ಬೆಂಗಳೂರು: ವರ್ಷಪೂರ್ತಿ ಎಸ್.ಆರ್. ಬೊಮ್ಮಾಯಿ ಜಯಂತಿ ಆಚರಿಸಲಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ನಿನ್ನೆ ಆಯೋಜಿಸಿದ ದಿ. ಎಸ್.ಆರ್. ಬೊಮ್ಮಾಯಿ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಶತಮಾನೋತ್ಸವ ಕಾರ್ಯಕ್ರಮವನ್ನು ಮುಂದಿನ ಒಂದು ವರ್ಷಗಳ ಕಾಲ ಅವರ ಹುಟ್ಟೂರಿನಿಂದ ದೆಹಲಿ ವರೆಗೆ ಆಚರಿಸಲಾಗುವುದು.
ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿಗಳಾದ ಎಸ್.ಆರ್. ಬೊಮ್ಮಾಯಿ, ಎಸ್.ಎಂ. ಕೃಷ್ಣ ಮತ್ತು ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಸಾಮ್ಯತೆ ಇದೆ. ಈ ಮೂರೂ ಜನರಿಗೆ ಯಾರೊಬ್ಬರು ಗಾಡ್ಫದರ್ಗಳಿಲ್ಲದೆ ಹೋರಾಟದ ಮೂಲಕವೇ ರಾಜಕೀಯ ನಡೆಸಿದವರು.
ಅವರವರ ಕಾಲ ಘಟ್ಟಕ್ಕೆ ಸ್ಪಂದಿಸಿ ಹೊಸ ವಿಚಾರ ಮತ್ತು ಮನ್ವಂತರವನ್ನು ಹಾಕಿಕೊಟ್ಟಿದ್ದಾರೆ. ಆದ್ದರಿಂದ ಎಲ್ಲ ನಾಯಕರನ್ನು ಒಂದೇ ಅಳತೆಯಲ್ಲಿ ನೋಡಲು ಸಾಧ್ಯವಿಲ್ಲ. ಅಂದಿನ ಕಾಲಘಟ್ಟ, ಸವಾಲುಗಳು, ದೇಶ ಮತ್ತು ರಾಜ್ಯದ ಪರಿಸ್ಥಿತಿಯನ್ನು ಕಂಡು ಆಡಳಿತ ನಡೆಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.