ನವದೆಹಲಿ: ವಿಶ್ವಕಪ್ (World Cup) ಸೆಮಿಫೈನಲ್‍ಗೆ ಹೋಗಲು ಅವಕಾಶವಿರುವ ಐದು ತಂಡಗಳನ್ನು ಮಾಜಿ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ (Sourav Ganguly) ಹೆಸರಿಸಿದ್ದಾರೆ. ಇದು ಹೇಳಲು ತುಂಬಾ ಕಷ್ಟ…
Browsing: ಕ್ರೀಡೆ
ಪಾಕ್ (Pakistan) ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಇಬ್ಬರು ಆಟಗಾರರು ಏಷ್ಯಾಕಪ್ (Asia Cup) ಹಾಗೂ ವಿಶ್ವಕಪ್ಗೂ (World Cup) ಮುಂಚೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.…
ಭಾರತದದಲ್ಲಿ ಅಕ್ಟೋಬರ್‌ನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳುವ ಬಗ್ಗೆ ನಿರ್ಧರಿಸಲು ಪಾಕ್ ಪ್ರಧಾನಿ ಶಾಬಾಜ್ ಶರೀಪ್ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ. ಪಾಕ್…
ಭಾರತದಲ್ಲಿ ಅಕ್ಟೋಬರ್–ನವೆಂಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ್ ತಂಡ ಭಾಗವಹಿಸುವುದಿಲ್ಲವಾ? ಈ ಪ್ರಶ್ನೆಗೆ ಇದುವರೆಗೆ ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಗೆ ಉತ್ತರ ನೀಡಿಲ್ಲ. ಇದರ ನಡುವೆ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ್ ತಂಡದ ಭಾಗವಹಿಸುವಿಕೆಯನ್ನು ಖಚಿತ ಪಡಿಸಲು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ನೇತೃತ್ವದ ಸಮಿತಿಯನ್ನು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ರಚಿಸಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧದಿಂದ ಹಿಡಿದು ಕ್ರೀಡೆಯನ್ನು ರಾಜಕೀಯದಿಂದ ದೂರವಿಡುವ ಮಹತ್ವದವರೆಗಿನ ಎಲ್ಲಾ ಅಂಶಗಳನ್ನು ಸಮಿತಿಯು ಚರ್ಚಿಸಲಿದೆ. ಹಾಗೆಯೇ ಈ ಸಮಿತಿಯ ಸದಸ್ಯರು ಭಾರತಕ್ಕೂ ಆಗಮಿಸಿ ಪರಿಶೀಲಿಸಲಿದೆ ಎಂದು ವರದಿಯಾಗಿದೆ. ಇದಾದ ಬಳಿಕ ಪಾಕ್ ಪ್ರಧಾನಿಗೆ ವರದಿ ಸಲ್ಲಿಸಲಿದ್ದು, ಆ ಬಳಿಕವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಈಗಾಗಲೇ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆದರೆ ಪಾಕ್ ತಂಡದ ಭಾಗವಹಿಸುವಿಕೆಯನ್ನು ಇನ್ನೂ ಕೂಡ ದೃಢಪಡಿಸಲಾಗಿಲ್ಲ. ಅಲ್ಲದೆ ಪಾಕಿಸ್ತಾನ್ ತಂಡದ ಪಾಲ್ಗೊಳ್ಳುವಿಕೆಗೆ ಸರ್ಕಾರದ ಅನುಮತಿಯ ಅಗತ್ಯವಿದೆ ಎಂದು ಪಿಸಿಬಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಿದೆ. ಇದೀಗ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕ್ರೀಡಾ ಸಚಿವ ಅಹ್ಸಾನ್ ಮಜಾರಿ, ಮರ್ಯಮ್ ಔರಂಗಜೇಬ್, ಅಸದ್ ಮಹಮೂದ್, ಅಮೀನ್ ಉಲ್ ಹಕ್, ಕಮರ್ ಜಮಾನ್ ಕೈರಾ ಮತ್ತು ಮಾಜಿ ರಾಜತಾಂತ್ರಿಕ ತಾರಿಕ್ ಫಾತ್ಮಿ ಒಳಗೊಂಡ ಸಮಿತಿಯನ್ನು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ರಚಿಸಿದ್ದಾರೆ. ಪಾಕ್ ತಂಡಕ್ಕೆ ನಿಗದಿಯಾಗಿರುವ ಸ್ಥಳಗಳನ್ನು ಪರಿಶೀಲಿಸಲು, ಭದ್ರತಾ ವ್ಯವಸ್ಥೆಗಳ ಮಾಹಿತಿ ಪಡೆಯಲು ನಿಯೋಗವೊಂದನ್ನು ಭಾರತಕ್ಕೆ ಕಳುಹಿಸಲಾಗುತ್ತದೆ. ಇದಾದ ಬಳಿಕ ಅಂತಿಮ ವರದಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರೂ ಆಗಿರುವ ಪ್ರಧಾನಿಗೆ ಸಲ್ಲಿಸಲಿದ್ದಾರೆ. ಆ ಬಳಿಕ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇತ್ತ ಪಾಕಿಸ್ತಾನ್ ತಂಡದ ಪಂದ್ಯಗಳಿಗೆ ಹೈದರಾಬಾದ್, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದ ಮೈದಾನಗಳು ಆತಿಥ್ಯವಹಿಸಲಿದೆ. ಅಲ್ಲದೆ ಭಾರತ–ಪಾಕಿಸ್ತಾನ್ ನಡುವಣ ಪಂದ್ಯವು ಅಕ್ಟೋಬರ್ 15 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದು, ಇದಾಗ್ಯೂ ಟೂರ್ನಿಯಲ್ಲಿ ಭಾಗವಹಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭದ್ರತಾ ವ್ಯವಸ್ಥೆಯ ನೆಪಗಳನ್ನು ಹೇಳುತ್ತಿರುವುದು ವಿಪರ್ಯಾಸ.
ಚೀಫ್ ಸೆಲೆಕ್ಟರ್ ಹುದ್ದೆಗೆ ಅಜಿತ್ ಅಗರ್ಕರ್ ಆಯ್ಕೆ ಅತ್ಯಂತ ಮಹತ್ವದ ನಿರ್ಧಾರ ಆಗಿದೆ. ಏಕೆಂದರೆ, ಚೀಫ್ ಸೆಲೆಕ್ಟರ್ ಹುದ್ದೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಆಡಿದ ಅನುಭವ ಹೊಂದಿರುವ…
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯಶಸ್ಸು ಗಳಿಸಿದ ಮೇಲೆ ಜಗತ್ತಿನಾದ್ಯಂತ ಹಲವು ಟಿ20 ಲೀಗ್ ಟೂರ್ನಿಗಳು ಜನ್ಮತಾಳಿವೆ. ಐಪಿಎಲ್ ಟೂರ್ನಿಯನ್ನೇ ಕಾಫಿ ಮಾಡಿರುವ ಉಳಿದ ಟಿ20 ಲೀಗ್‌ಗಳು ಮರ್ಕ್ಯೂ ಆಟಗಾರರನ್ನಾಗಿ ವಿದೇಶಿ ಆಟಗಾರನ್ನು ಆಯ್ದುಕೊಳ್ಳಲು ಅವಕಾಶ ನೀಡಿವೆ. ಆದರೆ ವಿದೇಶಿ ಟಿ20 ಟೂರ್ನಿಗಳಲ್ಲಿ ಭಾರತದ ಯಾವೊಬ್ಬ ಹಾಲಿ ಕ್ರಿಕೆಟಿಗನು ಪಾಲ್ಗೊಳ್ಳಲುವ ಅವಕಾಶವನ್ನು ಬಿಸಿಸಿಐ ನೀಡಿಲ್ಲ. ಟೀಂ ಇಂಡಿಯಾ ಹಾಲಿ ಕ್ರಿಕೆಟಿಗರು ವಿದೇಶಿ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ನಿಷೇಧ ಹೇರಿದ್ದು, ಕಠಿಣ ನಿಯಮಾವಳಿಗಳನ್ನು ತಂದಿದೆ. ಹೀಗಿದ್ದೂ ಇತ್ತೀಚೆಗಿನ ದಿನಗಳಲ್ಲಿ ಕೆಲವು ಕ್ರಿಕೆಟಿಗರು ಭಾರತ ಹಾಗೂ ಅಂತಾರಾಷ್ಟ್ರೀಯ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ, ವಿದೇಶಿ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳಲಾರಂಭಿಸಿದ್ದಾರೆ. ಆದರೆ ಈ ರೀತಿ ಮಾಡುವುದಕ್ಕೂ ಬ್ರೇಕ್ ಹಾಕಲು ಬಿಸಿಸಿಐ ಮುಂದಾಗಿರುವಂತೆ ಕಂಡುಬಂದಿದ್ದು, ಈ ಕುರಿತಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ. ಮುಂಬೈನಲ್ಲಿ ಶುಕ್ರವಾರ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಮೀಟಿಂಗ್‌ನಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ಈ ಕುರಿತಂತೆ ಉದ್ದೇಶಪೂರ್ವಕವಾಗಿ ನಿವೃತ್ತಿ ತೆಗೆದುಕೊಂಡು, ವಿದೇಶಿ ಲೀಗ್‌ನಲ್ಲಿ ಪಾಲ್ಗೊಳ್ಳಲಿಚ್ಚಿಸುವ ಆಟಗಾರರಿಗೆ ಬ್ರೇಕ್ ಹಾಕುವ ಸುಳಿವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಿಚ್ಚಿಟ್ಟಿದ್ದಾರೆ. ವಿದೇಶಿ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದಲೇ ಕೆಲವು ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿರುವುದು ಬಿಸಿಸಿಐ ಅಪೆಕ್ಸ್ ಬಾಡಿಯ ಅಸಮಾಧಾನಕ್ಕೆ ಗುರಿಯಾಗಿದೆ. “ಉದ್ದೇಶಪೂರ್ವಕವಾಗಿಯೇ ಅವಧಿಗೂ ಮುನ್ನ ನಿವೃತ್ತಿ ನಿರ್ಧಾರ ಪ್ರಕಟಿಸುತ್ತಿರುವ ಚಾಳಿಗೆ ಕಡಿವಾಣ ಹಾಕಲು ನಾವು ಸದ್ಯದಲ್ಲಿಯೇ ಒಂದು ಪಾಲಿಸಿಯನ್ನು ಜಾರಿಗೆ ತರಲಿದ್ದೇವೆ. ಒಂದು ತಿಂಗಳು ಅಥವಾ ಸ್ವಲ್ಪ ದಿನಗಳ ಬಳಿಕ ಪಾಲಿಸಿ ನೀತಿ–ನಿಯಮಗಳು ತೀರ್ಮಾನವಾದ ಬಳಿಕ ಅದನ್ನು ಒಪ್ಪಿಗೆಗಾಗಿ ಅಪೆಕ್ಸ್ ಕೌನ್ಸಿಲ್‌ಗೆ ಕಳಿಸಿಕೊಡಲಾಗುವುದು” ಎಂದು ಜಯ್ ಶಾ ತಿಳಿಸಿದ್ದಾರೆ.
ಇಸ್ಲಾಮಾಬಾದ್: ಪ್ರಸಕ್ತ ಸಾಲಿನ ಐಸಿಸಿ ವಿಶ್ವಕಪ್ (ICC World Cup 2023) ಟೂರ್ನಿಯಲ್ಲಿ ಭಾರತದ ಯಾವುದೇ ಮೈದಾನದಲ್ಲಿ ಯಾವ ತಂಡವನ್ನ ಬೇಕಾದ್ರೂ ಎದುರಿಸಲು ಪಾಕಿಸ್ತಾನ ತಂಡ ಸಿದ್ಧವಾಗಿದೆ ಎಂದು…
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ಸ್ ಇಂಗ್ಲೆಂಡ್ ಮತ್ತು ರನ್ನರ್ಸ್‌ಅಪ್ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಅಹ್ಮದಾಬಾದ್‌ನ ನರೇಂದ್ರ…
ಇಸ್ಲಾಮಾಬಾದ್: ಪ್ರಸಕ್ತ ಸಾಲಿನ ಐಸಿಸಿ ವಿಶ್ವಕಪ್ (ICC World Cup 2023) ಟೂರ್ನಿಯಲ್ಲಿ ಭಾರತದ ಯಾವುದೇ ಮೈದಾನದಲ್ಲಿ ಯಾವ ತಂಡವನ್ನ ಬೇಕಾದ್ರೂ ಎದುರಿಸಲು ಪಾಕಿಸ್ತಾನ ತಂಡ ಸಿದ್ಧವಾಗಿದೆ ಎಂದು…
ದೆಹಲಿ: 5 ಬಾರಿ ಟ್ರೋಫಿ ಜಯಿಸಿರುವ ಆಸ್ಟ್ರೇಲಿಯಾ ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಗಳ ಪೈಕಿ 2 ತಂಡಗಳು ಪ್ರಬಲ ಪೈಪೋಟಿ ನಡೆಸಲಿವೆ ಎಂದು 1983ರ ವಿಶ್ವಕಪ್ ವಿಜೇತ…