Browsing: ರಾಷ್ಟ್ರೀಯ

ಭೋಪಾಲ್: ಮಹಿಳೆಯೊಬ್ಬರನ್ನು ಎಳೆದಾಡಿ, ಜುಟ್ಟು ಹಿಡಿದು ಗುಂಪೊಂದು ಥಳಿಸಿದ ಘಟನೆ ಮಧ್ಯಪ್ರದೇಶದ ಸಾಗರ್ ನಲ್ಲಿ (Madhyapradesh) ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಮಹಿಳೆಯನ್ನು ಬಸ್ ನಿಲ್ದಾಣದಲ್ಲಿ ಗುಂಪು ಎಳೆದಾಡುತ್ತಿರುವುದು…

ನವದೆಹಲಿ;- ನನ್ನ ಮತ್ತು ರಾಹುಲ್ ಗಾಂಧಿ ನಡುವೆ ಯಾವುದೇ ಜಗಳ ಆಗಿಲ್ಲ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಹೋದರ ರಾಹುಲ್ ಗಾಂಧಿ ಮತ್ತು…

ನವದೆಹಲಿ: ಸೆಪ್ಟೆಂಬರ್ ಎರಡನೇ ವಾರದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ (G20 Summit) ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಮತ್ತು ಇತರ ವಿಶ್ವ ನಾಯಕರು…

ನವದೆಹಲಿ: ದೆಹಲಿ (Delhi) ಸಮೀಪದ ಘಾಜಿಯಾಬಾದ್‌ನ (Ghaziabad) ಹೌಸಿಂಗ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಸೆಕ್ಯುರಿಟಿ ಗಾರ್ಡ್ (Security Guard) ಮೇಲೆ ಆಕೆಯ ಮೇಲ್ವಿಚಾರಕ ಮತ್ತು…

ನವದೆಹಲಿ: ಚಂದ್ರನ (Moon) ಮೇಲ್ಮೈನಲ್ಲಿ ವೈಜ್ಞಾನಿಕ ಅನ್ವೇಷಣೆ ನಡೆಸುತ್ತಿರುವ ಚಂದ್ರಯಾನ-3 (Chandrayaan-3) ಮಿಷನ್‌, ದಕ್ಷಿಣ ಧ್ರುವದಲ್ಲಿ ಗಂಧಕ (Sulphur) ಇರುವುದನ್ನು ದೃಢಪಡಿಸಿದೆ ಎಂದು ಇಸ್ರೋ (ISRO) ತಿಳಿಸಿದೆ. ಚಂದ್ರಯಾನ-3 ರ…

ಬೆಂಗಳೂರು: ಮಾಜಿ ಮುಖ್ಯಮಂತ್ರಿ  ಡಾ.ಬಿ.ಎಸ್‌. ಯಡಿಯೂರಪ್ಪನವರು ಕೇರಳ ಪ್ರವಾಸ ಕೈಗೊಂಡಿದ್ದಾರೆ. ಕೇರಳದ ಗುರುವಾಯೂರು ದೇವಸ್ಥಾನದ ಆಡಳಿತ ಮಂಡಳಿಯ ಆಹ್ವಾನದ ಮೇರೆಗೆ ಕೇರಳಕ್ಕೆ ತೆರಳಿರುವ ಬಿ.ಎಸ್‌ ಯಡಿಯೂರಪ್ಪ. ಕೇರಳದ…

ನವದೆಹಲಿ: ಪಾಕಿಸ್ತಾನದ (Pakistan) ಭಾರತದ ಹೈಕಮಿಷನ್‌ (High Commission) ಕಚೇರಿಗೆ ಮೊದಲ ಮಹಿಳಾ ಅಧಿಕಾರಿಯಾಗಿ ಐಎಫ್‌ಎಸ್‌ ಅಧಿಕಾರಿ ಗೀತಿಕಾ ಶ್ರೀವಾಸ್ತವ (Geetika Srivastava) ನೇಮಕಗೊಂಡಿದ್ದಾರೆ. ಗೀತಿಕಾ ಅವರು ಪ್ರಸ್ತುತ…

ನವದೆಹಲಿ: ವಿಪಕ್ಷಗಳ ಮೈತ್ರಿಕೂಟ ಇಂಡಿಯಾ (I.N.D.I.A)ದಲ್ಲಿ ತಾನು ಯಾವುದೇ ಹುದ್ದೆಯನ್ನು ಬಯಸುವುದಿಲ್ಲ ಎಂದು ಬಿಹಾರದ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಪುನರುಚ್ಚರಿಸಿದ್ದಾರೆ. ನಾನು ಏನನ್ನೂ ಬಯಸುವುದಿಲ್ಲ. ಇದನ್ನು ನಾನು ನಿಮಗೆ ಮತ್ತೆ ಮತ್ತೆ ಹೇಳುತ್ತಿದ್ದೇನೆ. ನನಗೆ ಅಂತಹ ಆಸೆ ಇಲ್ಲ. ನಾನು ಎಲ್ಲರನ್ನೂ ಒಗ್ಗೂಡಿಸಲು ಬಯಸುತ್ತೇನೆ ಎಂದು ಪಾಟ್ನಾದಲ್ಲಿ ತಮ್ಮ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಸಮ್ಮುಖದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್ ಹೇಳಿದ್ದಾರೆ. ಸಂಚಾಲಕನ ಪಾತ್ರವನ್ನು ನೀಡಿದರೆ ಸ್ವೀಕರಿಸುತ್ತೀರಾ ಎಂದು ಕೇಳಿದಾಗ, ಹಮ್​​​ಕೊ ಕುಚ್ ನಹೀ ಬನ್ನಾ ಹೈ. ಹುಮಾರಿ ಕೋಯಿ ಇಚ್ಚಾ ನಹೀ ಹೈಂ. ದೂಸ್ರೆ ಲೋಗೋ ಕೋ ಬನಾಯಾ ಜಾಯೇಗಾ (ನನಗೆ ಏನೂ ಆಗಲು ಇಷ್ಟವಿಲ್ಲ. ನನಗೆ ಅಂತಹ ಯಾವುದೇ ಆಸೆ ಇಲ್ಲ. ಇತರರನ್ನು ಸಂಚಾಲಕರನ್ನಾಗಿ ಮಾಡಲಾಗುವುದು) ಎಂದು ಅವರು ಹೇಳಿದ್ದಾರೆ. ಪ್ರತಿಪಕ್ಷಗಳ ಒಗ್ಗಟ್ಟಿನ ಕ್ರಮದ ನೇತೃತ್ವ ವಹಿಸಿರುವ ಬಿಹಾರ ಮುಖ್ಯಮಂತ್ರಿ, ನನಗೆ ಯಾವುದೇ ವೈಯಕ್ತಿಕ ಮಹತ್ವಾಕಾಂಕ್ಷೆ ಇಲ್ಲ. ನಾನು ಪಕ್ಷಗಳನ್ನು ಒಗ್ಗೂಡಿಸಲು ಮಾತ್ರ ಬಯಸುತ್ತೇನೆ ಎಂದಿದ್ದಾರೆ. ಭಾರತ ನಿಜವಾಗಿಯೂ 1947 ರಲ್ಲಿ ಸ್ವತಂತ್ರವಾಗಲಿಲ್ಲ, ಆದರೆ ಜೆಪಿ ಚಳುವಳಿಯ ನಂತರ 1977 ರಲ್ಲಿ ಆಗಿದ್ದು ಎಂದು ಬಿಹಾರದ ಬಿಜೆಪಿ ಮುಖ್ಯಸ್ಥ ಸಾಮ್ರಾಟ್ ಚೌಧರಿಯವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ್, ಯಾರಾದರೂ ಹೇಳಿದರೆ ನಾನು ಯಾವುದಕ್ಕೂ ಗಮನ ಕೊಡುವುದಿಲ್ಲ. ಸ್ವಾತಂತ್ರ್ಯದ ಬಗ್ಗೆ ಅವರಿಗೆ ಗೊತ್ತಿಲ್ಲ ಎಂದಾದರೆ ಅವರು ಎಷ್ಟು ಅಪ್ರಸ್ತುತರು ಎಂಬುದನ್ನು ಅದು ತೋರಿಸುತ್ತದೆ ಎಂದಿದ್ದಾರೆ.

ವಡೋದರ: ಕುಡಿದ ಅಮಲಿನಲ್ಲಿ ಮಹಿಳೆಯೊಬ್ಬರು (Drunk Woman)ಪೊಲೀಸರ ಮೇಲೆ ಹಲ್ಲೆ ನಡೆಸಿ, ಬೈದು ಕೂಗಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ  ವೈರಲ್ ಆಗಿದೆ. ವಡೋದರದಲ್ಲಿ (Vadodara)ಈ ರೀತಿ ಮದ್ಯ ಸೇವಿಸಿ ಅನುಚಿತವಾಗಿ ವರ್ತಿಸಿದ ಮಹಿಳೆಯನ್ನು ಬಂಧಿಸಲಾಗಿದೆ.  ಗುಜರಾತ್‌ನಲ್ಲಿ (Gujarat) ಮದ್ಯಪಾನ ನಿಷೇಧದ ನಂತರವೂ ಈಕೆಗೆ ಮದ್ಯ ಎಲ್ಲಿಂದ ಸಿಕ್ಕಿತು ಎಂಬುದು ಈಗ ಪ್ರಶ್ನೆಯಾಗಿದೆ. ಗುಜರಾತಿನಲ್ಲಿ ಮದ್ಯವನ್ನು ನಿಷೇಧಿಸಿದ ನಂತರವೂ ಅಲ್ಲಿ ಮದ್ಯ ಮಾರಾಟ ಮತ್ತು ಸೇವನೆ ನಡೆಯುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ವೈರಲ್ ಆಗಿರುವ ವಿಡಿಯೊದಲ್ಲಿ ಮಹಿಳೆ ರಸ್ತೆಯಲ್ಲಿ ಪೊಲೀಸರನ್ನು ನಿಂದಿಸಿ ಹೊಡೆಯಲು ಯತ್ನಿಸುತ್ತಿರುವುದನ್ನು ಕಾಣಬಹುದು. ಆಕೆಯನ್ನು ಮಹಿಳಾ ಪೇದೆಯೊಬ್ಬರು ತಡೆದಿದ್ದಾರೆ. ಆದರೂ ಆಕೆ ಪೊಲೀಸರ ಮೇಲೆ ದಾಳಿ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾಳೆ. ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಸಿಕ್ಕಿಬಿದ್ದಾಗ ಗಲಾಟೆ ಶುರುವಾಗಿತ್ತು. ಸದ್ಯ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು 51,000ಕ್ಕೂ ಹೆಚ್ಚು ಜನರಿಗೆ ರೋಜ್‌ಗಾರ್ ಮೇಳದಡಿಯಲ್ಲಿ (Rozgar Mela) ಸರ್ಕಾರಿ ಉದ್ಯೋಗ ನೇಮಕಾತಿ ಪತ್ರವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿತರಿಸಿದ್ದಾರೆ. ದೇಶಾದ್ಯಂತ…