ಅಕ್ರಮವಾಗಿ ಮಗುವನ್ನು ಮನೆಯಲ್ಲಿಟ್ಟುಕೊಂಡಿರುವ ಆರೋಪದ ಮೇಲೆ ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅವರನ್ನು ಬಂಧಿಸಲಾಗಿದೆ. ಮಗುವನ್ನು ಕರೆದುಕೊಂಡು ಬಂದಿರುವ ವಿಷಯದಲ್ಲಿ ನನ್ನಿಂದ ಯಾವುದೇ ತಪ್ಪು ಆಗಿಲ್ಲವೆಂದು ಹೇಳಿಕೊಂಡಿರುವ ಸೋನು ಪೊಲೀಸ್ ಠಾಣೆಯಲ್ಲಿ ಗೋಳಾಡುತ್ತಿದ್ದಾರೆ.
ಮಗುವನ್ನು ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡಿರುವ ವಿಚಾರವಾಗಿ ನಿನ್ನೆ ರಾತ್ರಿ ದೂರು ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಪೊಲೀಸರು ಇಂದು ಸೋನು ಅವರನ್ನು ಬಂಧಿಸಿದ್ದಾರೆ. ಪೊಲೀಸರು ಹಾಗೂ CWC ಅಧಿಕಾರಿಗಳಿಂದ ಸೋನು ವಿಚಾರಣೆ ನಡೆಯುತ್ತಿದ್ದು, ಮಗುವನ್ನು ದತ್ತು ಪಡೆದಿರುವುದರ ಬಗ್ಗೆ ಮಾಹಿತಿ ಕೇಳಿದ್ದಾರೆ.
ನಾನು ಮಗು ಕರೆದುಕೊಂಡು ಬಂದು 15 ದಿನ ಆಗಿದೆ. ಹಾಗೆ ಕರೆದುಕೊಂಡು ಬಂದಿರುವುದು ತಪ್ಪಾಗಿರುತ್ತೆ ಅಂತ ನನಗೆ ಗೊತ್ತಿಲ್ಲ. ಗೊತ್ತಿದ್ದರೆ, ನಾನು ಪ್ರೊಸಿಜರ್ ಮೂಲಕವೇ ದತ್ತು ಮಾಡಿಸಿಕೊಳ್ಳುತ್ತಿದ್ದೆ. ನಾನು ತಪ್ಪು ಮಾಡದಿದ್ರೂ ನನ್ನನ್ನ ಕರೆದುಕೊಂಡು ಬಂದಿದ್ದಾರೆ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.