ರಷ್ಯಾ: ವೈದ್ಯ ವಿಜ್ಞಾನ ಲೋಕಕ್ಕೆ ರಷ್ಯಾ ಸಿಹಿ ಸುದ್ದಿ ನೀಡಿದೆ. ರಷ್ಯಾದ ವಿಜ್ಞಾನಿಗಳು ಕ್ಯಾನ್ಸರ್ಗೆ ಲಸಿಕೆ ಕಂಡು ಹಿಡಿಯುವ ಅಂತಿಮ ಹಂತದಲ್ಲಿದ್ದು, ಅತಿ ಶೀಘ್ರದಲ್ಲೇ ರೋಗಿಗಳಿಗೆ ಕ್ಯಾನ್ಸರ್ ಲಸಿಕೆ ಲಭ್ಯ ಆಗಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಹೊಸ ತಲೆಮಾರಿನ ಇಮ್ಯುನೋಮಾಡ್ಯುಲೇಟರಿ ಔಷಧಗಳನ್ನು ಜನಪ್ರಿಯವಾಗಿ ಕ್ಯಾನ್ಸರ್ ಲಸಿಕೆ ಎಂದು ಕರೆಯಲಾಗುತ್ತದೆ. ಈ ಔಷಧವನ್ನು ಅಭಿವೃದ್ಧಿಪಡಿಸುವ ಅಂತಿಮ ಹಂತದಲ್ಲಿ ನಮ್ಮ ವಿಜ್ಞಾನಿಗಳು ಇದ್ದಾರೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಟೆಲಿವಿಷನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ವೈಯಕ್ತಿಕವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಪದ್ದತಿಯು ಪರಿಣಾಮಕಾರಿಯಾಗಲಿದೆ. ಶೀಘ್ರದಲ್ಲೇ ಈ ಚಿಕಿತ್ಸೆ ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಭವಿಷ್ಯದ ತಂತ್ರಜ್ಞಾನ ಕುರಿತಾಗಿ ಮಾಸ್ಕೋನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಟಿನ್ ಹೇಳಿದ್ದಾರೆ. ಆದರೆ ಸ್ಪಷ್ಟವಾಗಿ ಯಾವ ವಿಧದ ಕ್ಯಾನ್ಸರ್ ವಿರುದ್ಧ ರಷ್ಯಾ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದಿದ್ದಾರೆ ಅನ್ನೋ ಮಾಹಿತಿಯನ್ನು ಪುಟಿನ್ ವಿವರಿಸಿಲ್ಲ.