ಬೆಂಗಳೂರು:- ಫ್ಲೈ ಓವರ್ ಮೇಲೆ ಹೋಗಲು ಕಾರು ಸವಾರನ ಭಾರೀ ಹೈಡ್ರಾಮ ನಡೆಸಿರುವ ಘಟನೆ ಜರುಗಿದೆ.
ಶಾಸಕರ ಬೋರ್ಡ್ ಹಾಕಿಕೊಂಡು ಸವಾರರು ಬಂದಿದ್ದು, ಹಾರ್ಟ್ ಪೇಷಂಟ್ ಇದ್ದಾರೆ ಎಮರ್ಜೆನ್ಸಿ ಹೋಗಬೇಕೆಂದು ಹೈಡ್ರಾಮ ಮಾಡಿದ್ದಾರೆ. ಕಾರಿನಲ್ಲಿ ಹಾರ್ಟ್ ಪೇಷಂಟ್ ಮಹಿಳೆ ಇದ್ದಾರೆಂದು ಕಥೆ ಕಟ್ಟಿದ್ದರು. ಕಾರಿನಲ್ಲಿ ಪರಿಶೀಲನೆ ನಡೆಸಿದ್ರೆ ಮಹಿಳೆ ಇರಲಿಲ್ಲ.
ಮಾಧ್ಯಮಗಳ ಕ್ಯಾಮರಾ ಕಾಣುತ್ತಿದ್ದಂತೆ ಆಸಾಮಿ ಶಾಸಕರ ಬೋರ್ಡ್ ತೆಗೆದಿರುವ ದೃಶ್ಯ ಕಂಡು ಬಂದಿದೆ.