ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿರುವ ಭಾರತದ ರಾಯಭಾರಿ (Indian Embassy) ಕಚೇರಿಗೆ ಭಾರತದ ನೂತನ ಚಾರ್ಜ್ ಡಿ’ಅಫೇರ್ (ಉಪರಾಯಭಾರಿ)ಯಾಗಿ ಗೀತಿಕಾ ಶ್ರೀವಾಸ್ತವ (Geetika Srivastava) ಅವರು ನೇಮಕಾಗೊಂಡಿದ್ದಾರೆ. ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆಯಾಗಿದ್ದಾರೆ. ಪ್ರಸ್ತುತ ವಿದೇಶಾಂಗ…
Browsing: ಅಂತರಾಷ್ಟ್ರೀಯ
ವಾಷಿಂಗ್ಟನ್: ನನಗೆ ಸಲಹೆಗಾರರಾಗಿ ಇಲಾನ್ ಮಸ್ಕ್ ಅವರು ಇರಬೇಕೆಂದು ಅಪೇಕ್ಷಿಸುತ್ತೇನೆ ಎಂದು ಅಮೆರಿಕದ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ವಿವೇಕ್ ರಾಮಸ್ವಾಮಿ (Vivek Ramaswamy) ಹೇಳಿದರು. ಇಲಾನ್ ಮಸ್ಕ್ ಮಾದರಿಯಂತೆ. ಟ್ವಿಟ್ಟರ್ನಲ್ಲಿ ಇಲಾನ್ ಕತ್ತರಿ ಹಾಕಿ ಚೊಕ್ಕಟ ಮಾಡಿದಂತೆ ಅಮೆರಿಕ ಆಡಳಿತದಲ್ಲಿ ಸುಧಾರಣೆ ತರುವೆ ಎಂದು ಭಾರತ ಮೂಲದ 38 ವರ್ಷದ ವಿ ರಾಮಸ್ವಾಮಿ ಹೇಳಿದ್ದಾರೆ. ತಾನೊಂದು ವೇಳೆ ಅಮೆರಿಕದ ಅಧ್ಯಕ್ಷನಾಗಿದ್ದೇ ಆದಲ್ಲಿ ನನ್ನ ಸಲಹೆಗಾರನಾಗಿ ಮಸ್ಕ್ (Elon Musk) ಅವರನ್ನೇ ನೇಮಕ ಮಾಡುವುದಾಗಿ ಅವರು ತಿಳಿಸಿದ್ದಾರೆ. 2022ರಲ್ಲಿ ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಇಲಾನ್ ಮಸ್ಕ್ ಅವರು ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಿದ ಬಳಿಕ ಕಂಪನಿಯ ಕಾರ್ಯನಿರ್ವಹಣೆ ಉತ್ತಮಗೊಂಡಿತ್ತು. ಅಂಥದ್ದೇ ರೀತಿಯಲ್ಲಿ ಅಮೆರಿಕದ ಅಧ್ಯಕ್ಷೀಯ ಆಡಳಿತದ ಕಾರ್ಯಕ್ಷಮೆ ಹೆಚ್ಚಿಸುವುದಾಗಿ ವಿವೇಕ್ ರಾಮಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಒಳಗೆ ಇರದ ಮತ್ತು ಹೊಚ್ಚ ಹೊಸ ಮುಖಗಳು ನನಗೆ ಬೇಕು. ಇತ್ತೀಚೆಗೆ ಇಲಾನ್ ಮಸ್ಕ್ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು ಅಚ್ಚರಿಪಟ್ಟಿದ್ದೇನೆ. ನನಗೆ ಸಲಹೆಗಾರರಾಗಿ ಅವರು ಇರಬೇಕೆಂದು ಅಪೇಕ್ಷಿಸುತ್ತೇನೆ. ಟ್ವಿಟ್ಟರ್ನಲ್ಲಿ ಶೇ. 75ರಷ್ಟು ಉದ್ಯೋಗಿಗಳನ್ನು ಅವರು ಲೇ ಆಫ್ ಮಾಡಿದರು. ಅದರ ಪರಿಣಾಮವಾಗಿ ಕಂಪನಿಯ ಕಾರ್ಯಕ್ಷಮತೆ ಹೆಚ್ಚಿತು ಎಂದು ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ತಿಳಿಸಿದ್ದಾರೆ. ಟ್ವಿಟ್ಟರ್ ಅನ್ನು ಇಲಾನ್ ಮಸ್ಕ್ ಹೇಗೆ ನಿರ್ವಹಿಸುತ್ತಿದ್ದಾರೋ ಅದೇ ರೀತಿ ಸರ್ಕಾರದ ಆಡಳಿತವನ್ನು ನಡೆಸುತ್ತೇನೆ. ಶೇ. 75ರಷ್ಟು ಅನಗತ್ಯ ವೆಚ್ಚವನ್ನು ತೆಗೆದುಹಾಕುವುದು ಮತ್ತು ಆಡಳಿತದ ಕಾರ್ಯಕ್ಷಮತೆ ಹೆಚ್ಚಿಸುವುದು ಹೇಗೆಂಬುದಕ್ಕೆ ಟ್ಟಿಟ್ಟರ್ ಒಂದು ಉತ್ತಮ ನಿದರ್ಶನ ಎಂದು ಫಾಕ್ಸ್ ನ್ಯೂಸ್ ವಾಹಿನಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಇಸ್ಲಾಮಾಬಾದ್: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಸರಿ ಇಲ್ಲ, ಅವರಿಗೆ ಅಪಾಯ ಇದೆ ಎಂದು ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರು ಸುಪ್ರೀಂ…
ಕ್ಯಾನ್ಬೆರಾ: ವಿವಿಧ ರಾಷ್ಟ್ರಗಳ ಮಿಲಿಟರಿ ತರಬೇತಿ ವೇಳೆ ಅಮೆರಿಕದ (America) ಯುದ್ಧ ವಿಮಾನವೊಂದು (Military Aircraft) ಪತನಗೊಂಡ ಪರಿಣಾಮ ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡ ಘಟನೆ ಆಸ್ಟ್ರೇಲಿಯಾದಲ್ಲಿ (Australia)…
ವಾಷಿಂಗ್ಟನ್: ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟ್ರೈನ್ಮೆಂಟ್ (WWE) ಮಾಜಿ ಸ್ಟಾರ್ ಬ್ರೇ ವ್ಯಾಟ್ (36) (Bray Wyatt) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಬಗ್ಗೆ ಟ್ರಿಪಲ್ ಎಚ್ನ ಮುಖ್ಯ ಅಧಿಕಾರಿ ಲೆವೆಸ್ಕ್…
ಮಾಸ್ಕೋ: ಯುದ್ಧ ಅಪರಾಧಗಳ ಆರೋಪದ ಮೇಲೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ನಲ್ಲಿ ವಾರಂಟ್ ಹೊರಡಿಸಿರುವ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಭಾರತದಲ್ಲಿ (India) ನಡೆಯಲಿರುವ ಜಿ20…
ಕೊರೊನಾ ವೈರಸ್ ಜಮಾನಾ ಮುಗಿಯಿತು ಅಂದುಕೊಳ್ಳುವಷ್ಟರಲ್ಲೇ ಕೋವಿಡ್ ವೈರಾಣುವಿನ ಹೊಸ ತಳಿಗಳು ಅಬ್ಬರಿಸುತ್ತಿವೆ. 2023ರ ಜುಲೈನಲ್ಲಿ ಪತ್ತೆಯಾಗಿದ್ದ ಕೋವಿಡ್ನ ಹೊಸ ತಳಿಯೊಂದು ಇದೀಗ ತನ್ನ ಪ್ರಸರಣ ಹೆಚ್ಚಿಸಿಕೊಳ್ಳುತ್ತಿದೆ…
ಮಾಸ್ಕೋ: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಬಂಡಾಯ ಎದ್ದಿದ್ದ ಖಾಸಗಿ ಭದ್ರತಾ ಕಂಪನಿ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಬ್ಯುಸಿನೆಸ್ ಜೆಟ್ ವಿಮಾನವು ಮಾಸ್ಕೋದ…
ಜೋಹಾನ್ಸ್ಬರ್ಗ್ : ಪ್ರಧಾನಿ ನರೇಂದ್ರ ಮೋದಿ (Narendra Modi) ಬ್ರಿಕ್ಸ್ (BRICS) ವಿಸ್ತರಣೆಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದು, ಒಮ್ಮತದ ಆಧಾರದ ಮೇಲೆ ಮುಂದುವರಿಯುವ ನಿರ್ಧಾರವನ್ನು ಭಾರತ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.…
ಬ್ರೆಜಿಲ್: ಶಾಲಾ ಬಸ್ನಿಂದ ತಲೆ ಹೊರಹಾಕಿ ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗ ಬಸ್ ಹೊರಟಿತ್ತು, ಆಗ ಅಲ್ಲಿಯೇ ಇದ್ದ ಕಂಬಕ್ಕೆ ತಲೆ ತಗುಲಿ ಬಾಲಕಿ ಮೃತಪಟ್ಟಿರುವ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ. ಆಗಸ್ಟ್ 16ರಂದು ಬಾಲಕಿ, ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಬಾಲಕಿಯು ಬಸ್ನ ಕಿಟಕಿಯಿಂದ ತಲೆ ಹೊರಹಾಕಿದ್ದಳು, ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಳು, ಅದೇ ಸಮಯದಲ್ಲಿ ಬಸ್ ಹೊರಟಿತ್ತು. ಪಕ್ಕದಲ್ಲಿ ತುಂಬಾ ವಾಹನಗಳಿದ್ದ ಕಾರಣ ಡ್ರೈವರ್ ಬಸ್ ಸ್ವಲ್ಪ ಎಡ ಭಾಗಕ್ಕೆ ತೆಗೆದುಕೊಂಡರು ಆಗ ಅಲ್ಲಿಯೇ ಇದ್ದ ಕಂಬಕ್ಕೆ ಬಾಲಕಿಯ ತಲೆ ಹೊಡೆದಿದೆ. ಆಗ ತಕ್ಷಣ ಅಲ್ಲಿದ್ದವರು ಚಾಲಕನನ್ನು ಎಚ್ಚರಿಸಿದ್ದಾರೆ, ತಕ್ಷಣ ಬಸ್ ಅನ್ನು ನಿಲ್ಲಿಸಿದ್ದಾರೆ. ತಕ್ಷಣವೇ ಶಾಲಾ ಆಡಳಿತ ಮಂಡಳಿ ಹಾಗೂ ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಬಾಲಕಿಯ ತಲೆಗೆ ಗಂಭೀರವಾದ ಗಾಯಗಳಾಗಿತ್ತು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಆಗಸ್ಟ್ 17 ರಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.