ಕಠ್ಮಂಡು: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಇಂದು ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ನಡೆಯುತ್ತಿದ್ದರೆ, ಇತ್ತ ರಾಮನ ಅತ್ತೆ ಮನೆ ನೇಪಾಳದಲ್ಲಿಯೂ ಹಬ್ಬದ ಸಡಗರ ಜೋರಾಗಿದೆ. ಹೌದು. ನೇಪಾಳದ ಜನಕಪುರದಲ್ಲಿರುವ ಜಾನಕಿ…
Browsing: ಅಂತರಾಷ್ಟ್ರೀಯ
ಚೀನಾ: ಚೀನಾದಲ್ಲಿ ಸತತ ಎರಡನೇ ವರ್ಷವೂ ಜನಸಂಖ್ಯೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಹಾಗೆಯೇ ಮರಣ ಪ್ರಮಾಣವೂ ಹೆಚ್ಚಾಗಿದೆ. ಒಂದೆಡೆ ವಿಶ್ವದ ಹಲವು ರಾಷ್ಟ್ರಗಳು ಹೆಚ್ಚುತ್ತಿರುವ ಜನಸಂಖ್ಯೆಯಿಂದ ಆತಂಕಗೊಂಡಿದ್ದರೆ, ಇನ್ನೊಂದೆಡೆ…
ವಾಷಿಂಗ್ಟನ್: ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ರಾಮೋತ್ಸವ ಆಚರಣೆಗೆ ಸಿದ್ಧತೆಗಳು ನಡೆದಿವೆ. ಅಮೆರಿಕ ಒಂದರಲ್ಲೇ 20ಕ್ಕೂ ಹೆಚ್ಚು ಕಡೆ ರಾಮೋತ್ಸವ ನಡೆಯಲಿದೆ. ಈಗಾಗಲೇ ವಾಷಿಂಗ್ಟನ್ ಡಿಸಿ ಸೇರಿ ವಿವಿಧೆಡೆ…
ಲಂಡನ್ : ಅಕ್ರಮ ವಲಸಿಗರನ್ನು ಉದ್ದೇಶಪೂರ್ವಕವಾಗಿ ತಮ್ಮ ದೇಶದ ಗಡಿಗಳಿಗೆ ನುಗ್ಗಿಸುವ ಮೂಲಕ ಶತ್ರು ದೇಶಗಳು ತಮ್ಮ ದೇಶದ ಸಮಾಜದಲ್ಲಿ ಅಸ್ಥಿರತೆ ಮೂಡಿಸಲು ಪ್ರಯತ್ನಿಸುತ್ತಿವೆ ಎಂದು ಯುಕೆ ಪ್ರಧಾನಿ…
ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಒದ್ದಾಡುತ್ತಿರುವ ನೆರೆಯ ರಾಷ್ಟ್ರ ಪಾಕಿಸ್ತಾನ ತನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಹೆಣಗಾಡುತ್ತಿದೆ. ನಡುವೆ ಮಾರುಕಟ್ಟೆಯಲ್ಲಿ ಅಗತ್ಯವಸ್ತುಗಳ ಬೆಲೆ ದುಪ್ಪಟ್ಟಾಗಿದ್ದು, ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿವೆ. ಸರ್ಕಾರ…
ವಾಷಿಂಗ್ಟನ್: ಮಹಿಳೆಯೊಬ್ಬಳನ್ನು ತನ್ನ ಗೆಳೆಯನ 18 ತಿಂಗಳ ಮಗುವಿಗೆ ನೇಲ್ ಪಾಲಿಶ್ ರಿಮೂವರ್ ಹಾಗೂ ಸಣ್ಣ ಸ್ಕ್ರೂಗಳನ್ನು ತಿನ್ನಿಸಿ ಹತ್ಯೆಗೈದ ಆರೋಪದ ಮೇಲೆ ಅಮೆರಿಕದ ಪೊಲೀಸರು ಬಂಧಿಸಿದ್ದಾರೆ.…
ಬೀಜಿಂಗ್: ತಂತ್ರಜ್ಞಾನ ವಲಯದಲ್ಲಿ ಜಗತ್ತಿನ ವೇಗಕ್ಕಿಂತ ಒಂದು ಹೆಜ್ಜೆ ಮುಂದಿರುವ ಚೀನಾ, ಇದೀಗ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಅನ್ನು ಅನಾವರಣಗೊಳಿಸಿದೆ. ಹೊಸ ತಲೆಮಾರಿನ ವೇಗದ ಇಂಟರ್ನೆಟ್…
ಲಂಡನ್: ಎರಡು ಮಕ್ಕಳ ತಾಯಿಯೊಂದಿಗೆ 16 ವರ್ಷದ ಪೋರನಿಗೆ ಲವ್ ಆಗಿದ್ದು, ಸದ್ಯ ಆತ 9 ತಿಂಗಳ ಮಗುವಿನ ತಂದೆಯಾಗಿದ್ದಾನೆ. ಇಂಗ್ಲೆಂಡಿನ ಡರ್ಹಾಮ್ ಸಿಟಿಯ 31 ವರ್ಷದ ಕ್ಯಾಥಲಿನ್…
ಭಾರತವನ್ನು ಕೆಣಕಿದ ಮಾಲ್ಡೀವ್ಸ್ ಇದೀಗ ಕಂಗಾಲಾಗಿದೆ. ಒಂದೆಡೆ ಭಾರತ ಹಾಗೂ ಭಾರತೀಯರ ವಿರೋಧ, ಮತ್ತೊಂದೆಡೆ ಮಾಲ್ಡೀವ್ಸ್ ಪ್ರವಾಸೋದ್ಯಮ ನೆಲಕಚ್ಚುವ ಭೀತಿ ಎದುರಾಗಿದೆ. ಭಾರತೀಯರು ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ…
ಕೇಪ್ ಕೆನವೆರಲ್: ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಖಾಸಗಿ ಕಂಪನಿಯೊಂದರ ಲ್ಯಾಂಡರ್, ಚಂದ್ರನ ಮೇಲೆ ಲ್ಯಾಂಡ್ ಆಗುವ ನಿರೀಕ್ಷೆಯಿದೆ. ಈ ಯೋಜನೆಯನ್ನು ನಾಸಾ ಕೈಗೊಂಡಿದ್ದು, ಕೆನವೆರಲ್ ಲ್ಯಾಂಡರ್ ಹೊತ್ತ ರಾಕೆಟ್ ಉಡಾವಣೆಗೊಂಡಿದೆ. ಈವರೆಗೆ ಸರ್ಕಾರಿ ಸಂಸ್ಥೆಗಳು ಮಾತ್ರ ಚಂದ್ರನ ಮೇಲೆ ತಮ್ಮ ಲ್ಯಾಂಡರ್ಗಳನ್ನು ಇಳಿಸಿದ್ದವು. ಆದರೆ ನಾಸಾ, ಈ ಯೋಜನೆಯನ್ನು ಖಾಸಗಿಯವರಿಗೂ ವಿಸ್ತರಿಸಿದೆ. ಈ ಲ್ಯಾಂಡರನ್ನು ಪಿಟ್ಸ್ಬರ್ಗ್ ಮೂಲದ ಆಕ್ಟೋಬೋಟಿಕ್ ಸಂಸ್ಥೆ ತಯಾರಿಸಿದ್ದು, ಇದು ಫೆ.23ರಂದು ಚಂದ್ರನ ನೆಲದ ಮೇಲಿಳಿವ ನಿರೀಕ್ಷೆಯಿದೆ. ಆದರೆ, ಉಡಾವಣೆ ಬಳಿಕಎಂಜಿನ್ ಸಮಸ್ಯೆ ಕಾಣಿಸಿಕೊಂಡಿದ್ದು, ವಿಜ್ಞಾನಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 1972ರಲ್ಲಿ ಕೊನೆಯ ಬಾರಿ ನಾಸಾ ಚಂದ್ರಯಾನ ಕೈಗೊಂಡಿತ್ತು. ಇದಾದ 50 ವರ್ಷ ಬಳಿಕ ಮತ್ತೆ ಇಂಥ ಯತ್ನ ನಡೆದಿದೆ. ಅಮೆರಿಕದ ಈ ಚಂದ್ರಯಾನ ಯೋಜನೆಗೆ ಭಾರತದ ನಂಟಿದೆ. ಲ್ಯಾಂಡರ್ ತಯಾರಿಸಿರುವ ಆಸ್ಫೋಬೋಟಿಕ್ ಸಂಸ್ಥೆಯ ನಿರ್ದೇಶಕ ಶರದ್ ಭಾಸ್ಕರನ್ ಅವರು ಭಾರತ ಮೂಲದವರಾಗಿದ್ದಾರೆ. ಈ ಯೋಜನೆಗಾಗಿ ಇವರು 7 ವರ್ಷಗಳ ಕಾಲ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಯೋಜನೆ ಯಶಸ್ವಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.