ಹೈದ್ರಾಬಾದ್ : ಮನೆಗೆ ಯಜಮಾನ ಎಷ್ಟು ಮುಖ್ಯವೋ, ಪ್ರತಿ ಕ್ರೀಡಾ ತಂಡವೊಂದಕ್ಕೆ ಅಂತಹಾ ನಾಯಕ ಅತ್ಯಗತ್ಯ. 41 ವರ್ಷದ ಧೋನಿಯಲ್ಲಿ ಕೃಷ್ಣನ ತಂತ್ರಗಾರಿಕೆ, ಭೀಮನ ಶಕ್ತಿ, ಅರ್ಜುನನ ತೀಕ್ಷ್ಣತೆ,…
Browsing: ಕ್ರೀಡೆ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL 2023) ತೆರೆಬೀಳುತ್ತಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಗುಜರಾತ್ ಟೈಟಾನ್ಸ್ (CSK vs…
ಅಹ್ಮದಾಬಾದ್: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸ್ಟಾರ್ ಆಟಗಾರ ಅಂಬಾಟಿ ರಾಯುಡು (37) (Ambati Rayudu) ಐಪಿಎಲ್ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ…
ಅಹಮ್ಮದಾಬಾದ್: ಐಪಿಎಲ್ 2023 ಟೂರ್ನಿ ಫೈನಲ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಮೇ.28 ರಂದು ಅಹಮ್ಮದಾಬಾದ್‌ನಲ್ಲಿ ಪಂದ್ಯ ನಡೆಯಲಿದೆ. ಇದರ ನಡುವೆ ಈ ಬಾರಿ ಟ್ರೋಫಿ ಗೆಲ್ಲುವ ತಂಡ ಯಾವುದು ಅನ್ನೋದು ಭಾರಿ ಚರ್ಚೆಯಾಗುತ್ತಿದೆ. ಇದರ ನಡುವೆ 2016ರ ಐಪಿಎಲ್ ಅಂಕಿ ಅಂಶದ ಪ್ರಕಾರ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಗೆಲ್ಲಲಿದೆ. ಗುಜರಾತ್ ಟೈಟಾನ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. 2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ 2023ರಲ್ಲಿ ಗುಜರಾತ್ ಟೈಟಾನ್ಸ್ ಫೈನಲ್ ಹಾದಿ ಬಹುತೇಕ ಒಂದೇ ರೀತಿ ಇದೆ. ಹೀಗಾಗಿ ಈ ಬಾರಿ ಗುಜರಾತ್ ರನ್ನರ್ ಅಪ್ ಸ್ಥಾನ ಪಡೆದುಕೊಂಡರೆ, ಸಿಎಸ್‌ಕೆ ಕಪ್ ಗೆಲ್ಲಲಿದೆ ಎಂದು ಐಪಿಎಲ್ ಇತಿಹಾಸ ಹೇಳುತ್ತಿದೆ. ಉಭಯ ತಂಡಗಳು ಟೇಬಲ್ ಟಾಪರ್ಸ್ ಆಗಿ ಪ್ಲೇ ಆಫ್ ಪ್ರವೇಶ ಮಾಡಿತ್ತು. ಆದರೆ ಚೆನ್ನೈ ನೇರವಾಗಿ ಫೈನಲ್ ಪ್ರವೇಶಿಸಿದರೆ, ಗುಜರಾತ್ 2ನೇ ಕ್ವಾಲಿಫೈಯರ್ ಪಂದ್ಯ ಆಡಿ ಫೈನಲ್ ತಲುಪಿದೆ. 2016ರಲ್ಲಿ ಫೈನಲ್ ತಲುಪಿದ ಆರ್‌ಸಿಬಿ ತಂಡ ಆರೇಂಜ್ ಕ್ಯಾಪ್ ಹೊಂದಿತ್ತು. ಅಂದು ನಾಯಕ ವಿರಾಟ್ ಕೊಹ್ಲಿ ಗರಿಷ್ಠ ರನ್ ಸಿಡಿಸಿ ಆರೇಂಜ್ ಕ್ಯಾಪ್‌ನೊಂದಿಗೆ ಫೈನಲ್ ಪಂದ್ಯ ಆಡಿದ್ದರು. 2023ರಲ್ಲಿ ಗುಜರಾತ್ ಟೈಟಾನ್ಸ್ ಆಟಗಾರ ಶುಬಮನ್ ಗಿಲ್ ಆರೇಂಜ್ ಕ್ಯಾಪ್ ಗಿಟ್ಟಿಸಿಕೊಂಡಿದ್ದಾರೆ. 2016ರಲ್ಲಿ ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್, ಅಸಾಧರಣ ಚೇಸಿಂಗ್, ಗರಿಷ್ಠ ರನ್ ಟಾರ್ಗೆಟ್ ಸೆಟ್ ಮೂಲಕ ಅದ್ಭುತ ಆಟ ಪ್ರದರ್ಶಿಸಿತ್ತು. ಈ ಬಾರಿ ಗುಜರಾತ್ ಟೈಟಾನ್ಸ್ 8ನೇ ಕ್ರಮಾಂಕದ ವರೆಗೂ ಸ್ಫೋಟಕ ಬ್ಯಾಟ್ಸ್‌ಮನ್ ಹೊಂದಿದೆ. 2016ರಲ್ಲಿ ಆರ್‌ಸಿಬಿ ತಂಡ ತವರಿನಲ್ಲಿ(ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು) ನಡೆದ ಕ್ವಾಲಿಫೈರ್ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲ್ ತಲುಪಿತ್ತು. ಇದೀಗ ಗುಜರಾತ್ ಟೈಟಾನ್ಸ್ ತನ್ನ ತವರಿನಲ್ಲಿ(ಅಹಮ್ಮದಾಬಾದ್)ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಇಷ್ಟೇ ಅಲ್ಲ 2016ರಲ್ ಆರ್‌ಸಿಬಿ ಫೈನಲ್ ಪಂದ್ಯವನ್ನೂ ತವರು ನೆಲ ಬೆಂಗಳೂರಿನಲ್ಲಿ ಆಡಿತ್ತು. ಇದೀಗ ಗುಜರಾತ್ ಟೈಟಾನ್ಸ್ ಫೈನಲ್ ಪಂದ್ಯವನ್ನ ಅಹಮ್ಮಾದಬಾದ್‌ನಲ್ಲಿ ಆಡುತ್ತಿದೆ. 2016ರಲ್ಲಿ ಆರ್‌ಸಿಬಿ 2023ರಲ್ಲಿ ಗುಜರಾತ್ ತನ್ನ ತವರಿನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿತ್ತು. ಇಷ್ಟೇ ಅಲ್ಲ ಗೆಲುವಿನ ಸರಾಸರಿಯಲ್ಲಿ ಗರಿಷ್ಠ ಪ್ರಮಾಣ ದಾಖಲಿಸಿತ್ತು. 2016ರಲ್ಲಿ ಆರ್‌ಸಿಬಿ ಫೈನಲ್ ಪಂದ್ಯಕ್ಕೂ ಮುನ್ನ ತವರಿನಲ್ಲಿ ಆಡಿದ 8 ಪಂದ್ಯದಲ್ಲಿ 5 ಗೆಲುವು ಸಾಧಿಸಿತ್ತು. 2023ರಲ್ಲಿ ಗುಜರಾತ್ ಟೈಟಾನ್ಸ್ ತವರಿನಲ್ಲಿ ಆಡಿದ 8 ಪಂದ್ಯದಲ್ಲಿ 5 ಗೆಲುವು ಸಾಧಿಸಿದೆ. 2016ರ ಅಂಕಿ ಅಂಶದ ಪ್ರಕಾರ ಈ ಬಾರಿ ಗುಜರಾತ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಸಾಧ್ಯತೆ ಇದೆ. ಆದರೆ ಅಂಕಿ ಅಂಶ ಪ್ರಸಕ್ತ ಪಂದ್ಯಕ್ಕೆ ನೆರವು ನೀಡಿದ್ದು ತೀರಾ ಕಡಿಮೆ. ಅಂದಿನ ಪ್ರದರ್ಶನ, ಕಂಡೀಷನ್, ತಂತ್ರ, ಎದುರಾಳಿಗಳ ಮೇಲೆ ಹೇರುವ ಒತ್ತಡ ಸೇರಿದಂತೆ ಹಲವು ಕಾರಣಗಳು ಗೆಲುವಿನ ಹಿಂದೆ ಅಡಗಿರುತ್ತದೆ. ಹೀಗಾಗಿ ಚೆನ್ನೈ ಅಥವಾ ಗುಜರಾತ್, ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡ ಗೆಲುವು ಸಾಧಿಸಲಿದೆ.
ಬಾಲಿವುಡ್ ನಟ ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿ ಖಾನ್ ಹಾಗೂ ಕ್ರಿಕೆಟಿಗ ಶುಭ್ ಮನ್ ಗಿಲ್ ಡೇಟಿಂಗ್ ಮಾಡ್ತಿರೋದು ಗೊತ್ತೇ ಇದೆ. ಈಗಾಗ್ಲೇ ಸಾಕಷ್ಟು ಭಾರಿ…
ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ 1 ತಿಂಗಳಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಭಾನುವಾರ…
ಚೆನ್ನೈ: 2023ರ ಐಪಿಎಲ್ (IPL 2023) ಆವೃತ್ತಿಯ ಪ್ಲೇ ಆಫ್‌ನಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (GT) ತಂಡವನ್ನ ಮಣಿಸಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK)…
ಚೆನ್ನೈ: ಎಂಎಸ್ ಧೋನಿ ತಾನಾಗಿಯೇ ಐಪಿಎಲ್ ನಿವೃತ್ತಿ ಬಗ್ಗೆ ಮಾತನಾಡದೇ ಇದ್ದರೂ ಪದೇ-ಪದೆ ನಿವೃತ್ತಿ ಬಗ್ಗೆ ಸಿಎಸ್‌ಕೆ ನಾಯಕನಿಗೆ ಪ್ರಶ್ನೆ ಕೇಳಲಾಗುತ್ತಿದೆ. ಅದೇ ರೀತಿ ಮಂಗಳವಾರ ರಾತ್ರಿ ಗುಜರಾತ್…
ಚೆನ್ನೈ : ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ 10ನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ. ಐಪಿಎಲ್ 2023…
ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.…