Browsing: ಅಂತರಾಷ್ಟ್ರೀಯ

ಖೈಬರ್‌ ಪಖ್ತುಂಖ್ವಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಏಳು ಜನ ಯೋಧರು ಮೃತಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಪ್‌, ಭಯೋತ್ಪಾದನೆಯನ್ನು ದೇಶದಿಂದ ನಿರ್ಮೂಲನೆ ಮಾಡುವುದಾಗಿ ತಿಳಿಸಿದ್ದಾರೆ.…

ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಸತತ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ. ಇದೇ ವೇಳೆ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು…

ಭಾನುವಾರ ಸಂಜೆ ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಮಾತಾ ವೈಷ್ಣೋದೇವಿ ದೇವಾಲಯದಿಂದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಪಾಕಿಸ್ತಾನಿ ಉಗ್ರರು ಗುಂಡಿನ ದಾಳಿನಡೆಸಿದ್ದಾರೆ. ಇದರಿಂದ ಬಸ್ ಕಣಿವೆಗೆ ಉರುಳಿಬಿದ್ದು…

ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡ ನೇಪಾಳ ಪ್ರಧಾನಿ ಪುಷ್ಪ ಕಮಲ್‌ ದಹಲ್‌ ಪ್ರಚಂಡ…

ಸಿಯೋಲ್ ಗಡಿ ಪ್ರದೇಶಗಳಲ್ಲಿ ಕಸ ಮತ್ತು ಗೊಬ್ಬರ ತುಂಬಿದ ಒಂದು ಸಾವಿರ ಬಲೂನ್‌ಗಳನ್ನು ಹಾರಿಬಿಟ್ಟ ಉತ್ತರ ಕೊರಿಯಾದ ವಿರುದ್ಧ ದಕ್ಷಿಣ ಕೊರಿಯಾ ಪ್ರತೀಕಾರಕ್ಕೆ ಮುಂದಾಗಿದೆ. ತಾನು ಧ್ವನಿವರ್ಧಕಗಳಲ್ಲಿ…

ಪಾಕಿಸ್ತಾನದಲ್ಲಿ ಈ ವರ್ಷದ ಐದನೇ ಪೋಲಿಯೊ ಪ್ರಕರಣ ದೃಢಪಟ್ಟಿದೆ. ಪೋಲಿಯೊ ಪೀಡಿತ ಮಗುವೊಂದು ಮೃತಪಟ್ಟ ಹದಿನೈದು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಸೋಂಕು ನಿರ್ಮೂಲನೆಗೆ…

ಕೆಲವೊಮ್ಮೆ ಸೆಲೆಬ್ರಿಟಿಗಳು ಮಾತಿನ ಭರದಲ್ಲಿ ಎಡವಟ್ಟು ಮಾಡಿಕೊಂಡು, ಆ ಬಳಿಕ ಕ್ಷಮೆಯಾಚಿಸುವುದುಂಟು. ಇಂಥದ್ದೇ ಒಂದು ಘಟನೆ ಬ್ರೆಜಿಲ್‌ ನಲ್ಲಿ ನಡೆದಿದೆ. ಮೂರು ಬಾರಿ ಬ್ರೆಜಿಲ್‌ನ ರಿಯೊ ಡಿ…

ಕಾಣೆಯಾಗಿದ್ದ ಮಹಿಳೆಯ ಶವ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದ ದಕ್ಷಿಣದ ಪ್ರಾಂತ್ಯವಾದ ಸುಲಾವೇಸಿ ಬಳಿಯ ಕಾಲಾಪಾಂಗ್ ಎಂಬಲ್ಲಿ ನಡೆದಿದೆ. ದೈತ್ಯ ಹೆಬ್ಬಾವೊಂದು ಫರಿದಾ ಎನ್ನುವ 49…

ಡೆನ್ಮಾರ್ಕ್ ಪ್ರಧಾನಿ ಮೆಟೆ ಫ್ರೆಡೆರಿಕ್ಸನ್ ಮೇಲೆ ಹಲ್ಲೆ ನಡೆದಿದ್ದು ಪ್ರಧಾನಿಗೆ ಯಾವುದೇ ಗಾಯವಾಗಿಲ್ಲ. ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಪನ್ಹ್ಯಾಗನ್ನ ಕಲ್ಟೋರ್ವೆಟ್ ಎಂಬಲ್ಲಿ…

ಲಿಬಿಯಾ ಕರಾವಳಿಯ ಬಳಿ ಸಮುದ್ರದಲ್ಲಿ ಮುಳುಗುತ್ತಿದ್ದ ದೋಣಿಯಲ್ಲಿದ್ದ 160ಕ್ಕೂ ಅಧಿಕ ವಲಸಿಗರನ್ನು ರಕ್ಷಿಸಲಾಗಿದೆ. ಆದರೆ 11 ವಲಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಅವರ ಮೃತದೇಹಗಳನ್ನು ಪತ್ತೆಹಚ್ಚಿರುವುದಾಗಿ ಸ್ವಯಂಸೇವಾ ಸಂಸ್ಥೆ `ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ ಹೇಳಿದೆ. ಲಿಬಿಯಾ ಕಡಲ ತೀರದ ಬಳಿ ಮುಳುಗುತ್ತಿದ್ದ ದೋಣಿಯಲ್ಲಿದ್ದ 146 ಮಂದಿಯನ್ನು ರಕ್ಷಣಾ ಕಾರ್ಯಕರ್ತರ ದೋಣಿ ರಕ್ಷಿಸಿದೆ. ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಉಳಿದ 20 ವಲಸಿಗರನ್ನು ರಕ್ಷಿಸಿ ದಡ ಸೇರಿಸಲಾಗಿದೆ. ಈ ಮಧ್ಯೆ, ರಕ್ಷಣಾ ಕಾರ್ಯಕ್ಕೆ ಬಳಸಲಾಗಿದ್ದ ಹೆಲಿಕಾಪ್ಟರ್ ಸಮುದ್ರದಲ್ಲಿ ತೇಲುತ್ತಿದ್ದ 11 ಮೃತದೇಹಗಳನ್ನು ಪತ್ತೆಹಚ್ಚಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮೃತದೇಹಗಳನ್ನು ದಡಕ್ಕೆ ತರಲಾಗಿದೆ ಎಂದು ತಿಳಿಸಿದೆ.