Browsing: ಅಂತರಾಷ್ಟ್ರೀಯ

ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾದಲ್ಲಿ ಅಪರಿಚಿತರು ಲಷ್ಕರ್-ಎ-ತೊಯ್ಬಾ ಕಮಾಂಡರ್ (Lashkar e Taiba Terrorist) ಅಕ್ರಮ್ ಘಾಜಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಒಂದು ವಾರದ ಅವಧಿಯಲ್ಲಿ ನಡೆದ…

ಮಾಲ್ಡೀವ್ಸ್: ಮಾಲ್ಡೀವ್ಸ್ ದೇಶವು ತನ್ನ ದೇಶದಲ್ಲಿ ಭಾರತದ ಮಿಲಿಟರಿ ಉಪಸ್ಥಿತಿಯನ್ನು ತೆಗೆದುಹಾಕುವ ನಿಟ್ಟಿನಲ್ಲಿ ಮಾತುಕತೆಗಳನ್ನು ಪ್ರಾರಂಭಿಸಿದೆ ಎಂದು ಅಧ್ಯಕ್ಷ-ಚುನಾಯಿತ ಮೊಹಮ್ಮದ್ ಮುಯಿಝು ಬ್ಲೂಮ್‌ಬರ್ಗ್ ನ್ಯೂಸ್ ಪ್ರಕಟಿಸಿದ ಸಂದರ್ಶನದಲ್ಲಿ ಹೇಳಿದ್ದಾರೆ.…

ನ್ಯೂಯಾರ್ಕ್‌: ಹಂದಿಯ ಹೃದಯ ಕಸಿ ಪಡೆದ ವ್ಯಕ್ತಿಯೊಬ್ಬರು ಶಸ್ತ್ರಚಿಕಿತ್ಸೆಯ 40 ದಿನಗಳ ನಂತರ ಸಾವಿಗೀಡಾಗಿದ್ದಾರೆ. ಇವರು ವಿಶ್ವದಲ್ಲೇ ಹಂದಿ ಹೃದಯ ಕಸಿಗೊಳಗಾಗಿದ್ದ 2ನೇ ವ್ಯಕ್ತಿಯಾಗಿದ್ದರು. 58 ವರ್ಷದ ಲಾರೆನ್ಸ್‌ ಫೌಸೆಟ್ಟೆ ಮೃತವ್ಯಕ್ತಿ. ಹೃದಯಾಘಾತ ದಿಂದ ಅವರು ಸಾವನ್ನಪ್ಪಿದ್ದು, ಅವರಿಗೆ ಅತ್ಯಂತ  ಪ್ರಾಯೋಗಿಕ ಶಸ್ತ್ರಚಿಕಿತ್ಸೆಯ ಮೂಲಕ 40 ದಿನಗಳ ಹಿಂದಷ್ಟೇ ಹಂದಿಯ ಹೃದಯ ಅಳವಡಿಸಲಾಗಿತ್ತು. ಸೆಪ್ಟೆಂಬರ್ 20 ರಂದು ಅವರಿಗೆ ಹಂದಿಯ ಹೃದಯ ಅಳವಡಿಸಲಾಗಿತ್ತು. ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಪ್ರಕಾರ, ಅವರಿಗೆ ಮೊದಲ ತಿಂಗಳಲ್ಲಿ ಹೃದಯವೂ ಆರೋಗ್ಯಕರವಾಗಿ ಕಾರ್ಯನಿರ್ವಹಿಸಿತ್ತು. ಆದರೆ ಇತ್ತೀಚೆಗೆ ಅದು ಸರಿಯಾಗಿ ಸ್ಪಂದಿಸದೇ ನಿರಾಕರಿಸುವ ಲಕ್ಷಣವನ್ನು ತೋರಿಸುತ್ತಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವರು ಸುಮಾರು ಆರು ವಾರಗಳ ಕಾಲ ಬದುಕಿದ್ದು ಆಕ್ಟೋಬರ್ 30 ರಂದು ಸಾವನ್ನಪ್ಪಿದ್ದಾರೆ ಎಂದು ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ. ಹಂದಿಯ ಹೃದಯ ಅಳವಡಿಸಿದ ನಂತರ ಫೌಸೆಟ್‌ ಆರೋಗ್ಯ ಸುಧಾರಿಸಿತ್ತು, ಅವರು ಕುಟುಂಬ ಸದಸ್ಯರೊಂದಿಗೆ ಖುಷಿಯಿಂದ ಸಮಯ ಕಳೆದಿದ್ದರು.  ಜೊತೆಗೆ ಪತ್ನಿ ಜೊತೆ ಇಸ್ಪೀಟ್‌ನ್ನು ಆಡುತ್ತಿದ್ದರು. ಆದರೆ ಇತ್ತೀಚೆಗೆ ಅವರ ಹೃದಯವು ನಿರಾಕರಣೆಯ ಆರಂಭಿಕ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿತು. ಇದು ಬಹಳ ಸವಾಲಿನ ಪ್ರಕರಣವಾಗಿದ್ದರೂ ಸಹ ವೈದ್ಯಕೀಯ ತಂಡ ಹೆಚ್ಚಿನ ಮುತುರ್ವಜಿ ವಹಿಸಿ ಅವರಿಗೆ ಚಿಕಿತ್ಸೆ ನೀಡಿದರಾದರೂ ಅವರು ಪ್ರಾಣ ಬಿಟ್ಟಿದ್ದಾರೆ.

ವಾಷಿಂಗ್ಟನ್‌ ಡಿಸಿ: ಬಿಲಿಯನೇರ್ ಡೆಮೋಕ್ರಾಟ್ ದಾನಿ ಜಾರ್ಜ್ ಸೊರೋಸ್‌ ವಿರುದ್ಧ ಎಕ್ಸ್‌ ಮಾಲೀಕ ಹಾಗೂ ಸ್ಪೇಸ್‌ ಎಕ್ಸ್‌, ಟೆಸ್ಲಾ ಸ್ಥಾಪಕ ಎಲಾನ್‌ ಮಸ್ಕ್‌ ಕಿಡಿ ಕಾರಿದ್ದಾರೆ. ಜೋ ರೋಗನ್ ಅವರೊಂದಿಗಿನ ಇತ್ತೀಚಿನ ಪಾಡ್‌ಕ್ಯಾಸ್ಟ್ ಸಂಚಿಕೆಯಲ್ಲಿ ಮಾತನಾಡಿದ ಎಲಾನ್‌ ಮಸ್ಕ್‌ ಸೊರೋಸ್‌ ವಿರುದ್ಧ ಟೀಕೆ ಮಾಡಿದ್ದಾರೆ.  ಜಾರ್ಜ್ ಸೊರೋಸ್‌ “ಮೂಲಭೂತವಾಗಿ ಮಾನವೀಯತೆಯನ್ನು ದ್ವೇಷಿಸುತ್ತಾರೆ” ಎಂದು ಎಲಾನ್‌ ಮಸ್ಕ್‌ ಟೀಕಿಸಿದ್ದಾರೆ. ಹಾಗೂ ಸೊರೋಸ್‌ನ ಕ್ರಮಗಳ ಬಗ್ಗೆ ಎಲಾನ್‌ ಮಸ್ಕ್ ತನ್ನ ಕಳವಳ ವ್ಯಕ್ತಪಡಿಸಿದ್ದು, ಇದರಿಂದ ನಾಗರಿಕತೆಯ ಅಡಿಪಾಯವನ್ನು ನಾಶಪಡಿಸುತ್ತಿದೆ ಎಂದು ನಂಬಿರುವುದಾಗಿಯೂ ಟೆಸ್ಲಾ ಸಂಸ್ಥಾಪಕ ಎಲಾನ್‌ ಮಸ್ಕ್‌ ಹೇಳಿದ್ದಾರೆ. ಇನ್ನೊಂದೆಡೆ, ಅಪರಾಧಗಳನ್ನು ವಿಚಾರಣೆ ಮಾಡಲು ನಿರಾಕರಿಸುವ ಜಿಲ್ಲಾ ವಕೀಲರನ್ನು  (District Attorneys) (ಡಿಎ) ಆಯ್ಕೆ ಮಾಡುವ ವಿಷಯವನ್ನು ಎಲಾನ್‌ ಮಸ್ಕ್‌ ಪ್ರಸ್ತಾಪಿಸಿದ್ದು, ಇದು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲೀಸ್‌ನಂತಹ ನಗರಗಳ ಮೇಲೆ ಪರಿಣಾಮ ಬೀರುವ ಸಮಸ್ಯೆ ಎಂದು ಅವರು ನೋಡುತ್ತಾರೆ. ಇನ್ನು, ಈ ಆತಂಕಗಳು ಅಮೆರಿಕಕ್ಕೆ ಮಾತ್ರ ಸೀಮಿತವಾಗಿದೆಯೇ ಎಂದು ಎಲಾನ್‌ ಮಸ್ಕ್‌ ಅವರನ್ನು ಪ್ರಶ್ನೆ ಮಾಡಿದ್ದು, ಅದಕ್ಕೆ ಅವರು ಜಾರ್ಜ್‌ ಸೊರೋಸ್ ಇತರ ದೇಶಗಳಲ್ಲಿ ಸಹ ಇದೇ ರೀತಿಯ ಬದಲಾವಣೆಗಳನ್ನು ಪ್ರಭಾವಿಸುತ್ತಿದ್ದಾರೆ ಎಂದು ಅವರು ಸೂಚಿಸಿದ್ದಾರೆ. “ನನ್ನ ಅಭಿಪ್ರಾಯದಲ್ಲಿ, ಅವರು (ಸೊರೋಸ್) ಮೂಲಭೂತವಾಗಿ ಮಾನವೀಯತೆಯನ್ನು ದ್ವೇಷಿಸುತ್ತಾರೆ.. ಅವರು ನಾಗರಿಕತೆಯ ಚೌಕಟ್ಟನ್ನೇ ನಾಶಮಾಡುವ ಕೆಲಸ ಮಾಡುತ್ತಿದ್ದಾರೆ’’ ಎಂದೂ ಎಲಾನ್‌ ಮಸ್ಕ್ ಆರೋಪಿಸಿದರು.

ವಾಷಿಂಗ್ಟನ್‌: ಗಾಜಾ ಪಟ್ಟಿಯನ್ನು (Gaza Strip) ಆಕ್ರಮಿಸುವ ಇಸ್ರೇಲ್‌ (Israel) ನಡೆಗೆ ಅಮೆರಿಕ ವಿರೋಧ ವ್ಯಕ್ತಪಡಿಸಿದೆ. ಇದು ಇಸ್ರೇಲಿ ಜನರಿಗೆ ಒಳ್ಳೆಯದಲ್ಲ ಎಂದು ಅಮೆರಿಕ (America) ಎಚ್ಚರಿಕೆ ನೀಡಿದೆ.…

ಒಟ್ಟಾವಾ: ಖಲಿಸ್ಥಾನಿಗಳ ಕಾರಣದಿಂದ ಭಾರತ-ಕೆನಡಾ (India- Canada) ನಡ್ವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೆನಡಾದಲ್ಲಿರುವ ಖಲಿಸ್ಥಾನಿ ಉಗ್ರರು ಹಿಂದೂಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದೀಗ ಅಂತಹ ಕೆನಡಾದಲ್ಲಿ,…

ಟೆಲ್‌ ಅವೀವ್‌: ಪ್ಯಾಲೆಸ್ತೇನ್‌ (Palestine) ಕಾರ್ಮಿಕರ ಬದಲು ಭಾರತದ (India) ಕಾರ್ಮಿಕರನ್ನು ನೇಮಿಸಿಕೊಳ್ಳಲು ಇಸ್ರೇಲ್‌ (Isreal) ಈಗ ಮುಂದಾಗಿದೆ. ಹೌದು. ಹಮಾಸ್‌ ಜೊತೆಗಿನ ಯುದ್ಧದ ನಂತರ 90 ಸಾವಿರ ಪ್ಯಾಲೆಸ್ತೇನ್‌…

ಟೆಹ್ರಾನ್: ಗಾಜಾ (Gaza) ಮೇಲಿನ ಇಸ್ರೇಲ್‌ (Israel) ದಾಳಿಗಳನ್ನು ಕೊನೆಗೊಳಿಸಲು ಭಾರತ ತನ್ನ ಎಲ್ಲಾ ಸಾಮರ್ಥ್ಯಗಳನ್ನು ಬಳಸಬೇಕು ಎಂದು ಪ್ರಧಾನಿ ಮೋದಿಗೆ (Narendra Modi) ಕರೆ ಮಾಡಿ ಇರಾನ್‌…

ಅಂಕಾರಾ: ಹಮಾಸ್ ಉಗ್ರರನ್ನು (Hamas Terrorist) ಸರ್ವನಾಶ ಮಾಡುವ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಇಸ್ರೇಲ್ (Israel) ಗಾಜಾ ಮೇಲೆ ಭೀಕರ ದಾಳಿಯನ್ನು ಮುಂದುವರೆಸಿದೆ. ಈ ಹೊತ್ತಲ್ಲಿಯೇ ಮಹತ್ವದ ಬೆಳವಣಿಗೆ ನಡೆದಿದ್ದು…

ವಾಷಿಂಗ್ಟನ್: 2020 ರಲ್ಲಿ ತನ್ನ ಪತ್ನಿಯನ್ನು ಬರ್ಬರವಾಗಿ ಕೊಂದಿದ್ದ (Murder) ಭಾರತೀಯ ವ್ಯಕ್ತಿಗೆ (Indian) ಫ್ಲೋರಿಡಾದ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು (Life Sentence) ವಿಧಿಸಿದೆ.  ವರದಿಗಳ ಪ್ರಕಾರ ದೋಷಿ…