ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗಡಿ ಜಿಲ್ಲೆ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರ ಜೊತೆ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಹುತಾತ್ಮರಾದ ನಾಲ್ವರಲ್ಲಿ 63 ರಾಷ್ಟ್ರೀಯ ರೈಫಲ್ಸ್ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ಮಾಜಿ ನಿರ್ದೇಶಕ ಎಂ.ವೆಂಕಟೇಶ್ ಅವರ ಪುತ್ರ. ಪ್ರಾಂಜಲ್, ದೆಹಲಿ ಪಬ್ಲಿಕ್ ಸ್ಕೂಲ್, MRPL ನ ಹಳೆಯ ವಿದ್ಯಾರ್ಥಿಯಾಗಿದ್ದರು
ಮಗನ ಸಾವಿನ ಹಿನ್ನೆಲೆ ಮನೆಯಲ್ಲಿ ನೀರವ ಮೌನ ಪ್ರಾಂಜಲ್ ಪೋಷಕರನ್ನು ಸಂತೈಸಲು ಆಗಮಿಸುತ್ತಿರುವ ಸಂಬಂಧಿಗಳು ನೋವಿನಲ್ಲಿರುವ ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಕಳೆದ ಆರು ತಿಂಗಳ ಹಿಂದೆ ಮನೆಗೆ ಆಗಮಿಸಿದ್ದ ಪ್ರಾಂಜಲ್ ಮನೆಯಲ್ಲಿ ಹಮ್ಮಿಕೊಂಡಿದ್ದ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು ಒಂದು ವಾರ ಪೋಷಕರ ಜೊತೆ ಇದ್ದು ಕರ್ತವ್ಯಕ್ಕೆ ಮರಳಿದ್ದ ಪ್ರಾಂಜಲ್
ಜಿಗಣಿ ಸಮೀಪದ ನಂದನ ವನ ಬಡಾವಣೆಯಲ್ಲಿರುವ ನಿವಾಸ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಕಳೆದ ಆರು ತಿಂಗಳಿಂದ ಪ್ರಾಂಜಲ್ ಪೋಷಕರು ವಾಸ ಆರು ತಿಂಗಳ ಹಿಂದೆ ಇಲ್ಲಿಗೆ ಬಂದು ಹೋಗಿದ್ದ ಹುತಾತ್ಮ ಯೋಧ ಪ್ರಾಂಜಲ್
ಕಾಶ್ಮೀರಕ್ಕೆ ತೆರಳುವ ಮೊದಲು ವಿವಾಹ ಆಗಿದ್ದ ಕ್ಯಾಪ್ಟನ್ ಪ್ರಾಂಜಲ್…ಎರಡು ವರ್ಷದ ಹಿಂದೆ
ಪ್ರಾಂಜಲ್ ಕಾಶ್ಮೀರಕ್ಕೆ ತೆರಳಿದ್ದರು. ಬೆಂಗಳೂರಿನ ಅದಿತಿ ಎಂಬುವವರ ಜೊತೆ ವಿವಾಹ.. ಸದ್ಯ ಚೆನ್ನೈ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅದಿತಿ ಪತಿ ನಿಧನ ಹಿನ್ನೆಲೆ ಜಿಗಣಿ ಸಮೀಪದ ಬುಕ್ಕಸಾಗರ ನಿವಾಸಕ್ಕೆ ಆಗಮಿಸಿರುವ ಪತ್ನಿ.ಪ್ರಾಂಜಲ್ ಸ್ವಂತ ಹುಟ್ಟೂರು ಮೈಸೂರು. ಶಾಲಾ ಕಾಲೇಜು ಮಂಗಳೂರಿನಲ್ಲಿ ಆಗಿತ್ತು.
ಬಳಿಕ ಆರ್ಮಿ ಕಾಲೇಜು ಮದ್ಯ ಪ್ರದೇಶದ ಮಹು ಕಾಲೇಜು ಕಾಶ್ಮೀರದಲ್ಲಿ ಎರಡು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ರು.. ದಸರಾ ಸಂದರ್ಭದಲ್ಲಿ ಮನೆಗೆ ಬಂದು ಹೋಗಿದ್ದ ಕ್ಯಾಪ್ಟನ್ ಪ್ರಾಂಜಲ್ ಉಗ್ರರ ಜೊತೆ ಹೋರಾಡಿ ಕ್ಯಾಪ್ಟನ್ ಎಂ.ವಿ ಪ್ರಾಂಜಲ್(29)ಹುತಾತ್ಮ ಮಂಗಳೂರಿನ ಎಂಆರ್ ಪಿಎಲ್ ನ ನಿವೃತ್ತ ಆಡಳಿತ ನಿರ್ದೇಶಕ ಎಂ ವೆಂಕಟೇಶ್ ಅವರ ಏಕೈಕ ಪುತ್ರ.
ಸದ್ಯ ಬುಕ್ಕಸಾಗರದ ನಂದನವನ ಬಡಾವಣೆಯಲ್ಲಿ ನೆಲೆಸಿರುವ ವೆಂಕಟೇಶ್ ಕುಟುಂಬ ವೆಂಕಟೇಶ್ ಮನೆ ಬಳಿ ಆಗಮಿಸುತ್ತಿರುವ ಆಪ್ತರು ಹಾಗೂ ಕುಟುಂಬಸ್ಥರುಸದ್ಯ ನಿವಾಸದ ಬಳಿ ಆವರಿಸಿರುವ ಮೌನ