ಬೆಂಗಳೂರು: ರಾಜ್ಯ ಸರ್ಕಾರದ ೫ ಗ್ಯಾರಂಟಿಯಲ್ಲಿ ಅನ್ನ ಭಾಗ್ಯ ಕೂಡ ಒಂದು.. ಆದ್ರೆ ಇದನ್ನು ಕಂಡು ಕೇಂದ್ರ ಸರ್ಕಾರ ಭಾರತ್ ಅಕ್ಕಿಯನ್ನು ಜಾರಿ ಮಾಡಿ ಕೇವಲ ಒಂದು ವಾರವಷ್ಟೇ ಕಳೆದಿದೆ. ಈ ಒಂದು ವಾರದಲ್ಲಿ ಮೊದಲನೇ ದಿನ ಮಾತ್ರ ಸ್ಟಾಕ್ ಬಂದಿದ್ದು ಈಗ ಔಟ್ ಆಫ್ ಸ್ಟಾಕ್ ಆಗಿದೆ.. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಧವಸ ಧಾನ್ಯಗಳನ್ನು ಒದಗಿಸುವ ಕೇಂದ್ರ ಸರ್ಕಾರದ ಯೋಜನೆ ಆರಂಭದಲ್ಲಿಯೇ ಎಡವಿ ಬಿದ್ದಿದೆ. 60 ರೂ. ಗಳಿಗೆ ಭಾರತ್ ತೊಗರಿ ಬೇಳೆ ಹಾಗೂ 29 ರೂ. ಗಳಿಗೆ ಭಾರತ್ ಅಕ್ಕಿ ಪ್ರತಿ ಕೆಜಿಗೆ ದೊರೆಯುವುದೆಂದು ಕಾದಿದ್ದ ಗ್ರಾಹಕರಿಗೆ ಪೂರೈಕೆಯ ಅಭಾವದ ನಿರಾಸೆ ಉಂಟು ಮಾಡಿದೆ.
ಬೆಂಗಳೂರು ಸೇರಿದಂತೆ ಹಲವೆಡೆ ಯೋಜನೆ ಉದ್ಘಾಟನಗೊಂಡ ದಿನ ಸಾಂಕೇತಿಕವಾಗಿ ನೀಡಲು 100 ಚೀಲಗಳನ್ನು ಪೂರೈಸಲಾಗಿತ್ತು. ಬಳಿಕ ಎಲ್ಲೂ ಸಹ ಭಾರತ್ ಅಕ್ಕಿ ಮತ್ತು ಭಾರತ್ ಬೇಳೆ ಕಾಣಿಸಿಕೊಂಡಿಲ್ಲ. ಇದರ ಎಕ್ಲೂಸಿವ್ ದೃಶ್ಯ ನಮ್ಮ ಕ್ಯಾಮೆರಾ ದಲ್ಲಿ ಸೆರೆಯಾಗಿದೆ..
ಸೂಪರ್ ಮಾರ್ಕೆಟ್ ಮತ್ತು ಇ-ಕಾಮರ್ಸ್ ಮುಖಾಂತರವೂ ಮಾರಾಟ ಮಾಡುವುದಲ್ಲದೇ ತೆರೆದ ವಾಹನಗಳಲ್ಲಿ ನಗರದ ಪ್ರತಿ ಮುಖ್ಯರಸ್ತೆಗಳಲ್ಲೂ ಭಾರತ್ ಅಕ್ಕಿ ಮತ್ತು ಬೇಳೆ ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಹಣದುಬ್ಬರದಿಂದಾಗಿ ಪ್ರತಿ ಅಕ್ಕಿ ಕೆಜಿಗೆ ಕನಿಷ್ಠ 50 ರೂ. ಹಾಗೂ ತೊಗರಿ ಬೇಳೆ ಪ್ರತಿಕೆಜಿಗೆ 150 ರೂ. ತಲುಪಿದೆ. ಇದರಿಂದಾಗಿ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯ ಕೊಳ್ಳಲು ಉತ್ಸುಕರಾಗಿದ್ದ ಗ್ರಾಹಕರಿಗೆ ನಿರಾಶೆಯುಂಟಾಗಿದೆ.