Browsing: ರಾಷ್ಟ್ರೀಯ

ಅಪಹರಣ, ಕೊಲೆ ಪ್ರಕರಣದಲ್ಲಿ ಘಾಜಿಪುರದ ಎಂಪಿ ಎಂಎಲ್‌ಎ ನ್ಯಾಯಾಲಯವು (Ghazipur’s MP MLA court) ಗ್ಯಾಂಗ್​​ಸ್ಟರ್, ಮಾಫಿಯಾ ಮುಖ್ತಾರ್ ಅನ್ಸಾರಿಗೆ (Mukhtar Ansari) 10 ವರ್ಷಗಳ ಜೈಲು ಶಿಕ್ಷೆ ಮತ್ತು ₹ 5 ಲಕ್ಷ ದಂಡ ವಿಧಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.ಅದೇ ವೇಳೆ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಮುಖ್ತಾರ್ ಅನ್ಸಾರಿಯ ಅಣ್ಣ, ಬಿಎಸ್​​ಪಿ ಸಂಸದ ಅಫ್ಜಲ್ ಅನ್ಸಾರಿಯ(Afzal Ansari) ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ. ಜನವರಿಯಲ್ಲಿ ಪೊಲೀಸರು ಮುಖ್ತಾರ್ ಅನ್ಸಾರಿ ವಿರುದ್ಧ 2001 ರ ಉಸ್ರಿ ಚಟ್ಟಿ ಗ್ಯಾಂಗ್​​ವಾರ್ ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣವನ್ನು ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 ರ ಅಡಿಯಲ್ಲಿ ಅನ್ಸಾರಿ ವಿರುದ್ಧ ಗಾಜಿಪುರದ ಮೊಹಮ್ಮದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನವರಿ 18 ರಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಮಾರ್ಚ್ 15 ರಂದು ಗಾಜಿಪುರ ಎಂಪಿ ಎಂಎಲ್​​ಎ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿತು. ಇದು ಅನ್ಸಾರಿಯನ್ನು ಬಂದಾದಲ್ಲಿನ ಉನ್ನತ ದರ್ಜೆಯ ಜೈಲಿನಲ್ಲಿ ಇರಿಸಲು ಅನುಮತಿ ನೀಡಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅನ್ಸಾರಿ ಮತ್ತು ಆತನ ಸಹಾಯಕ ಭೀಮ್ ಸಿಂಗ್‌ಗೆ ಘಾಜಿಪುರದ ಗ್ಯಾಂಗ್​​ಸ್ಟರ್ ನ್ಯಾಯಾಲಯವು ಕೊಲೆ ಮತ್ತು ಕೊಲೆ ಯತ್ನಕ್ಕೆ ಸಂಬಂಧಿಸಿದ ಐದು ಪ್ರಕರಣಗಳಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಈ ಪ್ರಕರಣಗಳಲ್ಲಿ ಕಾನ್‌ಸ್ಟೆಬಲ್ ರಘುವಂಶ್ ಸಿಂಗ್ ಹತ್ಯೆ ಮತ್ತು ಘಾಜಿಪುರದ ಹೆಚ್ಚುವರಿ ಎಸ್‌ಪಿ ಮೇಲೆ ಕೊಲೆಗೈದ ಹಲ್ಲೆ ಪ್ರಕರಣಗಳು ಸೇರಿವೆ.ಸೆಪ್ಟೆಂಬರ್ 21 ರಂದು, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಅನ್ಸಾರಿಯನ್ನು ದೋಷಿ ಎಂದು ಘೋಷಿಸಿತು. ಜೈಲರ್ ಎಸ್‌ಕೆ ಅವಸ್ತಿಗೆ ಬೆದರಿಕೆ ಹಾಕಿದ್ದಕ್ಕಾಗಿ ಮತ್ತು ಅವರತ್ತ ಪಿಸ್ತೂಲ್ ತೋರಿಸಿದ್ದಕ್ಕಾಗಿ ಶಿಕ್ಷೆ ವಿಧಿಸಿತು. ಈ ಪ್ರಕರಣವು 2003 ರಲ್ಲಿ ಲಕ್ನೋ ಜಿಲ್ಲಾ ಕಾರಾಗೃಹದ ಜೈಲರ್ ಎಸ್‌ಕೆ ಅವಸ್ತಿ ಅವರು ಎಫ್‌ಐಆರ್ ದಾಖಲಿಸಿದ್ದು, ಜೈಲಿನಲ್ಲಿ ಅನ್ಸಾರಿ ಅವರನ್ನು ಭೇಟಿಯಾಗಲು ಬಂದ ಜನರನ್ನು ಹುಡುಕಲು ಆದೇಶಿಸುವಂತೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು.1999ರಲ್ಲಿ ಗ್ಯಾಂಗ್ ಸ್ಟರ್ ಕಾಯಿದೆಯಡಿ ದಾಖಲಾದ ಪ್ರಕರಣದಲ್ಲಿ ಲಕ್ನೋ ಪೀಠವು ಸೆಪ್ಟೆಂಬರ್ 23ರಂದು ಆತನಿಗೆ ಐದು ವರ್ಷಗಳ ಶಿಕ್ಷೆ ವಿಧಿಸಿತು. 23 ವರ್ಷಗಳಷ್ಟು ಹಳೆಯದಾದ ಈ ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿಗೆ ನ್ಯಾಯಾಲಯ ₹ 50,000 ದಂಡವನ್ನೂ ವಿಧಿಸಿತ್ತು.

ರಾಷ್ಟ್ರ ರಾಜಧಾನಿಯಲ್ಲಿ ಅಫ್ತಾಬ್ ಪೂನಾವಾಲಾ ತನ್ನ ಲಿವ್‌ ಇನ್‌ ಪಾರ್ಟ್‌ನರ್‌ ಆಗಿದ್ದ ಶ್ರದ್ಧಾ ವಾಕರ್‌ನಲ್ಲಿ ಭೀಕರವಾಗಿ ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿದ್ದ. ಇದೀಗ ಲಿವ್ ಇನ್…

ಹೈದರಾಬಾದ್ : ಆಂಧ್ರಪ್ರದೇಶದ ಮಧ್ಯಂತರ ಪರೀಕ್ಷಾ ಮಂಡಳಿಯು 11 ಮತ್ತು 12 ನೇ ತರಗತಿಯ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಆಂಧ್ರಪ್ರದೇಶದಲ್ಲಿ ಕನಿಷ್ಠ 9 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ…

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7,171 ಹೊಸ ಕೋವಿಡ್ (COVID) ಪ್ರಕರಣಗಳು ಪತ್ತೆಯಾಗಿದ್ದು, 40 ಮಂದಿ ಸಾವನ್ನಪ್ಪಿ ದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.…

ನವದೆಹಲಿ: ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar) ಧರಣಿ ನಡೆಸುತ್ತಿದ್ದ ಮಹಿಳಾ ಕುಸ್ತಿಪಟುಗಳನ್ನು ಶನಿವಾರ…

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ(Uddhav Thackeray) ಅವರು 11 ತಿಂಗಳ ಹಿಂದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಗುಂಪು…

ಲಕ್ನೋ: ಉತ್ತರ ಪ್ರದೇಶದ (Uttar Pradesh) ಕಾಸ್ಪುರ ಹಾಗೂ ಅಲೀಗಢ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಅಲ್ವಿದಾ ಹಾಗೂ ಈದ್- ಉಲ್-ಫಿತ್ (Eid namaz) ಅಂಗವಾಗಿ ನಮಾಜ್‌ ಮಾಡಿದ 1,700…

ಮಹಾರಾಷ್ಟ್ರ: ಯುವಕನೋರ್ವ ಆನ್‌ ಲೈನ್ ವಂಚನೆಗೊಳಗಾಗಿ ಬರೋಬ್ಬರಿ 5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾನೆ.  ಮಹಾರಾಷ್ಟ್ರದ ಥಾಣೆಯ ಯುವಕನೋರ್ವ ಆಫ್ರಿಕಾದ ದೇಶವೊಂದಕ್ಕೆ ಪ್ರವಾಸ ಹೋಗಲು ಟಿಕೆಟ್ ಬುಕ್ ಮಾಡಿ ನಂತರ ಪ್ರವಾಸ ಕ್ಯಾನ್ಸಲ್ ಮಾಡಿದ್ದಾನೆ. ಪ್ರವಾಸ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ಬುಕ್ ಮಾಡಿದ ವಿಮಾನ ಟಿಕೆಟ್‌ಗಳನ್ನು ಕೂಡ ಕ್ಯಾನ್ಸಲ್ ಮಾಡಿದ್ದು, ಇದರಿಂದ ಆತನಿಗೆ ಹಣ ರೀಫಂಡ್ ಆಗಬೇಕಿತ್ತು. ಆದರೆ ರೀಫಂಡ್ ಮಾಡಿಸಿಕೊಳ್ಳುವುದು ಹೇಗೆ ಎಂದು ಗೂಗಲ್‌ನಲ್ಲಿ ಆತ ಹುಡುಕಾಟ ನಡೆಸಿದ್ದಾನೆ. ಈ ವೇಳೆ ಸಿಕ್ಕ ಸರ್ಚ್ ರಿಸಲ್ಟ್‌  ಬಳಸಿಕೊಂಡು ಆತ ರೀಫಂಡ್‌ಗೆ ಯತ್ನಿಸಿದ್ದು, ಮತ್ತೆ 5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾನೆ. ಆತ ನೀಡಿದ ದೂರಿನಲ್ಲಿ ಯುವಕ ಹಾಗೂ ಆತನ ಸ್ನೇಹಿತ ಕೀನ್ಯಾ (Kenya) ದೇಶದ ರಾಜಧಾನಿ ನೈರೋಬಿಗೆ ತೆರಳಲು ಯೋಜನೆ ರೂಪಿಸಿದ್ದರು. ನೈರೋಬಿಯ (Nairobi)  ಮಂಬಸಾ (Mombasa) ನಗರಕ್ಕೆ ಭೇಟಿ ನೀಡಲು ನಿರ್ಧರಿಸಿ  ಏಪ್ರಿಲ್ 29 ಹಾಗೂ ಮೇ 5 ರ ಟಿಕೆಟ್ ಬುಕ್ ಮಾಡಿದ್ದಾರೆ. ಇದಕ್ಕಾಗಿ 1.46 ಲಕ್ಷ ರೂಪಾಯಿಯನ್ನು ಅವರು ಪಾವತಿಸಿದ್ದಾರೆ. ಆದರೆ ನಂತರ ಇವರ ಯೋಜನೆ ಬದಲಾಗಿದ್ದು, ಟಿಕೆಟ್ ಕ್ಯಾನ್ಸಲ್ ಮಾಡಲು ನಿರ್ಧರಿಸಿ ಟಿಕೆಟ್ ಹಣ ರೀಫಂಡ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.  ಅದರಂತೆ ವೆಬ್‌ಸೈಟೊಂದರಲ್ಲಿ ಇದ್ದ ಫಾರ್ಮ್‌ನ್ನು ಏಪ್ರಿಲ್ 11 ರಂದು ಇವರು ತುಂಬಿದ್ದಾರೆ. ಆದರೆ  ಏರ್‌ಲೈನ್ಸ್‌ನ ಸಹಾಯವಾಣಿ  ಸಂಖ್ಯೆ ಕೈಗೆ ಸಿಗದ ಹಿನ್ನೆಲೆಯಲ್ಲಿ ಅವರು  ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದು, ಅಲ್ಲಿದ್ದ ನಂಬರ್ ನೋಡಿದ್ದಾರೆ. ಈ ವೇಳೆ ದೂರವಾಣಿಯಲ್ಲಿ ಆ ಬದಿಯಿಂದ ಮಾತನಾಡಿದವರು ರೀಫಂಡ್ ಮಾಡುವುದಕ್ಕಾಗಿ ನಮ್ಮ ತಾಂತ್ರಿಕ ತಂಡ (technical team) ನಿಮ್ಮನ್ನು ಸಂಪರ್ಕ ಮಾಡಲಿದೆ ಎಂದು ಹೇಳಿದ್ದಾರೆ. ಇದಾದ ಬಳಿಕ ದೂರುದಾರಿಗೆ ಕರೆಯೊಂದು ಬಂದಿದ್ದು, 1.28 ಲಕ್ಷವನ್ನು ಮರಳಿಸುವುದಾಗಿ ಹೇಳಿದ್ದಾರೆ. ಅಲ್ಲದೇ  ಇದಕ್ಕಾಗಿ ಆಪ್‌ (app) ವೊಂದನ್ನು ಡೌನ್‌ಲೋಡ್ ಮಾಡುವಂತೆ ಹೇಳಿದ್ದಾರೆ.  ಆದರಂತೆ ದೂರುದಾರರು ಆಪ್ ಡೌನ್‌ಲೋಡ್ ಮಾಡಿದ್ದು ಇದಾದ ಬಳಿಕ ಫೋನ್‌ನ ಸಂಪೂರ್ಣ ಆಕ್ಸೆಸ್ ಅನ್ನು ಸೈಬರ್ ಕಳ್ಳರು ಪಡೆದಿದ್ದು, ಆತನ ಖಾತೆಯಲ್ಲಿದ್ದ 4.8 ಲಕ್ಷವನ್ನು ಕಬಳಿಸಿದ್ದಾರೆ. ದೂರುದಾರರ ದೂರಿನ ಮೇರೆಗೆ ಛಿತಲ್ಸರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಪುಟ್ಟ ಮಕ್ಕಳಿಗೆ ಹಲವು ಪೌಷ್ಟಿಕ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕೊಡುವುದು ಸಾಮಾನ್ಯವಾಗಿದೆ. ಹೀಗಿರುವಾಗ ದೇಶಾದ್ಯಂತ ಕೋಟ್ಯಂತರ ಮಂದಿ ಸೇವಿಸುವ ಪೌಷ್ಟಿಕ ಹುಡಿ ಬೊರ್ನ್ವಿಟಾವು ಹಾನಿಕಾರಕ ಪದಾರ್ಥಗಳನ್ನು ಒಳಗೊಂಡಿದೆಯೆಂದು ಆರೋಪಗಳ ಬಗ್ಗೆ ಉತ್ತರಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್)ವು, ಉತ್ಪಾದಕಸಂಸ್ಥೆಯಾದ ಮೊಂಡೆಲೆಝ್ ಇಂಡಿಯಾ ಇಂಟರ್ನ್ಯಾಶನಲ್ ಗೆ ಬುಧವಾರ ಪತ್ರ ಬರೆದಿದೆ. ‘ಮಕ್ಕಳು (Children) ಕುಡಿಯುವ ಬೋರ್ನ್‌ವೀಟಾದಲ್ಲಿ ಅಧಿಕ ಸಕ್ಕರೆ ಪ್ರಮಾಣವಿದ್ದು, ಇದು ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತದೆ’ ಎಂಬ ದೂರಿನ ಹಿನ್ನೆಲೆಯಲ್ಲಿ, ತನ್ನ ಎಲ್ಲ ದಾರಿ ತಪ್ಪಿಸುವ ಜಾಹೀರಾತು (Advertisement), ಪ್ಯಾಕೇಜಿಂಗ್‌ ಹಾಗೂ ಲೇಬಲ್‌ಗಳನ್ನು ಹಿಂತೆಗೆದುಕೊಳ್ಳುವಂತೆ ಮಕ್ಕಳ ಹಕ್ಕುಗಳ ಆಯೋಗ ‘ಎನ್‌ಸಿಪಿಸಿಆರ್‌’ ಬೋರ್ನ್‌ವೀಟಾಗೆ ಸೂಚಿಸಿದೆ. ಆಯೋಗವು ಬೌರ್ನ್‌ವೀಟಾಗೆ ನೀಡಿರುವ ನೊಟೀಸ್‌ನಲ್ಲಿ ಉತ್ಪನ್ನದ ಕುರಿತು 7 ದಿನಗಳೊಳಗಾಗಿ ವಿವರವಾದ ಮಾಹಿತಿಯನ್ನು (Information) ನೀಡುವಂತೆ ಸೂಚಿಸಿದೆ. ‘ಬೋರ್ನ್‌ವೀಟಾ ಕೇವಲ ಅಧಿಕ ಸಕ್ಕರೆ ಅಂಶ ಹೊಂದಿದೆ. ಇದರಿಂದ ಮಕ್ಕಳ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಹಾಗೂ ಹಾನಿಕರ’ ಎಂದು ರೇವಂತ್‌ ಹಿಮಂತ್‌ಸಿಂಗ್ಕಾ ಎಂಬುವರು ಆರೋಪಿಸಿದ ವಿಡಿಯೋ ಇತ್ತೀಚೆಗೆ ವೈರಲ್‌ ಆಗಿತ್ತು. ಬೋರ್ನ್‌ವೀಟಾ ನೀಡಿದ ನೋಟಿಸ್‌ ಮೇರೆಗೆ ಹಿಮಂತ್‌ ತಮ್ಮ ಖಾತೆಯಿಂದ ವೀಡಿಯೋವನ್ನು ಅಳಿಸಿ ಹಾಕಿದ್ದರೂ, ಅಷ್ಟೊತ್ತಿಗಾಗಲೇ ಇದು ಸಾಕಷ್ಟುಸುದ್ದಿ ಮಾಡಿತ್ತು. ಗ್ರಾಹಕರನ್ನು ತಪ್ಪುದಾರಿಗೆಳೆಯುವ ಬೊರ್ನ್ವಿಟಾದ ಜಾಹೀರಾತುಗಳು ಹಾಗೂ ಲೇಬಲ್ ಗಳನ್ನು ಪರಿಶೀಲಿಸುವಂತೆ ಮತ್ತು ಹಿಂತೆಗೆದುಕೊಳ್ಳುವಂತೆಯೂ ಅದು ಮೊಂಡೆಲೆಝ್ ಇಂಡಿಯಾಗೆ ಸಲಹೆ ನೀಡಿದೆ

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಯುವಕನೊಬ್ಬ ಹಸ್ತಮೈಥುನ ಮಾಡಿಕೊಂಡಿರುವ ವೀಡಿಯೊ ವೈರಲ್​​ ಆಗಿರುವ ಬಗ್ಗೆ ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಕಳವಳ…