರುವ ಬಣ್ಣವನ್ನು ತೆಗೆಯುವುದು ಮಾಡಬೇಡಿ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಕಣ್ಣುಗಳನ್ನು ಸ್ವಚ್ಛಗೊಳಿಸಿದರೂ ಸಮಸ್ಯೆ ಹಾಗೇ ಮುಂದುವರಿದ್ರೆ, ತಕ್ಷಣವೇ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸೂಚನೆಯಿಲ್ಲದೇ ಕಣ್ಣಿನ ಡ್ರಾಪ್ಗಳನ್ನು ಬಳಸಬೇಡಿ.
ಹೋಳಿ ಬಣ್ಣಗಳಲ್ಲಿ ಇರುವ ರಾಸಾಯನಿಕಗಳು ಕಣ್ಣಿಗೆ ಅಷ್ಟೇ ಅಲ್ಲ ಚರ್ಮದ ಮೇಲೆಯೂ ಪರಿಣಾಮ ಬೀರುತ್ತವೆ. ಅದರಿಂದ ಅಲರ್ಜಿಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ. ಕಾಂಟ್ಯಾಕ್ಟ್ ಡರ್ಮಟೈಟಿಸ್ ನಂತಹ ಸಿಂಥೆಟಿಕ್ ಬಣ್ಣಗಳ ಬಳಕೆಯಿಂದ.. ವಿವಿಧ ಚರ್ಮದ ಅಲರ್ಜಿಗಳು ಉಂಟಾಗುವ ಸಾಧ್ಯತೆಯಿದೆ ಎಂಬುದು ಅಧ್ಯಯನಗಳ ಪ್ರಕಾರ ತಿಳಿದು ಬಂದಿದೆ.
ಹೋಳಿ ಆಡಿದ ನಂತರ ಚರ್ಮದ ಮೇಲೆ ತುರಿಕೆ, ದದ್ದುಗಳಂತಹ ಲಕ್ಷಣಗಳು ಕಾಣಿಸಿಕೊಂಡರೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಅಗತ್ಯ ಎಂದು ಸೂಚಿಸಲಾಗಿದೆ.
ಸಿಂಥೆಟಿಕ್ ಬಣ್ಣಗಳಿಂದ ಉಸಿರಾಟ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಅಸ್ತಮಾ, ಬ್ರಾಂಕೈಟಿಸ್ ಅಥವಾ COPD ಯಂತಹ ಉಸಿರಾಟದ ಪರಿಸ್ಥಿತಿಗಳಿಂದ ಬಳಲುತ್ತಿರುವ ಜನರು ಈ ಬಣ್ಣಗಳನ್ನು ತಪ್ಪಿಸಲು ಸಲಹೆ ನೀಡುತ್ತಾರೆ ಆರೋಗ್ಯ ತಜ್ಞರು. ನೀವು ಸಿಂಥೆಟಿಕ ರಾಸಾಯನಿಕಗಳಿಗೆ ಒಡ್ಡಿಕೊಂಡರೆ ಗೊರಕೆ, ಕೆಮ್ಮು ಸೇರಿದಂತೆ ಇತರೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಎಚ್ಚರಿಸಲಾಗಿದೆ.
ಹಾಗಾಗಿ.. ಸಾಧ್ಯವಾದಷ್ಟು ನೈಸರ್ಗಿಕ ಬಣ್ಣಗಳನ್ನೇ ಬಳಸುವಂತೆ ಆರೋಗ್ಯ ತಜ್ಞರು ಸೂಚಿಸುತ್ತಾರೆ.