ಬೆಂಗಳೂರು:- ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ ಮಗು ಸಾವು ಕೇಸ್ ಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ತನಿಖಾ ತಂಡವು ತಾಯಿ ಮತ್ತು 9 ತಿಂಗಳ ಕಂದಮನ ಸಾವಿಗೆ ಬೆಸ್ಕಾಂ ಅಧಿಕಾರಿಗಳೇ ನೇರ ಹೊಣೆ ಎಂದು ಹೇಳಿದೆ.
ವಿದ್ಯುತ್ ಪರಿವೀಕ್ಷಣಾಲಯದ ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಸತ್ಯ ಬಯಲಾಗಿದೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಹಿಳೆ ಸೌಂದರ್ಯ ಹಾಗೂ 9 ತಿಂಗಳ ಮಗು ಬಲಿಯಾಗಿದೆ. ನವೆಂಬರ್ 19 ರ ಬೆಳಗ್ಗೆ ಕಾಡುಗೋಡಿ ಬಳಿಯ ಹೋ ಫಾರ್ಂ ಬಳಿ ವಿದ್ಯುತ್ ಅವಘಡ ಸಂಭವಿಸಿತ್ತು. ಪುಟ್ ಪಾತ್ ಮೇಲೆ ತಾಯಿ ಮತ್ತು 9 ತಿಂಗಳ ಮಗು ಧಗಧಗನೇ ಹೊತ್ತಿ ಉರಿದಿತ್ತು.
ಬೆಸ್ಕಾಂ ಬೇಜವಾಬ್ದಾರಿ ತನಕ್ಕೆ ಅಮಾಯಕರು ಬಲಿಯಾದ್ರು. ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ರೆ ಎರಡು ಸಾವಾಗುತ್ತಿರಲಿಲ್ಲ. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದಿಂದಲೇ ಈ ಸಾವು ಸಂಭವಿಸಿದೆ. ಈ ಬಗ್ಗೆ ವರದಿ ನೀಡಿದ ವಿದ್ಯುತ್ ಪರಿವೀಕ್ಷಣಾಲಯ, ಬೆಸ್ಕಾಂ ಸ್ವಲ್ಪ ಎಚ್ಚೆತ್ತುಕೊಂಡಿದ್ರೆ ಅಮಾಯಕರ ಸಾವಗುತ್ತಿರಲಿಲ್ಲ ಎಂದು ವಿದ್ಯುತ್ ಪರಿವೀಕ್ಷಣಾಲಯ ವರದಿ ನೀಡಿದೆ.
ವಿದ್ಯುತ್ ಪರಿವೀಕ್ಷಣಾಲಯದ ವರದಿಯಲ್ಲಿ ಏನಿದೆ?
– ವಿದ್ಯುತ್ ತಂತಿಯ ಮಾರ್ಗವು ತುಂಡಾಗಿ ಪುಟ್ ಪಾತ್ ಮೇಲೆ ಲೋ ಫಾಲ್ಟ್ ಕರೆಂಟ್ ಪಾತ್ ಉಂಟಾಗಿದೆ
– ನಿಗದಿತ ಪಾಲ್ಟ್ ಕರೆಂಟ್ ಭೂಮಿಗೆ ಹೋಗದೆ ಇರುವುದು
– ಇ.ಎಪ್.ಆರ್. ಮೇಲೆ ಟ್ರಿಪ್ ಆಗಲು ಬೇಕಾದ ನಿಗದಿತ ರಿಲೆ ಪಿಕ್- ಆಪ್ ಕರೆಂಟ್ ಪ್ರವಹಿಸಿಲ್ಲ
– ರಿಲೆ ಪಿಕ್- ಆಪ್ ಕರೆಂಟ್ ಪ್ರವಹಿಸದೇ ಇರುವುದೇ ಇ.ಎಪ್.ಆರ್ ಟ್ರಿಪ್ ಆಗದೇ ಇರುವುದಕ್ಕೆ ಕಾರಣ
– ಬೆಸ್ಕಾಂ ಅಧಿಕಾರಿಗಳು ಹಳೆಯ ಮತ್ತು ಶಿಥಿಲಗೊಂಡಿರುವ ವಿದ್ಯುತ್ ಮಾರ್ಗಗಳನ್ನ ಗಮನಿಸಿಲ್ಲ
– ಹಳೆಯ ಮತ್ತು ಶಿಥಿಲಗೊಂಡ ವಿದ್ಯುತ್ ಮಾರ್ಗಗಳನ್ನು ಗಮನಿಸಿ ಸುಸ್ಥಿಯಲ್ಲಿಟ್ಟುಕೊಂಡಿಲ್ಲ
– ವಿದ್ಯುತ್ ಮಾರ್ಗಗಳನ್ನ ಸುಸ್ಥಿಯಲ್ಲಿಟ್ಟುಕೊಂಡಿದ್ದಾರೆ ಈ ರೀತಿ ಅಪಘಾತ ಸಂಬಂವಿಸುತ್ತಿರಲಿಲ್ಲ
– ವಿದ್ಯುತ್ ಮಾರ್ಗದಲ್ಲಿ ಸಂಬಂಧಿಸಿದ ಎಲ್.ಬಿ.ಎಸ್ ನ ನಿರ್ವಹಣೆ ಮಾಡಿ ವರ್ಮಿನ್ ಪ್ರೂಪ್ ಹಾಗಿ ನಿರ್ವಹಿಸಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ
– ಹಾಗೂ ಸದರಿ ಒವರ್ ಹೆಡ್ ಬೇರ್ ವಾಹಕಗಳ ಮಾರ್ಗಗಳಲ್ಲಿ ಅರ್ಥ ಗಾರ್ಡ ಅಳವಡಿಸಿದ್ದಾರೆ ಅಫಘಾತ ತಪ್ಪಿಸಬಹುದಿತ್ತು ಎಂದು ವರದಿ
– ಈ ಪ್ರಕರಣದಲ್ಲಿ ಬೆಸ್ಕಾಂ ಅಧಿಕಾರಿಗಳು ದಿ ಸೆಂಟ್ರಲ್ ಎಲೆಕ್ಟ್ರಿಕಲ್ ಸೇಫ್ಟಿ ಅಥಾರಿಟಿ ರೆಗ್ಯುಲೇಷನ್- 2023 ರೆಗ್ಯುಲೇಷನ್ 14(1) ,24(1)(i),48(7), ಮತ್ತು 76(1) ಉಲ್ಲಂಘಿಸಿರೋದಾಗಿ ವರದಿ ನೀಡಿದ ತನಿಖಾಧಿಕಾರಿಗಳು
ಬೆಸ್ಕಾಂ ಅಧಿಕಾರಿಗಳಿಗೆ ಅಪಘಾತ ತಡೆಗಟ್ಟಲು ಕ್ರಮಗಳನ್ನ ಅನುಸರಿಸುವಂತೆ ಸಲಹೆ ನೀಡಿದ ವಿದ್ಯುತ್ ಪರಿವೀಕ್ಷಣಾಯ
GFX
ಅಪಘಾತಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳೇನು?
1) ಹಳೆಯದಾದ ಮತ್ತು ಶಿಥಿಲಗೊಂಡಿರುವ ವಿದ್ಯುತ್ ವಾಹಕಗಳನ್ನು ಗುರುತಿಸಬೇಕು
2) ಅವುಗಳನ್ನು ಯು.ಜಿ/ಒವರ್ ಹೆಡ್ ಕೇಬಲ್ಗೆ ಬದಲಾಯಿಸಿ ಮಾರ್ಗಗಳನ್ನು ಅಪಾಯರಹಿತವಾಗಿ ಸುಸ್ಥಿಯಲ್ಲಿಟ್ಟುಕೊಳ್ಳುವುದು
3) ವಿದ್ಯುತ್ ವ್ಯವಸ್ಥೆಯಲ್ಲಿ ಅಳವಡಿಸುವ ಮೀಟರಿಂಗ್ ಕ್ಯುಬಿಕಲ್, ಎಲ್.ಬಿ.ಎಸ್.ಆರ್.ಎಮ್.ಯು Intermediate OD ಮತ್ತು ಇತರೆ ಉಪಕರಣಗಳನ್ನು ವರ್ಮಿನ್ ಪೂಜ್ ಹಾಗಿರುವಂತೆ ನೋಡಿಕೊಳ್ಳುವುದು
4) ಆರ್.ಎಮ್.ಯು bag Intermediate OD ಗಳಲ್ಲಿರುವ ಪ್ರೊಟೆಕ್ಷನ್ ಸಿಸ್ಟಮ್ ಸುಸ್ಥಿತಿಯಲ್ಲಿರುವಂತೆ ನಿರ್ವಹಿಸುವುದು
5) ಸಾರ್ವಜನಿಕ ಸ್ಥಳಗಳಲ್ಲಿ ಹಾದು ಹೋಗಿರುವ ಒವರ್ ಹೆಡ್ ಬೇಲ್ ವಾಹಕಗಳ ಮಾರ್ಗಗಳಲ್ಲಿ ತುಂಡಾಗಿ ಬಿದ್ದದ್ದ ಕೂಡಲೇ ತೆರವು ಮಾಡಬೇಕು
6) ಹೈ ಇಂಫೆಡೆನ್ಸ್ ಫಲ್ಟ್ ಉಂಟಾದಾಗ ಸಾಮಾನ್ಯವಾಗಿ ಪ್ರೊಟೆಕ್ಷನ್ ರಿಲೆಗಳು ಟ್ರಿಪ್ ಆಗದೇ ಇರುವುದರಿಂದ ಸದರಿ ಸಮಸ್ಯೆ ಪರಿಹಾರ ಅವಶ್ಯಕ
6) ಹೈ ಇಂಫೆಡೆನ್ಸ್ ಫಲ್ಟ್ ಪ್ರೊಟೆಕ್ಷನ್ ಸಿಸ್ಟಮ್ಸ್ ಅಳವಡಿಕೆಗೆ ಕ್ರಮ ವಹಿಸಬೇಕು