Browsing: ರಾಷ್ಟ್ರೀಯ

ಮಣಿಪುರ: ಮಣಿಪುರದಲ್ಲಿ ಹಿಂಸಾಚಾರ ಮಾತ್ರವಲ್ಲ, ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣವೂ ನಿಲ್ಲೋ ಹಾಗೆ ಕಾಣ್ತಿಲ್ಲ. ಇತ್ತೀಚೆಗಷ್ಟೇ, ಇಬ್ಬರು ಮಹಿಳೆಯರನ್ನು ಬೆತ್ತಲೆ ಪರೇಡ್‌ ಆಡಿಸಿರೋ ವೈರಲ್‌ ಹೊರಬಂದಿತ್ತು. ಈ ಬಳಿಕ ಅನೇಕ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದು ಹೇಳಲಾಗ್ತಿದೆ. ಈ ಬೆನ್ನಲ್ಲೇ, ಬಿಎಸ್‌ಎಫ್‌ ಯೋಧರೊಬ್ಬರು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಬಹಿರಂಗವಾಗಿದ್ದು, ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಕಳೆದ ವಾರ ಜನಾಂಗೀಯ ಕಲಹ ಪೀಡಿತ ಮಣಿಪುರದ ದಿನಸಿ ಅಂಗಡಿಯೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದೆ. ಈ ಸಂಬಂಧ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಹೆಡ್ ಕಾನ್‌ಸ್ಟೆಬಲ್‌ನನ್ನು ಗಡಿ ಕಾವಲು ಪಡೆ ಅಮಾನತುಗೊಳಿಸಿದೆ. ಹಾಗೂ, ಆರೋಪಿ ಯೋಧನ ವಿರುದ್ಧ ಪ್ರಕರಣ ದಾಖಲಾಗಿದೆ. ಅಂಗಡಿಯೊಳಗಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿತ್ತು. ಸಮವಸ್ತ್ರದಲ್ಲಿರುವ ಮತ್ತು INSAS ರೈಫಲ್ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ತೋರಿಸಿದೆ.  ನಂತರ  ಇವರನ್ನು ಹೆಡ್ ಕಾನ್‌ಸ್ಟೆಬಲ್ ಸತೀಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಇವರು ಮಹಿಳೆಯನ್ನು ಅಸಹ್ಯವಾಗಿ ಮುಟ್ಟಿದ್ದು, ಲೈಂಗಿಕ ದೌರ್ಜನ್ಯ ನೀಡಿದ್ದಾರೆ. ಈ ಸಂಬಂಧ ಮಾಹಿತಿ ನೀಡಿದ ಹಿರಿಯ ಅಧಿಕಾರಿಯೊಬ್ಬರು “ಇಂಫಾಲ್‌ನಲ್ಲಿ ಜುಲೈ 20 ರಂದು ಪೆಟ್ರೋಲ್ ಪಂಪ್ ಬಳಿಯ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಹೆಡ್ ಕಾನ್‌ಸ್ಟೆಬಲ್ ಸತೀಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಇಂದು ರಾಜಸ್ಥಾನ, ಗುಜರಾತ್​ ಪ್ರವಾಸ ಕೈಗೊಂಡ PM ಮೋದಿ

ನವದೆಹಲಿ;- ಇಂದು ಬೆಳಗ್ಗೆ ರಾಜಸ್ಥಾನದ ಸಿಕಾರ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ…

ನವದೆಹಲಿ: ಡೇಟಿಂಗ್ ಆ್ಯಪ್‌ನಲ್ಲಿ (Dating App) ಪರಿಚಯವಾದ ವ್ಯಕ್ತಿಯೊಬ್ಬ ಮತ್ತೊಬ್ಬ ಯುವಕನೊಂದಿಗೆ ಸೇರಿ ಯುವತಿಯನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ ಮತ್ತು ಬರುವ ಆಹಾರ ನೀಡಿ ಬಳಿಕ ಅತ್ಯಾಚಾರ (Rape) ಎಸಗಿರುವ…

ಇಂದಿನ ದಿನದಲ್ಲಿ ಸೋಶಿಯಲ್ ಮೀಡಿಯಾ ಪ್ರಯಜ್ಞತಿಯೊಬ್ಬರೂ ಬಳಸುತ್ತಾರೆ. ಅದರಲ್ಲೂ ಇನ್​​ಸ್ಟಾಗ್ರಾಮ್​ ಎಲ್ಲರ ನೆಚ್ಚಿನ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಆಗಿದೆ. ಬಳಕೆದಾರರು ತಮ್ಮ ಇನ್​​ಸ್ಟಾಗ್ರಾಮ್​​ ಅಕೌಂಟ್​ನಲ್ಲಿ ಏನಾದರೊಂದು ವಿಡಿಯೋ…

ನವದೆಹಲಿ: ಮುಂಬರಲಿರುವ ಭಾರತೀಯ ಕುಸ್ತಿ ಫೆಡರೇಷನ್​ನ ಚುನಾವಣಾ ಕಣದಿಂದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಮಗ ಕರಣ್ ಹೆಸರನ್ನು ಕೈಬಿಡಲಾಗಿದೆ. ಆಗಸ್ಟ್ 12 ರಂದು ನಡೆಯಲಿರುವ…

ನವದೆಹಲಿ: ಮಣಿಪುರ (Manipur) ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ (No Trust Motion) ಸಲ್ಲಿಸಲಾಗಿದೆ. ಕಾಂಗ್ರೆಸ್…

ನವದೆಹಲಿ: ಈಸ್ಟ್ ಇಂಡಿಯಾ ಕಂಪನಿ, ಪಿಎಫ್‌ಐ, ಇಂಡಿಯನ್ ಮುಜಾಹಿದೀನ್‌ನಲ್ಲೂ ಭಾರತ ಎನ್ನುವ ಪದವಿದೆ. ಭಾರತ ಎಂದು ಹೆಸರಿದ್ದ ಮಾತ್ರಕ್ಕೆ ಅದು ಭಾರತವಾಗುವುದಿಲ್ಲ ಎಂದು ವಿಪಕ್ಷಗಳ I.N.D.I.A ಒಕ್ಕೂಟಕ್ಕೆ ಟಾಂಗ್‌…

ಇಂದು ಕಾರ್ಗಿಲ್ ವಿಜಯ ದಿವಸ್. ಭಾರತೀಯರು ಎಂದು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಹೌದು. ಕಾರ್ಗಿಲ್‌ ಯುದ್ಧ ಭಾರತೀಯ ಪ್ರತಿಯೋಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ…

ಕೊರ್ಬಾ;+ ಬಾಯಿಗೆ ಹಲ್ಲಿ ನುಗ್ಗಿ ಮಗು ಸಾವನ್ನಪ್ಪಿದ ಘಟನೆ ಛತ್ತೀಸ್​ಗಢದ ಕೊರ್ಬಾದಲ್ಲಿ ನಡೆದಿದೆ. ಮಲಗಿದ್ದ ವೇಳೆ ಮಗುವಿನ ಬಾಯಿಯಲ್ಲಿ ಹಲ್ಲಿ ಇರುವುದನ್ನು ತಾಯಿ ಕಂಡಿದ್ದಾಳೆ. ಕಿರುಚಿದ ಆಕೆ ತಕ್ಷಣವೇ…

ಬಿಹಾರ;- ಇಲ್ಲಿನ ಬಕ್ಸರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂರು ದಶಕಗಳ ನಂತರ ಕಳ್ಳನೊಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ನಡೆದ ಅಪರಾಧ ಸಭೆಯಲ್ಲಿ ಎಸ್‌ಪಿ ಛೀಮಾರಿ ಹಾಕಿದ್ದ ಬೆನ್ನಲ್ಲೆ,…