ಇಲ್ಲೊಬ್ಬ ವ್ಯಕ್ತಿ ಬ್ರೇಕಪ್ ಆದ ನಂತರ ಮಾಜಿ ಗರ್ಲ್ ಫ್ರೆಂಡ್ ಬಳಿಯಿಂದ ಖರ್ಚಾದ ಹಣವನ್ನು (Money) ವಾಪಾಸ್ ಕೇಳಿದ್ದಾನೆ. ಆಸ್ಟ್ರೇಲಿಯದ ಅಡಿಲೇಡ್ನಲ್ಲಿ ವಾಸಿಸುವ ಆಯ್ಲೆ ತನ್ನ ಸಂಗಾತಿ ಅಲೆಕ್ಸ್ನೊಂದಿಗೆ ಸಂಬಂಧ ಹೊಂದಿದ್ದಳು. ಇತ್ತೀಚಿಗಷ್ಟೇ ಆತನಿಂದ ದೂರವಾಗಿದ್ದಳು. ಸ್ಪಲ್ಪ ದಿನಗಳ ನಂತರ ಆಕೆಗೆ ಮಾಜಿ ಬಾಯ್ಫ್ರೆಂಡ್ ಆಕೆಗೆ ಖರ್ಚು ಮಾಡಿದ ಹಣದ ಲಿಸ್ಟ್ನ್ನು ಕಳುಹಿಸಿಕೊಟ್ಟಿದ್ದಾನೆ. ಮಾತ್ರವಲ್ಲ ಅದರಲ್ಲಿ ಅರ್ಧ ಹಣವನ್ನು ಪಾವತಿಸುವಂತೆ ಹೇಳಿದ್ದಾನೆ. ಇದನ್ನು ಉಲ್ಲೇಖಿಸಿ ಆಯ್ಲೆ ಟಿಕ್ಟಾಕ್ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾಳೆ. ಮಾತ್ರವಲ್ಲ ತಮ್ಮ ಸಂಬಂಧದ ಸಮಯದಲ್ಲಿ ತನಗಾಗಿ ಖರ್ಚು ಮಾಡಿದ ಎಲ್ಲಾ ಖರ್ಚುಗಳನ್ನು ಒಳಗೊಂಡಿರುವ ದೀರ್ಘ ಪಟ್ಟಿಯ ಫೋಟೋವನ್ನು ಅಪ್ಲೋಡ್ ಮಾಡಿದ್ದಾಳೆ. ಈ ಪಟ್ಟಿಯಲ್ಲಿ ಇಂಧನ, ಆಹಾರ, ನೀರು ಮತ್ತು ಸಿನಿಮಾ ಟಿಕೆಟ್ಗಳ ವೆಚ್ಚವೂ ಸೇರಿದೆ. ಈಗ, ಅಲೆಕ್ಸ್ ತನ್ನ ಮಾಜಿ ಗೆಳತಿ ಒಟ್ಟಿಗೆ ಇಲ್ಲದ ಕಾರಣ ಅರ್ಧದಷ್ಟು ಖರ್ಚನ್ನು ಆಕೆ ಪಾವತಿಸಲು ಬಯಸುತ್ತಾನೆ.
Browsing: ರಾಷ್ಟ್ರೀಯ
ನವದೆಹಲಿ : ಮಾದಕ ದ್ರವ್ಯಗಳನ್ನು ಸೇವಿಸಿ, ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿ ಮತ್ತು ತನ್ನ ಕಾಮತೃಷೆ ತೀರಿಸಿಕೊಳ್ಳಲು ಹಲವಾರು ಕಿಲೋಮೀಟರ್ಗಳಷ್ಟು ದೂರ ಹೋಗಿ ಅತ್ಯಾಚಾರ ಮಾಡುತ್ತಿದ್ದ ಕಾಮಪಿಶಾಚಿಗೆ ಇತ್ತೀಚೆಗೆ ಕೊನೆಗೂ ಶಿಕ್ಷೆಯಾಗಿದೆ.…
ಹೈದರಾಬಾದ್: ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಪ್ರಕರಣದಲ್ಲಿ, ತನ್ನ ಗಾಯಕ್ಕೆ ಚಿಕಿತ್ಸೆ ಪಡೆಯಲು ಬಂದ ಅಪ್ರಾಪ್ತ ಬಾಲಕನಿಗೆ ಔಷಧಿ ಹಾಕೋದು ಬಿಟ್ಟು ‘ಫೆವಿಕ್ವಿಕ್’ ಅಂಟು ಹಾಕಿ ಕಳಿಸಿದ ಆರೋಪವನ್ನು ತೆಲಂಗಾಣದ ಆಸ್ಪತ್ರೆಯ ವೈದ್ಯರು ಎದುರಿಸಿದ್ದಾರೆ. ಇದರ ಬೆನ್ನಲ್ಲಿಯೇ…
ತಿರುಪತಿ: ವಿಶ್ವವಿಖ್ಯಾತ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾರಿ ಭದ್ರತಾ ವೈಫಲ್ಯ (security lapse) ಉಂಟಾಗಿದ್ದು ನಿಷೇಧದ ಹೊರತಾಗಿಯೂ ದೇವಸ್ಥಾನದ ಒಳಗೆ ಮೊಬೈಲ್ ತೆಗೆದುಕೊಂಡು ಹೋದ ಭಕ್ತನೊಬ್ಬ ದೇಗುಲದ ಗೋಪುರ ಹಾಗೂ ಇತರ ಭಾಗಗಳನ್ನು ಚಿತ್ರೀಕರಿಸಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ಚಿನ್ನದ ಲೇಪಿತ ಆನಂದ ನಿಲಯಂ (ಗೋಪುರ) (Ananda Nilayam) ಹಾಗೂ ವಿಮಾನ ಪ್ರಕಾರಂ (ಗರ್ಭಗುಡಿಗೆ ಸುತ್ತಲಿನ ಭಾಗ) ಭಾಗಗಳನ್ನು ಚಿತ್ರೀಕರಿಸಲಾಗಿದೆ. ಇದರ ಬೆನ್ನಲ್ಲೇ ದೇವಸ್ಥಾನ ಮಂಡಳಿಯು ಘಟನೆ ಕುರಿತು ತನಿಖೆಗೆ ಆದೇಶಿಸಿದೆ. ಪ್ರಾಥಮಿಕ ಹಂತದಲ್ಲಿ ಭದ್ರತಾ ಲೋಪವನ್ನು ತಡೆಗಟ್ಟುವಲ್ಲಿ ವಿಫಲವಾದ ಕಾರಣ ದೇವಸ್ಥಾನದ ಭದ್ರತಾ ವಿಭಾಗವು ತನಿಖೆ ಎದುರಿಸಬೇಕಾಗುತ್ತದೆ ಎನ್ನಲಾಗಿದೆ. ದೇವಸ್ಥಾನದ ಒಳಗೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು(Electronic) ನಿಷೇಧಿಸಲಾಗಿದೆ. ಆದರೂ ವಿಡಿಯೋ ಚಿತ್ರೀಕರಿಸಿರುವ ಅಪರಿಚಿತ ಭಕ್ತಾದಿ, ಭದ್ರತಾ ಸಿಬ್ಬಂದಿಯನ್ನು ದಾಟಿ ಹೇಗೆ ಮೊಬೈಲ್ ಅಥವಾ ಕ್ಯಾಮರಾ ಕೊಂಡೊಯ್ದು ವಿಡಿಯೋ ಮಾಡಿದ್ದಾನೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಭಾನುವಾರ ತಿರುಮಲದಲ್ಲಿ ಸುರಿದ ಧಾರಾಕಾರ ಮಳೆಯಿಂದ 2 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇದೇ ವೇಳೆ ಘಟನೆ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪತ್ತೆಗೆ ಕ್ರಮ: ‘ಮಾಹಿತಿ ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಮೊದಲು ಜಾಲತಾಣದಲ್ಲಿ ವೀಡಿಯೋ ಎಲ್ಲಿ ಮತ್ತು ಯಾರು ಅಪ್ಲೋಡ್ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುವುದು. ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಟಿಟಿಡಿಯ (TTD) ಮುಖ್ಯ ಭದ್ರತಾ ಅಧಿಕಾರಿ ಡಿ ನರಸಿಂಹ ಕಿಶೋರ್ (Narasimha Kishore) ತಿಳಿಸಿದ್ದಾರೆ. ಅಲ್ಲದೇ ದೇವಾಲಯದ ಒಳಾಂಗಣ ಹಾಗೂ ಹೊರಾಂಗಣ ಭಾಗಗಳಲ್ಲಿ ಳವಡಿಸಲಾದ ಎಲ್ಲ ಸಿಸಿಟಿವಿ ದೃಶ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ.
ಚೆನ್ನೈ: DMK ಫೈಲ್ಸ್ ರಿಲೀಸ್ ಮಾಡಿದ್ದು ಭ್ರಷ್ಟಾಚಾರದ ಆರೋಪ ಹೊರಿಸಿದ್ದ ರಾಜ್ಯ ಬಿಜೆಪಿ (BJP) ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ತಮಿಳುನಾಡು ಸರ್ಕಾರವು (Tamil Nadu Government) ಬುಧವಾರದಂದು…
ಜೈಪುರ: ಬೆಂಗಳೂರು (Bengaluru) ಮೂಲದ ನೀಟ್ (NEET) ವಿದ್ಯಾರ್ಥಿಯೊಬ್ಬ ರಾಜಸ್ಥಾನದ (Rajasthan) ಕೋಟಾ ವಿಜ್ಞಾನ ನಗರ ಪ್ರದೇಶದ ಬಹುಮಡಿ ಕಟ್ಟಡದ 10ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು…
ನವದೆಹಲಿ: ಮೇ 10 ರಂದು ಕರ್ನಾಟಕದ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮನವಿ ಮಾಡಿದ್ದಾರೆ. ವಿಡಿಯೋ ಸಂದೇಶದ ಮೂಲಕ ಕರ್ನಾಟಕದ (Karnataka)ಜನತೆಯನ್ನು ತಲುಪುವ ಪ್ರಯತ್ನ ಮಾಡಿರುವ ಪ್ರಧಾನಿ ಮೋದಿ(Narendra Modi) ಮೇ 10 ರಂದು ತಪ್ಪದೇ ಮತದಾನ ಎಂದು ಮನವಿ ಮಾಡಿದ್ದಾರೆ. ನೀವು ನನಗೆ ಸದಾ ಪ್ರೀತಿ ಕೊಟ್ಟಿದ್ದೀರಿ ಅದು ನನಗೆ ಈಶ್ವರನ ಆರ್ಶೀವಾದವಿದ್ದಂತೆ, ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಎನಿಸಿಕೊಂಡಿದೆ. ಆದಷ್ಟು ಬೇಗ ಕರ್ನಾಟಕ ವನ್ನು ದೇಶದ ಆರ್ಥಿಕತೆಯ ನಂಬರ್ 1 ರಾಜ್ಯವನ್ನಾಗಿ ಮಾಡಬೇಕಿದೆ. ಎಲ್ಲರ ಲಕ್ಷ್ಯ ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ಎಕಾನಮಿಯತ್ತ ಕೊಂಡೊಯ್ಯುವುದಾಗಿರಬೇಕು. ಕೊರೊನಾ ಬಳಿಕವು ದೇಶದಕ್ಕ 90 ಸಾವಿರ ಕೋಟಿಯಷ್ಟು ವಿದೇಶಿ ಬಂಡವಾಳ ಹೂಡಿಕೆಯಾಗಿದೆ, ಆದರೆ ಕಳೆದ ಸರ್ಕಾರದಲ್ಲಿ ಕೇವಲ 30 ಸಾವಿರ ಕೋಟಿಯಷ್ಟು ಮಾತ್ರ ವಿದೇಶಿ ಬಂಡವಾಳ ಹೂಡಿಕೆಯಾಗಿತ್ತು ಎಂದು ಹೇಳಿದರು. ಬಂಡವಾಳ ಹೂಡಿಕೆ, ಕೈಗಾರಿಕೆ ಮತ್ತು ಆವಿಷ್ಕಾರದಲ್ಲಿ ಕರ್ನಾಟಕ ಪ್ರಥಮ ಸ್ಥಾನ ಪಡೆಯಬೇಕು, ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ, ಕೃಷಿಯಲ್ಲಿಯೂ ಕರ್ನಾಟಕವನ್ನು ನಂಬರ್ ಒನ್ ಮಾಡಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಕರ್ನಾಟಕವನ್ನು ನಂಬರ್ 1 ಮಾಡಲು ಮೇ 10ರಂದು ನಿಮ್ಮೆಲ್ಲರನ್ನೂ ಜವಾಬ್ದಾರಿಯುತ ನಾಗರಿಕರಾಗಿ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ವಿನಂತಿಸಿದ್ದಾರೆ.
ನವದೆಹಲಿ: ಕರ್ನಾಟಕ ಸರ್ಕಾರ (Government of Karnataka) ಮುಸ್ಲಿಂ ಸಮುದಾಯದ 4% ಮೀಸಲಾತಿಯನ್ನು (Reservation) ರದ್ದುಗೊಳಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ (Supreme Court) ಇಂದು…
ನವದೆಹಲಿ: ಭಾರತದಲ್ಲಿ ಇಂದು 1,331 ಹೊಸ ಕೋವಿಡ್ -19 ಕೇಸ್ಗಳು ದಾಖಲಾಗಿವೆ. ಈ ಮೂಲಕ, ಸಕ್ರಿಯ ಪ್ರಕರಣಗಳ ಸಂಖ್ಯೆ 25,178 ರಿಂದ 22,742 ಕ್ಕೆ ಇಳಿದಿದೆ ಎಂದು ಕೇಂದ್ರ…
ಲಕ್ನೋ: ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ‘ದಿ ಕೇರಳ ಸ್ಟೋರಿ‘ ಸಿನಿಮಾಕ್ಕೆ ಉತ್ತರಪ್ರದೇಶದಲ್ಲಿ ತೆರಿಗೆ ಮುಕ್ತ ಮಾಡಲಿದೆ ಎಂದು ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಯುಪಿಯಲ್ಲಿ ‘ದಿ…